PHOTOS: ಲಾಕ್‌ಡೌನ್ ಪರಿಣಾಮದಿಂದಾಗಿ ಈಗ ಈ ನಗರದಿಂದ ಸ್ವಚ್ಚಂದವಾಗಿ ಕಾಣುತ್ತೆ ಗಂಗೋತ್ರಿ

Thu, 30 Apr 2020-11:05 am,

ಕೊರೋನಾವೈರಸ್ ಮಟ್ಟಹಾಕುವ ನಿಟ್ಟಿನಲ್ಲಿ ಜಾರಿಗೆ ತರಲಾದ ಲಾಕ್‌ಡೌನ್  ಪರಿಸರ ಮಾಲಿನ್ಯದ ಮೇಲೆ ಹೆಚ್ಚಿನ ಪರಿಣಾಮ ಬೀರಿದೆ.

ಅಂತಹ ಪರಿಸ್ಥಿತಿಯಲ್ಲಿ ಉತ್ತರ ಪ್ರದೇಶದ ಸಹರಾನ್ಪುರದಿಂದ ಹಿಮದಿಂದ ಆವೃತವಾದ ಪರ್ವತ ಶ್ರೇಣಿಯ ನೈಸರ್ಗಿಕ,  ಅಲೌಕಿಕ ಮತ್ತು ಅದ್ಭುತ ನೋಟಗಳು ಈಗ ಗೋಚರಿಸ ತೊಡಗಿವೆ.

ಚಿತ್ರಗಳನ್ನು ನೋಡಿ, ಇದು ಸಹರಾನ್‌ಪುರದಿಂದ ಚಿತ್ರಿಸಿದ ಸುಂದರವಾದ ಬೆಟ್ಟಗಳಿಂದ ಕೂಡಿದೆ ಎಂದು ತೋರುತ್ತಿಲ್ಲ. ಈ ಚಿತ್ರಗಳಲ್ಲಿ ಮುಚ್ಚಿದ ಹಿಮದಲ್ಲಿ ಗಂಗೋತ್ರಿ ಬೆಟ್ಟಗಳು ಸುಂದರವಾಗಿ ಕಾಣುತ್ತವೆ. 100 ಕಿಲೋಮೀಟರ್ ದೂರದಲ್ಲಿರುವ ಈ ಗಂಗೋತ್ರಿ ಬೆಟ್ಟಗಳನ್ನು ಸಹರಾನ್‌ಪುರದಿಂದ ನೋಡಲಾಗುವುದು, ಅದೂ ಸಹ ಹಿಮದಿಂದ ಆವೃತವಾಗಿದೆ ಎಂದು ಯಾರೂ ಊಹಿಸಿರಲಿಲ್ಲ.

ಈ ಸುಂದರ ದೃಶ್ಯವನ್ನು ಆದಾಯ ತೆರಿಗೆ ಇಲಾಖೆ ಅಧಿಕಾರಿ ದುಶ್ಯಂತ್ ಕುಮಾರ್ ಅವರು ತಮ್ಮ ಹೆಂಡತಿಯೊಂದಿಗೆ ತಮ್ಮ ಮನೆಯ ಮೇಲ್ಛಾವಣಿಯಿಂದ ಕ್ಯಾಮೆರಾದಲ್ಲಿ ಸೆರೆಹಿಡಿದಿದ್ದಾರೆ. ಈಗ ಈ ಚಿತ್ರಗಳು ಚರ್ಚೆಯ ವಿಷಯವಾಗಿ ಉಳಿದಿವೆ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link