RCB ತೊರೆದ ಬಳಿಕ IPLನಲ್ಲಿ ಅರಳಿತು ಈ ಮೂವರು ಸ್ಟಾರ್ ಕ್ರಿಕೆಟಿಗರ ಅದೃಷ್ಟ!

Wed, 15 Mar 2023-3:23 pm,

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿ ಪ್ರತಿಭೆಗಳಿಗಾಗಲಿ, ಅಭಿಮಾನಿಗಳಿಗಾಗಲಿ ಕೊರತೆ ಇಲ್ಲ. ಆದರೆ ಈ ತಂಡ ಇಲ್ಲಿಯವರೆಗೆ ಟ್ರೋಫಿ ಎತ್ತಿಹಿಡಿಯುವಲ್ಲಿ ವಿಫಲವಾಗಿದೆ. ಇದರ ಜೊತೆಗೆ ಆರ್ ಸಿ ಬಿ ಬಿಟ್ಟ ಬಳಿಕ ಕೆಲವು ಆಟಗಾರರ ಅದೃಷ್ಟ ಹೂವಿನಂತೆ ಅರಳಿತ್ತು. ಅಂತಹ ಮೂವರು ಆಟಗಾರರ ಬಗ್ಗೆ ಇಂದು ತಿಳಿದುಕೊಳ್ಳೋಣ.

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿ ವಿರಾಟ್ ಕೊಹ್ಲಿ, ಎಬಿ ಡಿವಿಲಿಯರ್ಸ್ ಮತ್ತು ಕ್ರಿಸ್ ಗೇಲ್ ಅವರಂತಹ ಸ್ಟಾರ್ ಆಟಗಾರರಿದ್ದರು.

2008 ರಲ್ಲಿ ರಾಜಸ್ಥಾನ್ ರಾಯಲ್ಸ್ ಜೊತೆಗಿನ IPLನ ಮೊದಲ ಋತುವಿನಲ್ಲಿ ಆಸ್ಟ್ರೇಲಿಯಾದ ಆಲ್-ರೌಂಡರ್ ಶೇನ್ ವ್ಯಾಟ್ಸನ್‌ ಅದ್ಭುತ ಪ್ರದರ್ಶನವನ್ನು ನೀಡಿದ್ದರು. 2016 ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಶೇನ್ ವ್ಯಾಟ್ಸನ್‌ರನ್ನು ಖರೀದಿ ಮಾಡಿತು. ಆದರೆ ಈ ಪಂದ್ಯದಲ್ಲಿ ಅವರು ಹೇಳಿಕೊಳ್ಳುವ ಸಾಧನೆ ಮಾಡಿರಲಿಲ್ಲ. ಎರಡೂ ಋತುಗಳ 24 ಪಂದ್ಯಗಳಲ್ಲಿ ಕೇವಲ 250 ರನ್ ಗಳಿಸಲು ಸಾಧ್ಯವಾಯಿತು. ಈ ಬಳಿಕ ಚೆನ್ನೈ ಸೂಪರ್ ಕಿಂಗ್ಸ್ ಅವರನ್ನು 2018 ರಲ್ಲಿ ಖರೀದಿಸಿತು. ಈ ತಂಡಕ್ಕೆ ಬಂದ ಬಳಿಕ ಅವರ IPL ವೃತ್ತಿಜೀವನವು ಮತ್ತೊಂದು ಧನಾತ್ಮಕ ತಿರುವು ಪಡೆದುಕೊಂಡಿತು. ಕೇವಲ 15 ಪಂದ್ಯಗಳಲ್ಲಿ 555 ರನ್‌ಗಳೊಂದಿಗೆ ತಮ್ಮ ಅತ್ಯುತ್ತಮ ಋತುವನ್ನು ಆನಂದಿಸಿದರು.

