Lucky Zodiac sign: ಈ 6 ರಾಶಿಯವರಿಗೆ ಮಾರ್ಚ್ ತಿಂಗಳೇ ಅದೃಷ್ಟ: ಲಾಭ-ಪ್ರಗತಿಯ ಜೊತೆ ಪ್ರತಿ ಕೆಲಸದಲ್ಲೂ ಸಿಗಲಿದೆ ಯಶಸ್ಸು

Thu, 22 Feb 2024-5:09 am,

ಮಾರ್ಚ್ 7 ರಂದು, ಶುಕ್ರವು ಕುಂಭದಲ್ಲಿ ಸಾಗಿದರೆ, ಈಗಾಗಲೇ ಈ ರಾಶಿಯಲ್ಲಿ ಇರುವ ಶನಿ ಮತ್ತು ಸೂರ್ಯನ ಜೊತೆ ಸಂಯೋಗ ಉಂಟಾಗಲಿದೆ. ಇದರ ನಂತರ, ಮಾರ್ಚ್ 14 ರಂದು ಸೂರ್ಯನು ಮೀನ ರಾಶಿಗೆ ಸಾಗಲಿದ್ದಾನೆ, ಅಲ್ಲಿ ಬುಧ ಗ್ರಹದೊಂದಿಗೆ ಸಂಯೋಗ ಇರುತ್ತದೆ.

ಮಾರ್ಚ್ 15 ರಂದು, ಮಂಗಳವು ಕುಂಭ ರಾಶಿಗೆ ಸಾಗಲಿದ್ದು, ಅಲ್ಲಿ ಈಗಾಗಲೇ ಶುಕ್ರ ಮತ್ತು ಶನಿ ಗ್ರಹದ ಜೊಯೆ ಯುತಿ ಉಂಟಾಗಲಿದೆ. ಗ್ರಹಗಳ ಸ್ಥಾನಗಳ ನಡುವೆ, ಮಾರ್ಚ್ ತಿಂಗಳನ್ನು 6 ರಾಶಿಗಳಿಗೆ ಬಹಳ ವಿಶೇಷವೆಂದು ಪರಿಗಣಿಸಲಾಗಿದೆ. ಅಂತಹ ಅದೃಷ್ಟಶಾಲಿ ರಾಶಿಗಳು ಯಾವುವು ಎಂದು ತಿಳಿದುಕೊಳ್ಳೋಣ.

ವೃಷಭ ರಾಶಿ: ಈ ರಾಶಿಯ ಜನರು ಫೆಬ್ರವರಿ ತಿಂಗಳಲ್ಲಿ ಗ್ರಹಗಳ ಬದಲಾವಣೆಯಿಂದ ಅನೇಕ ಪ್ರಯೋಜನಗಳನ್ನು ಪಡೆಯಲಿದ್ದಾರೆ. ಕುಟುಂಬದೊಂದಿಗೆ ಸಂತೋಷದಿಂದ ಸಮಯ ಕಳೆಯಲು ಅವಕಾಶವಿರುತ್ತದೆ. ವಿದ್ಯಾರ್ಥಿಗಳು ಶಿಕ್ಷಕರಿಂದ ಬೆಂಬಲವನ್ನು ಪಡೆಯುತ್ತಾರೆ. ಹೊಸ ಉದ್ಯೋಗವನ್ನು ಹುಡುಕುತ್ತಿರುವ ಉದ್ಯೋಗಿಗಳಿಗೆ ಮಾರ್ಚ್ ತಿಂಗಳಲ್ಲಿ ಉತ್ತಮ ಆದಾಯದ ಪ್ರಸ್ತಾಪವನ್ನು ಪಡೆಯಬಹುದು, ಆರ್ಥಿಕ ಪರಿಸ್ಥಿತಿಯೂ ಸುಧಾರಿಸುತ್ತದೆ.

