10 ವರ್ಷಗಳ ಬಳಿಕ ಹೋಳಿ ಹುಣ್ಣಿಮೆಯಂದೇ ರಾಜಯೋಗ: ಈ 3 ರಾಶಿಗೆ ಸುವರ್ಣಯುಗ ಶುರು, ಸರ್ಕಾರಿ ವೃತ್ತಿ ಜೊತೆ ಪ್ರಮೋಷನ್ ಪಕ್ಕಾ!
ಈ ರಾಜಯೋಗಗಳ ರಚನೆಯೊಂದಿಗೆ, ವ್ಯಕ್ತಿಯು ಆರ್ಥಿಕ ಲಾಭದ ಜೊತೆಗೆ ಜೀವನದಲ್ಲಿ ಪ್ರಗತಿಯ ಅವಕಾಶಗಳನ್ನು ಪಡೆಯುತ್ತಾನೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಈ ವರ್ಷ ಹೋಳಿಯಂದು ಅತ್ಯಂತ ಮಂಗಳಕರವಾದ ರಾಜಯೋಗವು ರೂಪುಗೊಳ್ಳಲಿದೆ.
ಹೋಳಿ ಹಬ್ಬಕ್ಕೆ ಮೊದಲು, ಶುಕ್ರ ಮತ್ತು ಮಂಗಳವು ಕುಂಭದಲ್ಲಿ ಶನಿಯೊಂದಿಗೆ ಸಂಯೋಗವನ್ನು ರೂಪಿಸುತ್ತದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಮಂಗಳ ಮತ್ತು ಶುಕ್ರ ಸಂಯೋಗದಿಂದ ಮಹಾಲಕ್ಷ್ಮಿ ರಾಜಯೋಗ ಉಂಟಾಗುತ್ತದೆ. ಇದರ ಪರಿಣಾಮವು ಕೆಲವು ರಾಶಿಗಳಿಗೆ ತುಂಬಾ ಮಂಗಳಕರವಾಗಿರುತ್ತದೆ.
ಕೆಲವು ರಾಶಿಗಳು ಇದ್ದಕ್ಕಿದ್ದಂತೆ ಆರ್ಥಿಕ ಲಾಭವನ್ನು ಪಡೆಯಬಹುದು. ಜೊತೆಗೆ ಪ್ರಗತಿಯ ಸಾಧ್ಯತೆಗಳೂ ಇವೆ. ಅಂತಹ ಅದೃಷ್ಟ ರಾಶಿಗಳು ಯಾವುವು ಎಂದು ತಿಳಿದುಕೊಳ್ಳೋಣ,
ತುಲಾ ರಾಶಿ: ತುಲಾ ರಾಶಿಯವರಿಗೆ ಈ ವರ್ಷದ ಹೋಳಿಯನ್ನು ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗಿದೆ. ಏಕೆಂದರೆ ಮಹಾಲಕ್ಷ್ಮಿ ರಾಜಯೋಗವು ತುಲಾ ರಾಶಿಯವರಿಗೆ ಹಠಾತ್ ಆರ್ಥಿಕ ಲಾಭವನ್ನು ನೀಡಲಿದೆ. ತುಲಾ ರಾಶಿಯ ಐದನೇ ಮನೆಯಲ್ಲಿ ಮಹಾಲಕ್ಷ್ಮಿ ರಾಜಯೋಗವು ರೂಪುಗೊಳ್ಳುತ್ತಿದ್ದು, ಪ್ರಗತಿ ಹೊಂದುವ ಸಾಧ್ಯತೆ ಇದೆ. ಜೊತೆಗೆ ವ್ಯಾಪಾರದಲ್ಲಿ ಭಾರೀ ಏರಿಕೆಯಾಗಲಿದೆ. ಆರ್ಥಿಕ ಲಾಭದ ಸಾಧ್ಯತೆಗಳಿವೆ.
