Lunar Eclipse 2024: 100 ವರ್ಷಗಳ ಬಳಿಕ ಹೋಳಿ ಹಬ್ಬದ ದಿನ ವಿಶೇಷ ಕಾಕತಾಳೀಯ, ಈ ಜನರ ಮೇಲೆ ಭಾರಿ ಕನಕವೃಷ್ಟಿ!

Mon, 26 Feb 2024-9:00 pm,

Lunar Eclipse 2024 / Holi 2024: ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ಈ ಬಾರಿ ಹೋಳಿ ಹುಣ್ಣಿವೆಯ ದಿನ ಚಂದ್ರಗ್ರಹಣ ಸಂಭವಿಸುತ್ತಿದೆ. ಈ ಚಂದ್ರ ಗ್ರಹಣದಿಂದ ಕೆಲ ರಾಶಿಗಳ ಜನರ ಭಾಗ್ಯ ಚಿನ್ನದಂತೆ ಹೊಳೆಯಲಿದೆ. (Spiritual News In Kannada)  

ಮೇಷ ರಾಶಿ: ಈ ಬಾರಿಯ ಚಂದ್ರ ಗ್ರಹಣ ಮೇಷ ರಾಶಿಯ ಜಾತಕದವರಿಗೆ ಅತ್ಯಂತ ಲಾಭದಾಯಕ ಸಾಬೀತಾಗಲಿದೆ. ಇದರಿಂದ ನಿಮ್ಮ ಭಾಗ್ಯೋದಯ ಪಕ್ಕಾ ಎನ್ನಲಾಗುತ್ತಿದೆ. ನೀವು ಅಂದುಕೊಂಡ ಯೋಜನೆಗಳು ಪೂರ್ಣಗೊಳ್ಳಲಿವೆ. ಈ ಅವಧಿಯಲ್ಲಿ ನಿಮಗೆ ಸಾಕಷ್ಟು ಆಕಸ್ಮಿಕ ಧನಲಾಭವಾಗಲಿದ್ದು, ಜೊತೆಗೆ ಕೆಲಸದಲ್ಲಿಯೂ ಕೂಡ ಯಶಸ್ಸು ಸಿಗುವ ಉನ್ನತ ಸಂಕೇತಗಳಿವೆ. ಬಾಳಸಂಗಾತಿಯ ಜೊತೆಗಿನ ನಿಮ್ಮ ಸಂಬಂಧದಲ್ಲಿ ಸುಮಧುರತೆ ಇರಲಿದ್ದು, ಚಂದ್ರ ಗ್ರಹಣದ ಬಳಿಕ ಮಕ್ಕಳ ಕಡೆಯಿಂದ ನಿಮಗೆ ಶುಭ ಸುದ್ದಿ ಪ್ರಾಪ್ತಿಯಾಗಬಹುದು.   

ಕರ್ಕ ರಾಶಿ: ಕರ್ಕ ರಾಶಿಯ ಜನರ ಪಾಲಿಗೆ ಈ ಚಂದ್ರಗ್ರಹಣ ಸಾಕಷ್ಟು ಅನುಕೂಲಕರವಾಗಿರಲಿದೆ. ಈ ಅವಧಿಯಲ್ಲಿ ನೀವು ಪ್ರಾಪರ್ಟೀ, ವಾಹನ ಖರೀದಿಸುವ ಸಾಧ್ಯತೆ ಇದೆ. ಸ್ಥಾನಮಾನದ ಜೊತೆಗೆ ಪ್ರತಿಷ್ಠೆ ಕೂಡ ಹೆಚ್ಚಾಗಲಿದೆ. ವೃತ್ತಿ ಜೀವನದ ಕುರಿತು ಹೇಳುವುದಾದರೆ, ಕಾರ್ಯಕ್ಷೇತ್ರದ ವಿಷಯದಲಿ ಸಂತುಷ್ಟಿ ನಿಮ್ಮದಾಗಲಿದೆ. ಕೆಲಸ ಕಾರ್ಯಗಳ ನಿಮಿತ್ತ ಯಾತ್ರೆ ಸಂಭವಿಸುವ ಸಾಧ್ಯತೆ ಇದ್ದು, ಈ ಅವಧಿಯಲ್ಲಿ ನೀವು ಸಾಕಷ್ಟು ಹಣ ಉಳಿತಾಯ ಮಾಡುವಲ್ಲಿ ಯಶಸನ್ನು ಸಾಧಿಸುವಿರಿ. ವ್ಯಾಪಾರಿಗಳಿಗೂ ಕೂಡ ವ್ಯಾಪಾರದಲ್ಲಿ ಅನುಕೂಲಕರ ಫಲಿತಾಂಶಗಳು ಪ್ರಾಪ್ತಿಯಾಗಲಿವೆ.   