ಕರ್ಕಾಟಕ: ಮಾರ್ಚ್ ತಿಂಗಳಿನಲ್ಲಿ ಕರ್ಕಾಟಕ ರಾಶಿಯವರಿಗೆ ಗ್ರಹಗಳ ರಾಶಿ ಬದಲಾವಣೆಯಿಂದ ಶುಭ ಫಲಗಳು ಸಿಗುತ್ತವೆ. ಉನ್ನತ ಶಿಕ್ಷಣ ಅಥವಾ ಉದ್ಯೋಗಕ್ಕಾಗಿ ವಿದೇಶಕ್ಕೆ ಹೋಗಲು ಬಯಸುವ ಆಸೆ ಈಡೇರುತ್ತದೆ. ಆರ್ಥಿಕ ಅಂಶವು ಮೊದಲಿಗಿಂತ ಬಲವಾಗಿರುತ್ತದೆ. ಲಾಭದ ಜೊತೆಗೆ, ನಿಮ್ಮ ಮನಸ್ಸು ಅನೇಕ ರೀತಿಯ ಹೂಡಿಕೆಗಳತ್ತ ಆಕರ್ಷಿತವಾಗುತ್ತದೆ.

ಸಿಂಹ ರಾಶಿ: ಮಾರ್ಚ್ ತಿಂಗಳಲ್ಲಿ, ಸಿಂಹ ರಾಶಿಯ ಜನರು ಗ್ರಹಗಳ ರಾಶಿ ಬದಲಾವಣೆಯಿಂದ ಅದೃಷ್ಟವನ್ನು ಪಡೆಯುತ್ತಾರೆ ಮತ್ತು ಜೀವನದ ಎಲ್ಲಾ ಅಂಶಗಳಲ್ಲಿ ಪ್ರಗತಿ ಇರುತ್ತದೆ. ಸಂಗಾತಿಯೊಂದಿಗಿನ ಸಂಬಂಧವು ಬಲಗೊಳ್ಳುತ್ತದೆ. ಮಾನಸಿಕ ಶಾಂತಿ, ಸಂತೋಷ ಮತ್ತು ಸಕಾರಾತ್ಮಕ ಚಿಂತನೆಯನ್ನು ಹೆಚ್ಚಿಸುತ್ತಾರೆ. ಅದೃಷ್ಟ ಮತ್ತು ಆನಂದದಾಯಕವಾಗಿರುತ್ತದೆ.

ಕನ್ಯಾ ರಾಶಿ: ಮಾರ್ಚ್‌’ನಲ್ಲಿ ಗ್ರಹಗಳ ರಾಶಿ ಬದಲಾವಣೆಯಿಂದಾಗಿ ಕನ್ಯಾ ರಾಶಿಯವರಿಗೆ ಜೀವನದಲ್ಲಿ ನಡೆಯುತ್ತಿರುವ ಅಡೆತಡೆಗಳು ದೂರವಾಗುತ್ತವೆ ಮತ್ತು ಆದಾಯದಲ್ಲಿ ಹೆಚ್ಚಳವಾಗುವ ಸಾಧ್ಯತೆಯಿದೆ. ಪ್ರತಿ ಹಂತದಲ್ಲೂ ಕುಟುಂಬದಿಂದ ಬೆಂಬಲವನ್ನು ಪಡೆಯುತ್ತೀರಿ. ಸೌಕರ್ಯಗಳಲ್ಲಿ ಉತ್ತಮ ಹೆಚ್ಚಳ ಕಂಡುಬರುತ್ತದೆ. ಶಿಕ್ಷಣದಲ್ಲಿ ಉತ್ತಮ ಸಾಧನೆ ಮಾಡಲು ಸಾಧ್ಯವಾಗುತ್ತದೆ.