RCB 2018 ರಲ್ಲಿ ಕ್ವಿಂಟನ್ ಡಿ ಕಾಕ್ ಅವರನ್ನು ರೂ 2.8 ಕೋಟಿ ನೀಡಿ ಸ್ವಾಧೀನಪಡಿಸಿಕೊಂಡಿತು. ಅವರು ಅದಾಗಲೇ ವಿಶ್ವದ ಅತ್ಯುತ್ತಮ ವೈಟ್-ಬಾಲ್ ವಿಕೆಟ್-ಕೀಪರ್ ಬ್ಯಾಟರ್‌ಗಳಲ್ಲಿ ಒಬ್ಬರಾಗಿ ತಮ್ಮನ್ನು ತಾವು ಗುರುತಿಸಿಕೊಂಡಿದ್ದರು. 2016 ರಲ್ಲಿ, ಅವರು ದೆಹಲಿ ಪರ ಆಡುವಾಗ 13 ಪಂದ್ಯಗಳಲ್ಲಿ 445 ರನ್ಗಳನ್ನು ಗಳಿಸಿದರು. ಆದರೆ, ಆರ್‌ಸಿಬಿ ಜತೆ ಉತ್ತಮ ಬಾಂಧವ್ಯ ಹೊಂದಿರಲಿಲ್ಲ. ತಂಡವು ಬ್ರೆಂಡನ್ ಮೆಕಲಮ್’ಗೆ ಹೆಚ್ಚಿನ ಆದ್ಯತೆ ನೀಡಿದ ಕಾರಣ, ಕೇವಲ ಎಂಟು ಪಂದ್ಯಗಳನ್ನು ಆಡುವ ಅವಕಾಶ ಪಡೆದರು. ಇದರಲ್ಲಿ ಕೇವಲ 201 ರನ್ ಗಳಿಸಲು ಸಾಧ್ಯವಾಯಿತು. 2019 ರಲ್ಲಿ, ಅವರನ್ನು ಮುಂಬೈ ಇಂಡಿಯನ್ಸ್‌ ಖರೀದಿಸಿ ಉತ್ತಮ ಅವಕಾಶ ನೀಡಿತು. ಆ ಬಳಿಕ 16 ಪಂದ್ಯಗಳಲ್ಲಿ 529 ರನ್ ಗಳಿಸಿದರು.

ಕೆ ಎಲ್ ರಾಹುಲ್ ಸನ್‌ರೈಸರ್ಸ್ ಹೈದರಾಬಾದ್‌’ನಿಂದ ಖರೀದಿಸಲ್ಪಟ್ಟರೂ ಸಹ ಉತ್ತಮ ಆಟವಾಡುವಲ್ಲಿ ವಿಫಲರಾದರು. ಆ ಬಳಿಕ 2016ರಲ್ಲಿ ಬೆಂಗಳೂರು ತಂಡಕ್ಕೆ ಮರಳಿದ್ದರು. ಬಲಗೈ ಆಟಗಾರ 2016 ರಲ್ಲಿ ನಾಲ್ಕು ಅರ್ಧಶತಕಗಳೊಂದಿಗೆ 397 ರನ್ ಗಳಿಸಿ ಯೋಗ್ಯವಾದ ಅಭಿಯಾನವನ್ನು ಆರಂಭಿಸಿದರು. ಆದರೆ ಭುಜದ ಗಾಯದಿಂದ 2017 ರಲ್ಲಿ ಹೊರಗುಳಿದ ನಂತರ ಅವರನ್ನು ತಂಡದಿಂದ ಬಿಡುಗಡೆ ಮಾಡಲಾಯಿತು. 2018 ರಲ್ಲಿ, ಕಿಂಗ್ಸ್ XI ಪಂಜಾಬ್ ಅವರನ್ನು ಆಯ್ಕೆ ಮಾಡಲು ರೂ. 11 ಕೋಟಿಯನ್ನು ಖರ್ಚು ಮಾಡಿತು. ಈ ಋತುವಿನ ಮೊದಲ ಪಂದ್ಯದಲ್ಲಿ ಅವರು ಐಪಿಎಲ್‌ನಲ್ಲಿ ಅತಿ ವೇಗದ ಅರ್ಧಶತಕ ಸಿಡಿಸಿದ್ದರು. 14 ಪಂದ್ಯಗಳಲ್ಲಿ 55 ರ ಸರಾಸರಿಯಲ್ಲಿ 659 ರನ್ ಗಳಿಸಿದರು. ಪ್ರಸ್ತುತ ಲಕ್ನೋ ಸೂಪರ್ ಜೈಂಟ್ಸ್ ನಾಯಕರಾಗಿದ್ದಾರೆ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link