ಜ್ಯೋತಿಷ್ಯಶಾಸ್ತ್ರದ ಪ್ರಕಾರ, ವೃಶ್ಚಿಕ ರಾಶಿಯವರಿಗೆ ಮಹಾಲಕ್ಷ್ಮಿ ರಾಜಯೋಗವು ತುಂಬಾ ಒಳ್ಳೆಯದು. ಹೋಳಿ ಹಬ್ಬಕ್ಕೆ ಕೆಲ ದಿನಗಳ ಮೊದಲು ವೃಶ್ಚಿಕ ರಾಶಿಯವರಿಗೆ ಒಳ್ಳೆಯ ದಿನಗಳು ಪ್ರಾರಂಭವಾಗುತ್ತವೆ. ವೃಶ್ಚಿಕ ರಾಶಿಯ ನಾಲ್ಕನೇ ಮನೆಯಲ್ಲಿ ಮಹಾಲಕ್ಷ್ಮಿ ರಾಜಯೋಗವು ರೂಪುಗೊಳ್ಳುತ್ತಿದ್ದು, ಇವರಿಗೆ ಭೌತಿಕ ಸಂತೋಷ ಹೆಚ್ಚಾಗುತ್ತದೆ. ಅಲ್ಲದೆ, ವಾಹನ ಮತ್ತು ಆಸ್ತಿ ಖರೀದಿಸುವ ಯೋಗವಿದೆ.
ಕುಂಭ ರಾಶಿ: ವೈದಿಕ ಜ್ಯೋತಿಷ್ಯದ ಪ್ರಕಾರ, ಹೋಳಿಯಲ್ಲಿ ಶುಕ್ರ ಮತ್ತು ಮಂಗಳ ಸಂಯೋಗದಿಂದ ರೂಪುಗೊಂಡ ಮಹಾಲಕ್ಷ್ಮಿ ರಾಜಯೋಗವು ಕುಂಭ ರಾಶಿಯ ಜನರಿಗೆ ಪ್ರಯೋಜನಕಾರಿಯಾಗಲಿದೆ. ಏಕೆಂದರೆ ಕುಂಭ ರಾಶಿಯಲ್ಲಿ ಜಾತಕದ ಲಗ್ನ ಮನೆಯಲ್ಲಿ ಮಹಾಲಕ್ಷ್ಮಿ ರಾಜಯೋಗ ರಚನೆಯಾಗಲಿದೆ. ಹೀಗಿರುವಾಗ ಈ ಜನರ ವ್ಯಕ್ತಿತ್ವವು ಸುಧಾರಿಸುವುದಲ್ಲದೆ, ಆತ್ಮವಿಶ್ವಾಸ ಮತ್ತು ಧೈರ್ಯವೂ ಹೆಚ್ಚುತ್ತದೆ. ಅವಿವಾಹಿತರಿಗೆ ವಿವಾಹ ಯೋಗವಿದೆ. ವೃತ್ತಿಯಲ್ಲಿ ಅಪಾರ ಧನಲಾಭವಾಗಲಿದೆ.
(ಸೂಚನೆ- ಈ ಲೇಖನದಲ್ಲಿ ನೀಡಲಾಗಿರುವ ಯಾವುದೇ ಮಾಹಿತಿಯ ನಿಖರತೆ ಅಥವಾ ಸ್ಪಷ್ಟತೆಯನ್ನು ಜೀ ಕನ್ನಡ ನ್ಯೂಸ್ ಖಚಿತಪಡಿಸುವುದಿಲ್ಲ. ಜೋತಿಷಿಗಳು, ಪಂಚಾಂಗ, ಮಾನ್ಯತೆಗಳು ಅಥವಾ ಧರ್ಮ ಗ್ರಂಥಗಳಂತಹ ವಿವಿಧ ಮಾಧ್ಯಮಗಳಿಂದ ಸಂಗ್ರಹಿಸಲಾಗಿರುವ ಮಾಹಿತಿಯನ್ನು ನಿಮ್ಮ ಬಳಿ ತಲುಪಿಸುವುದು ಮಾತ್ರ ನಮ್ಮ ಉದ್ದೇಶವಾಗಿದೆ.)