ವೃಶ್ಚಿಕ ರಾಶಿ: ಮಾರ್ಚ್ ತಿಂಗಳಲ್ಲಿ ಗ್ರಹಗಳ ರಾಶಿ ಬದಲಾವಣೆಯಿಂದ ವೃಶ್ಚಿಕ ರಾಶಿಯ ಜನರು ಸರ್ವತೋಮುಖ ಅಭಿವೃದ್ಧಿ ಹೊಂದುತ್ತಾರೆ. ಕಾರ್ಯಗಳನ್ನು ಸಮಯಕ್ಕೆ ಸರಿಯಾಗಿ ಪೂರ್ಣಗೊಳಿಸಲು ಸಾಧ್ಯವಾಗುತ್ತದೆ. ಉದ್ಯೋಗದಲ್ಲಿರುವ ಜನರು ಈ ತಿಂಗಳು ಕೆಲಸದ ಸ್ಥಳದಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಾರೆ. ಕುಟುಂಬದ ಯಾವುದೇ ಸದಸ್ಯರೊಂದಿಗೆ ನೀವು ಸೈದ್ಧಾಂತಿಕ ಭಿನ್ನಾಭಿಪ್ರಾಯಗಳನ್ನು ಹೊಂದಿದ್ದರೆ, ಈ ತಿಂಗಳು ಅವುಗಳನ್ನು ಪರಿಹರಿಸಬಹುದು.

ಕುಂಭ ರಾಶಿ: ಮಾರ್ಚ್‌ನಲ್ಲಿ ಗ್ರಹಗಳ ರಾಶಿ ಬದಲಾವಣೆಯಿಂದಾಗಿ, ಕುಂಭ ರಾಶಿಯ ಜನರು ಎಲ್ಲಾ ಸಮಸ್ಯೆಗಳನ್ನು ಧೈರ್ಯದಿಂದ ಎದುರಿಸುತ್ತಾರೆ. ವ್ಯಾಪಾರಸ್ಥರು ಈ ತಿಂಗಳು ವ್ಯವಹಾರದಲ್ಲಿ ಉತ್ತಮ ಲಾಭವನ್ನು ಪಡೆಯುತ್ತಾರೆ. ಪರೀಕ್ಷೆಗೆ ತಯಾರಿ ನಡೆಸುತ್ತಿರುವ ವಿದ್ಯಾರ್ಥಿಗಳು ಈ ತಿಂಗಳು ಶುಭ ಫಲಿತಾಂಶಗಳನ್ನು ಪಡೆಯುತ್ತಾರೆ, ಕುಟುಂಬಕ್ಕೆ ಕೀರ್ತಿ ತರುತ್ತದೆ.

(ಸೂಚನೆ- ಈ ಲೇಖನದಲ್ಲಿ ನೀಡಲಾಗಿರುವ ಯಾವುದೇ ಮಾಹಿತಿಯ ನಿಖರತೆ ಅಥವಾ ಸ್ಪಷ್ಟತೆಯನ್ನು ಜೀ ಕನ್ನಡ ನ್ಯೂಸ್ ಖಚಿತಪಡಿಸುವುದಿಲ್ಲ. ಜೋತಿಷಿಗಳು, ಪಂಚಾಂಗ, ಮಾನ್ಯತೆಗಳು ಅಥವಾ ಧರ್ಮ ಗ್ರಂಥಗಳಂತಹ ವಿವಿಧ ಮಾಧ್ಯಮಗಳಿಂದ ಸಂಗ್ರಹಿಸಲಾಗಿರುವ ಮಾಹಿತಿಯನ್ನು ನಿಮ್ಮ ಬಳಿ ತಲುಪಿಸುವುದು ಮಾತ್ರ ನಮ್ಮ ಉದ್ದೇಶವಾಗಿದೆ. ಈ ಮಾಹಿತಿಯ ನೈಜತೆ ಹಾಗೂ ಸ್ಪಷ್ಟತೆಯನ್ನು ಖಚಿತಪಡಿಸಲಾಗುವುದಿಲ್ಲ. ಹೀಗಾಗಿ ಯಾವುದೇ ರೀತಿಯಲ್ಲಿ ಈ ಮಾಹಿತಿಯನ್ನು ಬಳಸುವ ಮುನ್ನ ಸಂಬಂಧಿತ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ) 

ZEENEWS TRENDING STORIES

By continuing to use the site, you agree to the use of cookies. You can find out more by Tapping this link