IPL ಕ್ರಿಕೆಟ್ ಇತಿಹಾಸದಲ್ಲಿ ಯಾರಿಂದಲೂ ಬ್ರೇಕ್ ಮಾಡಲು ಸಾಧ್ಯವಾಗದ ಆ 5 ದಾಖಲೆಗಳು ಯಾವುವು ಗೊತ್ತಾ?
ಇಂಡಿಯನ್ ಪ್ರೀಮಿಯರ್ ಲೀಗ್ ಆಯೋಜನೆಗೊಂಡಾಗಲೆಲ್ಲಾ ಅದೆಷ್ಟೋ ಹೊಸ ದಾಖಲೆಗಳು ನಿರ್ಮಾಣವಾಗುವ ಜೊತೆಗೆ ಕೆಲವೊಂದಿಷ್ಟು ಮಹಾ ದಾಖಲೆಗಳು ಬ್ರೇಕ್ ಆಗೋದು ಸಾಮಾನ್ಯ. ಆದರೆ ನಾವಿಂದು ಈ ವರದಿಯಲ್ಲಿ ಐಪಿಎಲ್ ಕ್ರಿಕೆಟ್ ಇತಿಹಾಸದಲ್ಲಿ ಯಾರೊಬ್ಬರೂ ಬ್ರೇಕ್ ಮಾಡಲು ಸಾಧ್ಯವಾಗದ ಕೆಲ ದಾಖಲೆಗಳ ಬಗ್ಗೆ ಮಾಹಿತಿ ನೀಡಲಿದ್ದೇವೆ.
2016ರ ಐಪಿಎಲ್’ನಲ್ಲಿ ಒಂದೇ ಒಂದು ಹೆಸರು ಪ್ರತಿಧ್ವನಿಸುತ್ತಿತ್ತು. ಅದು ವಿರಾಟ್ ಕೊಹ್ಲಿಯ ಹೆಸರು. ಅಂದು RCB ನಾಯಕತ್ವ ವಹಿಸಿಕೊಂಡಿದ್ದ ವಿರಾಟ್, ಐಪಿಎಲ್ ಋತುವಿನಲ್ಲಿ ಬೌಲರ್’ಗಳನ್ನು ಬ್ಯಾಟ್ ಮೂಲಕ ಬೆಂಡೆತ್ತಿದ್ದರು. ಅಷ್ಟೇ ಅಲ್ಲದೆ, ಐಪಿಎಲ್ ಇತಿಹಾಸದ ಒಂದು ಋತುವಿನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಕೀರ್ತಿಗೆ ಕೊಹ್ಲಿ ಭಾಜನರಾದರು. 2016ರ ಐಪಿಎಲ್ ಋತುವಿನಲ್ಲಿ ಆಡಿದ 16 ಪಂದ್ಯಗಳಲ್ಲಿ 975 ರನ್ ಗಳಿಸಿದ್ದರು. ಆ ಋತುವಿನಲ್ಲಿ ಕೊಹ್ಲಿ ಒಬ್ಬರೇ 4 ಶತಕಗಳನ್ನು ಗಳಿಸಿದ್ದರು. ಆದರೆ, ಆರ್’ಸಿಬಿ ತಂಡ ಪ್ರಶಸ್ತಿ ಗೆಲ್ಲುವಲ್ಲಿ ವಿಫಲವಾಯಿತು.
ಅದು 23 ಏಪ್ರಿಲ್ 2013. ಅಂದು ಕ್ರಿಕೆಟ್ ಮೈದಾನದಲ್ಲಿ ರನ್’ಗಳ ಬಿರುಗಾಳಿ ಎದ್ದಿತ್ತು. ಪುಣೆ ವಾರಿಯರ್ಸ್ ಇಂಡಿಯಾ ವಿರುದ್ಧ ಗೇಲ್ ಏಕಾಂಗಿಯಾಗಿ 175 ರನ್’ಗಳ ಬಿರುಸಿನ ಇನ್ನಿಂಗ್ಸ್ ಆಡಿದ್ದರು. ಇದು ಐಪಿಎಲ್ ಇತಿಹಾಸದಲ್ಲಿ ಅವರ ಗರಿಷ್ಠ ವೈಯಕ್ತಿಕ ಸ್ಕೋರ್ ಆಗಿದ್ದು, ಇದುವರೆಗೂ ಯಾರೂ ಈ ದಾಖಲೆಯನ್ನು ಮುರಿಯಲು ಸಾಧ್ಯವಾಗಿಲ್ಲ.
ಮಹೇಂದ್ರ ಸಿಂಗ್ ಧೋನಿ ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್ ಐಪಿಎಲ್’ನಲ್ಲಿ ಯಾವುದೇ ತಂಡಕ್ಕೆ ಸರಿಸಾಟಿಯಾಗದಂತಹ ದಾಖಲೆಯನ್ನು ಹೊಂದಿದೆ. ಅಂದರೆ ಚೆನ್ನೈ ತಂಡ ಐಪಿಎಲ್ ಇತಿಹಾಸದಲ್ಲಿ ಅತಿ ಹೆಚ್ಚು ಬಾರಿ ಪ್ಲೇ ಆಫ್ ತಲುಪಿದ ತಂಡವಾಗಿದೆ.
2017 ರಲ್ಲಿ RCB ಐಪಿಎಲ್ ಇತಿಹಾಸದಲ್ಲಿ ಅತ್ಯಂತ ಕಡಿಮೆ ಸ್ಕೋರ್ ಮಾಡಿತ್ತು. ಕೋಲ್ಕತ್ತಾ ನೈಟ್ ರೈಡರ್ಸ್ ಆರ್‌ಸಿಬಿಯನ್ನು ಕೇವಲ 49 ರನ್’ಗಳಿಗೆ ಆಲೌಟ್ ಮಾಡಿತ್ತು. ಇದು ಕಳಪೆ ದಾಖಲೆಯಾಗಿದ್ದು ಒಂದೆಡೆಯಾದ್ರೆ, ಐಪಿಎಲ್ ಇತಿಹಾಸದಲ್ಲಿ ಇದುವರೆಗಿನ ಅತ್ಯಂತ ಕಡಿಮೆ ಸ್ಕೋರ್ ಆಗಿದೆ.
ಕ್ರಿಸ್ ಗೇಲ್ ಐಪಿಎಲ್ 2011ರಲ್ಲಿ ಒಂದೇ ಓವರ್‌ನಲ್ಲಿ 37 ರನ್ ಗಳಿಸಿದ್ದರು. ಕೊಚ್ಚಿ ಟಸ್ಕರ್ಸ್ ಕೇರಳ ವಿರುದ್ಧ ಒಂದು ಓವರ್‌ನಲ್ಲಿ 37 ರನ್ ಗಳಿಸಿದರು. ಇದುವರೆಗಿನ ಐಪಿಎಲ್ ಇತಿಹಾಸದಲ್ಲೇ ಅತ್ಯಂತ ದುಬಾರಿ ಓವರ್ ಇದಾಗಿದೆ.