ಕನ್ಯಾ ರಾಶಿ: ಚಂದ್ರ ಗ್ರಹಣ ಕನ್ಯಾ ರಾಶಿಗಳ ಜನರ ಜೀವನದಲ್ಲಿ ಒಳ್ಳೆಯ ದಿನಗಳ ಆರಂಭಕ್ಕೆ ಕಾರಣವಾಗಲಿದೆ. ಈ ಅವಧಿಯಲ್ಲಿ ನಿರುದ್ಯೋಗಿಗಳಿಗೆ ನೌಕರಿಯ ಹೊಸ ಅವಕಾಶಗಳು ಒದಗಿ ಬರಲಿವೆ. ಜೊತೆಗೆ ವ್ಯಕ್ತಿತ್ವದಲ್ಲಿ ಹೊಸ ಹೊಳಪು ಕಾಣಲು ಸಿಗಲಿದೆ. ಈ ಅವಧಿಯಲ್ಲಿ ನಿಮ್ಮ ಮಾತಿನಲ್ಲಿ ಪ್ರಭಾವ ಕಾಣಲು ಸಿಗಲಿದ್ದು, ಜನರು ನಿಮ್ಮಿಂದ ಪ್ರಭಾವಿತರಾಗಲಿದ್ದಾರೆ. ಈ ಅವಧಿಯಲ್ಲಿ ಬಾಳಸಂಗಾತಿಯ ಜೊತೆಗೆ ನಿಮ್ಮ ಸಂಬಂಧದಲ್ಲಿ ಸಾಕಷ್ಟು ಸುಧಾರಣೆಯನ್ನು ನೀವು ಕಾಣಬಹುದು. ಈ ಅವಧಿಯಲ್ಲಿ ನಿಮಗೆ ನಿಮ್ಮ ಪಾಟ್ನರ್ಶಿಪ್ ಕೆಲಸದಲ್ಲಿಯೂ ಕೂಡ ಅಪಾರ ಯಶಸ್ಸು ಸಿಗಲಿದೆ.   

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಯಾವುದೇ ಮಾಹಿತಿಯ ನಿಖರತೆ ಅಥವಾ ಸ್ಪಷ್ಟತೆಯನ್ನು ಜೀ ಕನ್ನಡ ನ್ಯೂಸ್ ಖಚಿತಪಡಿಸುವುದಿಲ್ಲ. ಜೋತಿಷಿಗಳು, ಪಂಚಾಂಗ, ಮಾನ್ಯತೆಗಳು ಅಥವಾ ಧರ್ಮ ಗ್ರಂಥಗಳಂತಹ ವಿವಿಧ ಮಾಧ್ಯಮಗಳಿಂದ ಸಂಗ್ರಹಿಸಲಾಗಿರುವ ಮಾಹಿತಿಯನ್ನು ನಿಮ್ಮ ಬಳಿ ತಲುಪಿಸುವುದು ಮಾತ್ರ ನಮ್ಮ ಉದ್ದೇಶವಾಗಿದೆ. ಈ ಮಾಹಿತಿಯ ನೈಜತೆ ಹಾಗೂ ಸ್ಪಷ್ಟತೆಯನ್ನು ಖಚಿತಪಡಿಸಲಾಗುವುದಿಲ್ಲ. ಹೀಗಾಗಿ ಯಾವುದೇ ರೀತಿಯಲ್ಲಿ ಈ ಮಾಹಿತಿಯನ್ನು ಬಳಸುವ ಮುನ್ನ ಸಂಬಂಧಿತ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ)  

ZEENEWS TRENDING STORIES

By continuing to use the site, you agree to the use of cookies. You can find out more by Tapping this link