September 2022: ಈ 7 ರಾಶಿಗಳ ಪಾಲಿಗೆ ತುಂಬಾ ಲಕ್ಕಿ ಸಾಬೀತಾಗಲಿದೆ ಈ ತಿಂಗಳು, ಸೆ.17ಕ್ಕೆ ಮಹಾ ಬದಲಾವಣೆ!
ಮಿಥುನ ರಾಶಿ- ತಿಂಗಳ ಆರಂಭದಲ್ಲಿ ಮನಸ್ಸು ಸಂತೋಷದಿಂದ ಕೂಡಿರುತ್ತದೆ. ಆತ್ಮವಿಶ್ವಾಸವೂ ಇರುತ್ತದೆ. ಆದರೆ ತಾಳ್ಮೆಯಿಂದಿರಿ. ಅನಗತ್ಯ ವಿವಾದಗಳನ್ನು ತಪ್ಪಿಸಿ. ಉದ್ಯೋಗದಲ್ಲಿ ಅಧಿಕಾರಿಗಳ ಬೆಂಬಲ ಸಿಗಲಿದೆ. ನೀವು ವಿದೇಶ ಪ್ರವಾಸಕ್ಕೂ ಹೋಗಬಹುದು. ಕೆಲಸದ ವ್ಯಾಪ್ತಿಯಲ್ಲಿ ಹೆಚ್ಚಳವಾಗಬಹುದು. ಹೆಚ್ಚು ಪರಿಶ್ರಮ ಇರಲಿದೆ. ನಿಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ. ಕುಟುಂಬದ ಬೆಂಬಲ ಸಿಗಲಿದೆ. ವ್ಯಾಪಾರ ವೃದ್ಧಿಯಾಗಲಿದೆ. ಲಾಭದ ಅವಕಾಶಗಳೂ ಇರಲಿವೆ
ಕರ್ಕ ರಾಶಿ- ತಿಂಗಳ ಆರಂಭದಲ್ಲಿ ಹೆಚ್ಚಿನ ಆತ್ಮವಿಶ್ವಾಸ ಇರಲಿದೆ. ಸಮಚಿತ್ತದಿಂದಿರಿ. ಅನಗತ್ಯ ಕೋಪ ಮತ್ತು ವಾದಗಳನ್ನು ತಪ್ಪಿಸಿ. ಕುಟುಂಬದಲ್ಲಿ ಧಾರ್ಮಿಕ ಕಾರ್ಯಗಳು ನಡೆಯಬಹುದು. ಸೆಪ್ಟೆಂಬರ್ 17 ರೊಳಗೆ, ವಯಸ್ಸಾದ ವ್ಯಕ್ತಿಯಿಂದ ನೀವು ಹಣವನ್ನು ಪಡೆಯಬಹುದು. ಸೆಪ್ಟೆಂಬರ್ 18 ರಿಂದ ವ್ಯಾಪಾರದಲ್ಲಿ ವೃದ್ಧಿ ಇರಲಿದೆ, ಆದರೆ ಸಾಕಷ್ಟು ಪರಿಶ್ರಮ ಇರಲಿದೆ. ಕೆಲವು ತೊಂದರೆಗಳೂ ಇರಬಹುದು. ನೀವು ಶೈಕ್ಷಣಿಕ ಕೆಲಸದಲ್ಲಿ ಯಶಸ್ಸನ್ನು ಪಡೆಯುವಿರಿ. ನಿಮಗೆ ಸ್ನೇಹಿತರ ಬೆಂಬಲ ಸಿಗಲಿದೆ.
ವೃಶ್ಚಿಕ ರಾಶಿ- ನೀವು ಆತ್ಮವಿಶ್ವಾಸದಿಂದ ತುಂಬಿರುವಿರಿ. ತಿಂಗಳ ಆರಂಭದಲ್ಲಿ ನೀವು ಧಾರ್ಮಿಕ ಸ್ಥಳಕ್ಕೆ ಹೋಗಬಹುದು. ಉದ್ಯೋಗಕ್ಕಾಗಿ ಯಾವುದೇ ಪರೀಕ್ಷೆ ಮತ್ತು ಸಂದರ್ಶನ ಇತ್ಯಾದಿಗಳಿದ್ದರೆ, ನೀವು ಯಶಸ್ಸನ್ನು ಪಡೆಯುತ್ತೀರಿ. ಆದಾಯ ಹೆಚ್ಚಾಗಲಿದೆ. ಸೆಪ್ಟೆಂಬರ್ 17ರ ನಂತರ ತಾಳ್ಮೆ ಕಡಿಮೆಯಾಗಬಹುದು. ವ್ಯಾಪಾರಕ್ಕಾಗಿ ತಂದೆಯಿಂದ ಹಣವನ್ನು ಪಡೆಯಬಹುದು. ವ್ಯಾಪಾರ ವೃದ್ಧಿಯಾಗಲಿದೆ. ಲಾಭದ ಅವಕಾಶಗಳಿರುತ್ತವೆ.
