2023 ರ ಅದೃಷ್ಟದ ರಾಶಿಗಳು ಇವು. ! ಮೊದಲ ದಿನದಿಂದಲೇ ಸಿಗುವುದು ಯಶಸ್ಸು

Mon, 28 Nov 2022-11:37 am,

ವೃಷಭ ರಾಶಿ : ವೃಷಭ ರಾಶಿಯವರಿಗೆ 2023 ರ ವರ್ಷವು ಅದ್ಭುತವಾಗಿರಲಿದೆ. ಜನವರಿ ಆರಂಭದಲ್ಲಿಯೇ ಹೊಸ ಉದ್ಯೋಗವನ್ನು ಪಡೆಯಬಹುದು. ಬಹಳ ಸಮಯದಿಂದ ಕಾಯುತ್ತಿದ್ದ  ಶುಭ ಸುದ್ದಿ ಜನವರಿ 2023 ರಲ್ಲಿ ಸಿಗಲಿದೆ. ಭವಿಷ್ಯದಲ್ಲಿ ವೃತ್ತಿಜೀವನದ ಪ್ರಗತಿಗೆ ಹೊಸ ಅವಕಾಶಗಳು ಸಿಗಲಿವೆ.  ಆದಾಯ ಹೆಚ್ಚಲಿದೆ. ಆರ್ಥಿಕ ಪರಿಸ್ಥಿತಿಯಲ್ಲಿ ಸುಧಾರಣೆ ಕಂಡುಬರಲಿದೆ.  ವ್ಯಾಪಾರದಲ್ಲಿಯೂ ಲಾಭ ಕಂಡು ಬರಲಿದೆ. ಅವಿವಾಹಿತರಿಗೆ   ವಿವಾಹ ಯೋಗ ಕೂಡಿ ಬರಲಿದೆ. ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದು ಮುಖ್ಯ. ಕೌಟುಂಬಿಕ ಜೀವನ ಸುಖಮಯವಾಗಿರುತ್ತದೆ. 

ಸಿಂಹ ರಾಶಿ : 2023ರ ಆರಂಭದಿಂದ ಸಿಂಹ ರಾಶಿಯವರಿಗೆ ಲಾಭವಾಗಲಿದೆ.  ಶನಿ ಗ್ರಹದ ಸಂಚಾರದಿಂದ ಜೀವನದಲ್ಲಿ ಸಕಾರಾತ್ಮಕತೆ ಇರಲಿದೆ. ಕೆಲವು ದೊಡ್ಡ ಯಶಸ್ಸಿನೊಂದಿಗೆ ವರ್ಷ ಆರಂಭವಾಗಲಿದೆ. ಏನೇ ಕೆಲಸ ಮಾಡಿದರೂ ಯಶಸ್ಸು ಸಿಗಲಿದೆ. ಸಂಬಳ ಹೆಚ್ಚಾಗುವ ಸಾಧ್ಯತೆ ಇದೆ.  ಸರ್ಕಾರಿ ವಲಯಕ್ಕೆ ಸಂಬಂಧಿಸಿದ ಜನರಿಗೆ, ಏಪ್ರಿಲ್‌ನಿಂದ ಅದ್ಭುತ ಸಮಯ ಪ್ರಾರಂಭವಾಗುತ್ತದೆ.   

ತುಲಾ ರಾಶಿ : 2023 ರಲ್ಲಿ ತುಲಾ ರಾಶಿಯವರ ಅದೃಷ್ಟವೇ ಬದಲಾಗಲಿದೆ.   ವರ್ಷದ ಆರಂಭದಲ್ಲಿ, ಕೆಲವು ಒಳ್ಳೆಯ ಸುದ್ದಿಗಳನ್ನು ಸ್ವೀಕರಿಸಬಹುದು. ನೀವು ಎದುರಿಸುತ್ತಾ ಬಂದಿರುವ ಸಮಸ್ಯೆಗಳಿಗೆ  ಅಂತ್ಯ ಸಿಗಬಹುದು. ಆರ್ಥಿಕ ಪರಿಸ್ಥಿತಿ ಸುಧಾರಿಸಲಿದೆ. ಹೂಡಿಕೆಗೆ ಉತ್ತಮ ಸಮಯ. ಕೌಟುಂಬಿಕ ಜೀವನವೂ ಉತ್ತಮವಾಗಿರುತ್ತದೆ. 

ವೃಶ್ಚಿಕ ರಾಶಿ : ವೃಶ್ಚಿಕ ರಾಶಿಯವರಿಗೆ ಇಡೀ ವರ್ಷ 2023 ಅದ್ಭುತವಾಗಿರಲಿದೆ. ಈ ವರ್ಷ ಅವರಿಗೆ ಉತ್ತಮ ಪ್ರಗತಿ, ಹಣ, ಸಂತೋಷ ಮತ್ತು ಎಲ್ಲವೂ ಸಿಗಲಿದೆ. ವಿಶೇಷವಾಗಿ ವರ್ಷದ ಆರಂಭದ ತಿಂಗಳುಗಳು ಮಂಗಳಕರವಾಗಿರುತ್ತದೆ. ಆದಾಯ ಹೆಚ್ಚಲಿದೆ.  ಅದರೊಂದಿಗೆ ಖರ್ಚು ಕೂಡ ಹೆಚ್ಚಾಗಲಿದೆ. 2023 ವರ್ಷವು ಉದ್ಯೋಗ-ವ್ಯವಹಾರಕ್ಕೆ ಉತ್ತಮವಾಗಿರುತ್ತದೆ. 

ಕುಂಭ ರಾಶಿ : ಹಣದ ವಿಷಯದಲ್ಲಿ 2023 ರಲ್ಲಿ ಏರಿಳಿತಗಳು ಕಂಡುಬರುತ್ತವೆ. ಆದರೆ ಅಂತಿಮವಾಗಿ  ಭಾರೀ ಲಾಭವಾಗಲಿದೆ. ಆದಾಯ ಹೆಚ್ಚಾಗಲಿದೆ. ಹಣಕಾಸಿನ  ವ್ಯವಹಾರವನ್ನು ಉತ್ತಮವಾಗಿ ನಿರ್ವಹಿಸಿದರೆ  ಉತ್ತಮ ಬ್ಯಾಂಕ್ ಬ್ಯಾಲೆನ್ಸ್  ಸಾಧ್ಯವಾಗುತ್ತದೆ. ವೃತ್ತಿಜೀವನದಲ್ಲಿ ಸಾಧನೆ ಮಾಡಲು ಉತ್ತಮ ಅವಕಾಶ. 

( ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.)

ZEENEWS TRENDING STORIES

By continuing to use the site, you agree to the use of cookies. You can find out more by Tapping this link