ಈ ದಿನಾಂಕದಲ್ಲಿ ಜನಿಸಿದವರು ಕುಬೇರನ ಕುಲದವರು.. ಹೆಣ್ಣಾಗಿ ಹುಟ್ಟಿದರೆ ಅದೃಷ್ಟ ಲಕ್ಷ್ಮೀಯೇ ಮನೆಗೆ ಬಂದಂತೆ, ಮದುವೆಯಾದ ಗಂಡನ ಪಾಲಿಗೂ ಭಾಗ್ಯದೇವತೆ.. ಇವರಿದ್ದಲ್ಲಿ ಸಿರಿ ಸಂಪತ್ತಿಗೆ ಕೊರತೆ ಬಾರದು!
ಸಂಖ್ಯಾಶಾಸ್ತ್ರದಲ್ಲಿ ಹುಟ್ಟಿದ ದಿನದ ಆಧಾರದ ಮೇಲೆ ವ್ಯಕ್ತಿಯ ವ್ಯಕ್ತಿತ್ವವನ್ನು, ಭವಿಷ್ಯವನ್ನು ತಿಳಿಯಲಾಗುತ್ತದೆ. ಅವರ ಸ್ವಭಾವ ಮತ್ತು ಜಾತಕ ಕೂಡ ತಿಳಿಯಬಹುದು.
ವ್ಯಕ್ತಿಯ ಜನ್ಮ ದಿನಾಂಕದ ಮೊತ್ತವನ್ನು ರಾಡಿಕ್ಸ್ ಎಂದು ಕರೆಯುತ್ತಾರೆ. ಉದಾಹರಣೆಗೆ, ಯಾವುದೇ ತಿಂಗಳ 8, 17 ಮತ್ತು 26 ರಂದು ಜನಿಸಿದವರ ಮೂಲಾಂಕ 8. ಸಂಖ್ಯಾಶಾಸ್ತ್ರದಲ್ಲಿ ಶನಿಯನ್ನು ರಾಡಿಕ್ಸ್ 8 ರ ಅಧಿಪತಿ ಎನ್ನಲಾಗುತ್ತದೆ.
ಮೂಲಾಂಕ 8 ರಲ್ಲಿ ಜನಿಸಿದವರ ಮೇಲೆ ಶನಿದೇವನ ವಿಶೇಷ ಅನುಗ್ರಹವಿರುತ್ತದೆ. ಇದರ ಜೊತೆಗೆ ಕುಬೇರನ ಆಶೀರ್ವಾದದಿಂದ ಈ ರಾಶಿಯವರು ಸಿರಿವಂತಿಕೆ ಪಡೆಯುವರು. ಅದರ ಪರಿಣಾಮವು ಅವರ ವ್ಯಕ್ತಿತ್ವದ ಮೇಲೂ ಕಂಡುಬರುತ್ತದೆ.
ರಾಡಿಕ್ಸ್ 8 ರಲ್ಲಿ ಜನಿಸಿದವರು ಕಷ್ಟಪಟ್ಟು ಕೆಲಸ ಮಾಡುವ ಶ್ರಮಜೀವಿಗಳು. ತಮ್ಮನ್ನು ನಂಬಿದವರಿಗೆ ಪ್ರಾಮಾಣಿಕರಾಗಿರುತ್ತಾರೆ. ಕಷ್ಟದಲ್ಲಿ ಜನಿಸಿದರು ದೊಡ್ಡ ಯಶಸ್ಸನ್ನು ಪಡೆಯುತ್ತಾರೆ.
ಜೀವನದ ಆರಂಭದ ವರ್ಷಗಳಲ್ಲಿ ಇವರಿಗೆ ಕಷ್ಟ ತಪ್ಪಿದ್ದಲ್ಲ. ಆದರೆ 30 ವರ್ಷದ ಬಳಿಕ ಪ್ರಗತಿ, ಉನ್ನತ ಸ್ಥಾನ, ಗೌರವ ಮತ್ತು ಅಪಾರ ಹಣ ಇವರನ್ನು ಹುಡುಕಿ ಬರುವುದು. ಎಷ್ಟೇ ಬಡ ಕುಟುಂಬದಲ್ಲಿ ಹುಟ್ಟಿದ್ದರೂ ಶ್ರೀಮಂತಿಕೆ ಪಡೆಯುತ್ತಾರೆ.
ರಾಡಿಕ್ಸ್ 8 ರ ಜನರು ಗಂಭೀರ ಸ್ವಭಾದವರಾಗಿರುತ್ತಾರೆ. ಮೃದು ಹೃದಯಿಗಳಾಗಿದ್ದು, ಕಷ್ಟದಲ್ಲಿರುವವರಿಗೆ ಸಹಾಯ ಮಾಡಲು ಸದಾ ಮುಂದಿರುತ್ತಾರೆ. ಯಾವ ಕೆಲಸ ಕೊಟ್ಟರೂ ಶೃದ್ದೆಯಿಂದ ಮಾಡಿ ಮುಗಿಸುತ್ತಾರೆ.
ತಮ್ಮ ಮನಸ್ಸಿನಲ್ಲಿ ಏನಿದೆ ಎನ್ನುವುದನ್ನು ಯಾರೊಂದಿಗೂ ಸುಲಭಕ್ಕೆ ಹಂಚಿ ಕೊಳ್ಳುವುದಿಲ್ಲ. ವ್ಯಾಪಾರದಲ್ಲಿಯೂ ಸಹ ಯಶಸ್ವಿಯಾಗುತ್ತಾರೆ. ಕಬ್ಬಿಣ, ರಿಯಲ್ ಎಸ್ಟೇಟ್, ನಿರ್ಮಾಣದಂತಹ ಕ್ಷೇತ್ರಗಳು ಇವರಿಗೆ ದೊಡ್ಡ ಯಶಸ್ಸನ್ನು ನೀಡುತ್ತವೆ.
ಯಾವುದೇ ತಿಂಗಳ 8, 17 ಮತ್ತು 26 ರಂದು ಜನಿಸಿದ ಹೆಣ್ಣು ಮಕ್ಕಳು ಅದೃಷ್ಟ ದೇವತೆಯಂತೆ. ಇವರು ಹುಟ್ಟಿದ ಮನೆಯಲ್ಲಿ ಲಕ್ಷ್ಮೀ ನೆಲೆಸುತ್ತಾಳೆ. ಮದುವೆಯಾದ ಮೇಲೆ ಗಂಡನ ಭಾಗ್ಯದ ಬಾಗಿಲು ತೆರೆಯುತ್ತದೆ.
ಇವರು ಇದ್ದ ಮನೆಯಲ್ಲಿ ಸಂಪತ್ತಿಗೆ ಯಾವ ಕೊರತೆಯೂ ಬರುವುದಿಲ್ಲ. ಹಣ, ಹೊನ್ನು, ಧನ ಧಾನ್ಯ ಸದಾ ತುಂಬಿರುತ್ತದೆ. ಇವರು ಯಾರಿಗೂ ಕಪಟ ಬಯಸದ ಪ್ರಿಯ ಜೀವಿಗಳು.
ಸೂಚನೆ : ಇಲ್ಲಿ ನೀಡಲಾದ ಲೇಖನವು ಸಾಮಾನ್ಯ ಮಾಹಿತಿ ಮತ್ತು ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.