ಧನು ರಾಶಿ- ತಿಂಗಳ ಆರಂಭದಲ್ಲಿ ಮನಸ್ಸು ಸಂತೋಷದಿಂದ ಕೂಡಿರುತ್ತದೆ. ಆತ್ಮವಿಶ್ವಾಸ ಹೇರಳವಾಗಿರುತ್ತದೆ. ಆದರೆ ನಕಾರಾತ್ಮಕತೆಯು ಮನಸ್ಸಿನ ಮೇಲೆ ಪರಿಣಾಮ ಬೀರುತ್ತದೆ. ಕುಟುಂಬದ ಬೆಂಬಲ ಸಿಗಲಿದೆ. ವ್ಯಾಪಾರ ವೃದ್ಧಿಯಾಗಲಿದೆ. ನೀವು ವ್ಯಾಪಾರಕ್ಕಾಗಿ ವಿದೇಶಿ ಪ್ರವಾಸಕ್ಕೆ ಹೋಗಬಹುದು. ಪ್ರಯಾಣದಿಂದ ಲಾಭದಾಯಕವಾಗಲಿದೆ. ಹೆಚ್ಚು ಪರಿಶ್ರಮ ಇರಲಿದೆ. ಮಗುವಿನ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ. ಸೆಪ್ಟೆಂಬರ್ 17 ರಿಂದ, ವಿಪರೀತ ಓಡಾಟ ಇರಲಿದೆ. ಜೀವನ ನಡೆಸುವುದು ಕಷ್ಟಕರವಾಗಬಹುದು.
ಮಕರ ರಾಶಿ - ಆತ್ಮವಿಶ್ವಾಸ ಮತ್ತು ಸ್ವಯಂ ಸಂಯಮದಿಂದಿರಿ. ಕೋಪವನ್ನು ತಪ್ಪಿಸಿ. ವ್ಯಾಪಾರ ವೃದ್ಧಿಯಾಗಲಿದೆ. ಸೆಪ್ಟೆಂಬರ್ 17 ರಿಂದ ವ್ಯವಹಾರದಲ್ಲಿ ಹೆಚ್ಚಿನ ಶ್ರದ್ಧೆ ಇರಲಿದೆ. ಉದ್ಯೋಗದಲ್ಲಿ ಬದಲಾವಣೆಗೆ ಅವಕಾಶಗಳಿವೆ. ಸ್ನೇಹಿತರ ಬೆಂಬಲವನ್ನು ಸಹ ಪಡೆಯುವಿರಿ. ಆದಾಯ ಹೆಚ್ಚಾಗಲಿದೆ. ವಾಹನ ಆನಂದದಲ್ಲಿ ಇಳಿಕೆಯಾಗಬಹುದು. ವಾಹನ ನಿರ್ವಹಣೆಗೆ ಖರ್ಚು ಹೆಚ್ಚಾಗಬಹುದು. ಜೀವನ ಅಸ್ತವ್ಯಸ್ತವಾಗಲಿದೆ.
ಕುಂಭ ರಾಶಿ- ತಿಂಗಳ ಆರಂಭದಲ್ಲಿ ಮನಸ್ಸು ಚಂಚಲವಾಗಿರುತ್ತದೆ. ನಿಮ್ಮ ಭಾವನೆಗಳನ್ನು ನಿಯಂತ್ರಣದಲ್ಲಿಡಿ. ಕುಟುಂಬದಲ್ಲಿ ಧಾರ್ಮಿಕ ಕಾರ್ಯಗಳು ನಡೆಯಬಹುದು. ಯೋಜನೇತರ ವೆಚ್ಚಗಳು ಹೆಚ್ಚಾಗಲಿವೆ. ಸಿಹಿ ಆಹಾರದಲ್ಲಿ ಆಸಕ್ತಿ ಹೆಚ್ಚಾಗಬಹುದು. ಉದ್ಯೋಗದಲ್ಲಿ ಅಧಿಕಾರಿಗಳ ಬೆಂಬಲ ಸಿಗಲಿದೆ. ಪ್ರಗತಿಯ ಹಾದಿ ಸುಗಮವಾಗಲಿದೆ. ಆದಾಯ ಹೆಚ್ಚಾಗಲಿದೆ. ವಾಹನ ಆನಂದ ಹೆಚ್ಚಾಗಬಹುದು. ಸೆಪ್ಟೆಂಬರ್ 17 ರ ನಂತರ ಕಾರ್ಯ ಕ್ಷೇತ್ರದಲ್ಲಿ ಬದಲಾವಣೆ ಕಂಡುಬರಲಿದೆ.
ಮೀನ ರಾಶಿ- ಆತ್ಮವಿಶ್ವಾಸ ಹೇರಳವಾಗಿರುತ್ತದೆ. ಆದರೆ ನಿಮ್ಮ ಮನಸ್ಸಿನಲ್ಲಿ ನಕಾರಾತ್ಮಕ ಆಲೋಚನೆಗಳನ್ನು ತಪ್ಪಿಸಿ. ತಿಂಗಳ ಆರಂಭದಲ್ಲಿ ಮಗುವಿನ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ. ಶೈಕ್ಷಣಿಕ ಕೆಲಸದಲ್ಲಿ ತೊಂದರೆ ಉಂಟಾಗಬಹುದು, ಎಚ್ಚರದಿಂದಿರಿ. ಉದ್ಯೋಗದಲ್ಲಿ ಅಧಿಕಾರಿಗಳ ಬೆಂಬಲ ಸಿಗಲಿದೆ. ಪ್ರಗತಿಯ ಅವಕಾಶಗಳು ಹೆಚ್ಚಾಗಲಿವೆ. ಕೆಲಸದ ಹೊರೆ ಹೆಚ್ಚಾಗಲಿದೆ. ಪರಿಶ್ರಮದ ಹೊತೆಗೆ ಆದಾಯವೂ ಹೆಚ್ಚಾಗಲಿದೆ. ಸೆಪ್ಟೆಂಬರ್ 17 ರ ನಂತರ ತಾಳ್ಮೆಯಿಂದಿರಿ. ಸ್ನೇಹಿತರ ಸಹಾಯದಿಂದ ಉದ್ಯೋಗಾವಕಾಶಗಳು ಪ್ರಾಪ್ತಿಯಾಗಲಿವೆ.