2024ರ ಆರಂಭವಾಗುತ್ತಿದ್ದಂತೆಯೇ ಈ ರಾಶಿಯವರಿಗೆ ಗುರು ದೆಸೆ ! ಸಂಪತ್ತಿಗೆ ಇರುವುದಿಲ್ಲ ಕೊರತೆ ! ಕೈ ಹಿಡಿದು ನಡೆಸುವಳು ಮಹಾಲಕ್ಷ್ಮೀ

Wed, 08 Nov 2023-12:22 pm,

ಗುರು  ಗ್ರಹ ಎಂದರೆ ಸಂತೋಷ, ಸಂಪತ್ತು, ಹೆಮ್ಮೆ ಮತ್ತು ಸಮೃದ್ಧಿಯ ಪ್ರತೀಕ. ಯಾರ ಮೇಲೆ ಗುರು ಗ್ರಹದ ಅನುಗ್ರಹವಿರುವುದೋ ಅವರು ಜೀವನದಲ್ಲಿ ಬಹಳ ಎತ್ತರಕ್ಕೆ ಏರುವುದು ಸಾಧ್ಯವಾಗುತ್ತದೆ. 

ರಾಶಿಯವರ ಮೇಲೆ ಪರಿಣಾಮ : ಗುರು ಹಿಮ್ಮುಖ ನಡೆಯನ್ನು ಕೊನೆಗೊಳಿಸುತ್ತಿರುವುದು ಎಲ್ಲಾ ರಾಶಿಯವರ ಮೇಲೇ ಪರಿಣಾಮ ಬೀರುತ್ತದೆ.  ಆದರೆ ಕೆಲವು ರಾಶಿಯವರು ಅದರಿಂದ ಅದ್ಭುತ ಪ್ರಯೋಜನಗಳನ್ನು ಪಡೆಯುತ್ತಾರೆ.   

ಮೇಷ ರಾಶಿ :  ಹೊಸ ವರ್ಷ ಅಂದರೆ 2024 ಆರಂಭವಾಗುತ್ತಿದ್ದಂತೆಯೇ ಮೇಷ ರಾಶಿಯವರ ಬಾಳಲ್ಲಿ ಎಲ್ಲವೂ ಶುಭಾವಾಗಿರಲಿದೆ. ಮೇಷ ರಾಶಿಯವರ ಮೇಲೆ ಗುರು ಗ್ರಹದ ವಿಶೇಷ ಅನುಗ್ರಹವಿರುತ್ತದೆ.  ಅವರ ಗೌರವ, ಮತ್ತು ಪ್ರತಿಷ್ಠೆ ಹೆಚ್ಚಾಗುತ್ತದೆ. ಗುರು ಲಗ್ನದ ಮನೆಗೆ ಪ್ರವೇಶಿಸುವುದರಿಂದ ಅವಿವಾಹಿತರಿಗೆ ವೈವಾಹಿಕ ಯೋಗ ಕೂಡಿ ಬರುತ್ತದೆ. ಅನಿರೀಕ್ಷಿತ ಹಣ ಹರಿದು ಬರುವುದು.

ಸಿಂಹ ರಾಶಿ : 2024 ರಲ್ಲಿ, ಸಿಂಹ ರಾಶಿಯವರು ವೃತ್ತಿ ಮತ್ತು ವ್ಯಾಪಾರ ಎರಡರಲ್ಲೂ ಯಶಸ್ವಿ ಕಾಣುತ್ತಾರೆ. ಗುರು ಗ್ರಹದ ಅನುಗ್ರಹದಿಂದ ಸಿಂಹ ರಾಶಿಯವರಿಗೆ ಅದೃಷ್ಟದ ಬೆಂಬಲ ದೊರೆಯಲಿದೆ. ಎಲ್ಲಾ ಕೆಲಸ ಕಾರ್ಯಗಳಲ್ಲಿ ಇವರದ್ದೇ ಮೇಲು ಗೈ. ಕೈ ಹಾಕಿದ ಪ್ರತಿ ಕೆಲಸವೂ ಕೈ ಗೂಡುವುದು. 

ಧನು ರಾಶಿ : 2024 ರಲ್ಲಿ, ಧನು ರಾಶಿಯ ಮಕ್ಕಳಿಗೆ ಪ್ರಗತಿಯ ಹಾದಿಗಳು ತೆರೆದುಕೊಳ್ಳುತ್ತವೆ. ಪ್ರೀತಿ ಪ್ರೇಮದಲ್ಲಿದ್ದವರಿಗೆ ವಿವಾಹವಾಗುವ ಸಾಧ್ಯತೆ ಇದೆ. ಈ ರಾಶಿಯವರು 2024ರಲ್ಲಿ ವಾಹನ ಅಥವಾ ಆಸ್ತಿಯನ್ನು ಖರೀದಿಸಬಹುದು. ಅವರಿಗೆ ಸಕಲ ಸೌಕರ್ಯಗಳೂ ಸಿಗುತ್ತವೆ. ಧನು ರಾಶಿಯವರು ಕೆಲವು ಐಷಾರಾಮಿ ವಸ್ತುಗಳನ್ನು ಖರೀದಿಸಬಹುದು.

ಸೂಚನೆ : ಇಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ಈ ಮಾಹಿತಿಯನ್ನು ಝೀ ಮೀಡಿಯಾ ಖಚಿತಪಡಿಸಿಲ್ಲ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link