ಬಂದಿದೆ Thursday` dating app : ವಾರಕ್ಕೆ ಒಂದು ದಿನ ಮಾತ್ರ ಕಾರ್ಯ ನಿರ್ವಹಿಸಲಿದೆ ಈ ಆಪ್
ಈ ಐಟಿ ಕಂಪನಿಯು ಟಿಂಡರೆಲ್ಲಾ ಎಂದು ಕರೆಯಲ್ಪಡುವ ಈ ಅಪ್ಲಿಕೇಶನ್ ಅನ್ನು ರಚಿಸಿದ .ಇದಕ್ಕೆ , 'Thursday' ಎಂದು ಹೆಸರಿಸಲಾಗಿದೆ. ಕಂಪನಿಯು 'Thursday' ಎಂದು ಹೆಸರಿಟ್ಟಿರುವ ಹಿಂದೆಯೂ ಕಾರಣವಿದೆ. ಹೆಸರೇ ಸೂಚಿಸುವಂತೆ ಈ ಆಪ್ ಗುರುವಾರ ಮಾತ್ರ ಕಾರ್ಯನಿರ್ವಹಿಸುತ್ತದೆ. ಕಂಪನಿ ಪ್ರಕಾರ ಜನರು ವಾಋದ ಳು ದಿನವೂ ಡೆಟಿಂಗ್ ನಲ್ಲಿ ಕಾಲ ಕಳೆಯುವಂತಾಗಬಾರದು. ಡೇಟಿಂಗ್ ಹೊರತಾಗಿಯೂ ಜೀವನದಲ್ಲಿ ಬೇರೆ ಕಾರ್ಯಗಳಿರುತ್ತವೆ.
ಕಂಪನಿಯು ಇದೀಗ ಈ ಅಪ್ಲಿಕೇಶನ್ ಅನ್ನು ಲಂಡನ್ ಮತ್ತು ನ್ಯೂಯಾರ್ಕ್ನಲ್ಲಿ ಬಿಡುಗಡೆ ಮಾಡಿದೆ. ಬಹ ಳ ಕಡಿಮೆ ಸಮಯದಲ್ಲಿ, Thursday' ಹೆಸರಿನ ಈ ಅಪ್ಲಿಕೇಶನ್ ಬಹಳ ಜನಪ್ರಿಯವಾಗಿದೆ. ಇದುವರೆಗೆ ಬಹಳಷ್ಟು ಸಂಖ್ಯೆಯಲ್ಲಿ ಜನರು ಈ ಆಪ್ ಅನ್ನು ಡೌನ್‌ಲೋಡ್ ಮಾಡಿದ್ದಾರೆ. ಉಳಿದ ಡೆಟಿಂಗ್ ಆಪ್ ನಲ್ಲಿ ಜನ ಸಂಗಾತಿಗಾಗಿ ಹುಡಿಕಾಟ ನಡೆಸುತ್ತಾರೆ. ಕೊನಗೆ ಸಂಗಾತಿ ಸಿಗದೆ ನಿರಾಸೆಗೊಳ್ಳುತ್ತಾರೆ. ಈ ಅಪ್ಲಿಕೇಶನ್ ಈ ಸಮಸ್ಯೆಯನ್ನು ತೊಡೆದುಹಾಕುತ್ತದೆ ಎಂದು ಕಂಪನಿ ಹೇಳಿದೆ.
ಒಂಟಿಯಾಗಿರುವುದು ಅಪರಾಧವಲ್ಲ ಎಂದು ಕಂಪನಿ ಸ್ಪಷ್ಟವಾಗಿ ಹೇಳಿದೆ. ಅಂತಹ ಪರಿಸ್ಥಿತಿಯಲ್ಲಿ, ಜನರು ಡೇಟಿಂಗ್ ಅಪ್ಲಿಕೇಶನ್‌ನಲ್ಲೇ ಹೆಚ್ಚು ಸಮಯ ಕಳೆಯುತ್ತಿದ್ದರೆ, ನೈಜ ಜಗತ್ತಿನಿಂದ ದೂರ ಉಳಿಯುತ್ತಾರೆ. ಈ ಕಾರಣದಿಂದಲೇ ಈ ಆಪ್ ಗುರುವಾರ ಮಾತ್ರ ಕಾರ್ಯನಿರ್ವಹಿಸುತ್ತದೆ. ಅಲ್ಲದೆ, ಕಂಪನಿಯು ಗೌಪ್ಯತೆ ನೀತಿಗೆ ಹೆಚ್ಚಿನ ಒತ್ತು ನೀಡುತ್ತಿದೆ.
ಈ ಅಪ್ಲಿಕೇಶನ್ ಪ್ರಸ್ತುತ ಲಂಡನ್ ಮತ್ತು ನ್ಯೂಯಾರ್ಕ್ನಲ್ಲಿ ಮಾತ್ರ ಕಾರ್ಯನಿರ್ವಹಿಸುತ್ತಿದ್ದರೂ, ಶೀಘ್ರದಲ್ಲೇ ಇದನ್ನು ಡಬ್ಲಿನ್, ಕಾರ್ಡಿಫ್ ಮತ್ತು ಗ್ಲ್ಯಾಸ್ಗೋದಂತಹ ನಗರಗಳಿಗೆ ವಿಸ್ತರಿಸಲಾಗುವುದು ಎಂದು ಲಂಡನ್ ಮೂಲದ ಕಂಪನಿ ಹೇಳಿದೆ. ಈ ಅಪ್ಲಿಕೇಶನ್‌ನ 1 ಲಕ್ಷ 10 ಸಾವಿರಕ್ಕೂ ಹೆಚ್ಚು ಜನ ಡೌನ್ ಲೋಡ್ ಮಾಡಿದ್ದಾರೆ ಎಂದು ಕಂಪನಿ ತಿಳಿಸಿದೆ.