ಸೂರ್ಯಗ್ರಹಣದಂದೇ ಮಹಾಲಯ ಅಮಾವಾಸ್ಯೆ! ಈ 3 ರಾಶಿಗೆ ಕೋಟ್ಯಾಧಿಪತಿ ಯೋಗ-ಕಷ್ಟಕ್ಕೆಲ್ಲಾ ಮುಕ್ತಿ, ಸರ್ವ ಸಮೃದ್ಧಿ ಜೊತೆ ಮುಟ್ಟಿದ್ದೆಲ್ಲಾ ಚಿನ್ನವಾಗುವ ಸಮಯ
ಸಾಮಾನ್ಯವಾಗಿ ಸಮಸ್ಯಗೆಳನ್ನೇ ಸೃಷ್ಟಿಸುವ ಗ್ರಹಣಗಳು ಕೆಲ ರಾಶಿಯ ಜನರ ಬಾಳಲ್ಲಿ ಶುಭವನ್ನುಂಟು ಮಾಡಲಿದೆ. ಈ ಬಾರಿಯ ಸೂರ್ಯಗ್ರಹಣವು ರಾತ್ರಿ ವೇಳೆ ಸಂಭವಿಸಲಿದೆ. ಜೊತೆಗೆ ಭಾರತದಲ್ಲಿ ಗೋಚರಿಸುವುದಿಲ್ಲ ಎಂದು ಹೇಳಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಶ್ರಾದ್ಧ, ಅಮಾವಾಸ್ಯೆಯ ಶ್ರಾದ್ಧ, ಕರ್ಮ ಮತ್ತು ತರ್ಪಣದ ಮೇಲೆ ಪರಿಣಾಮ ಬೀರುವುದಿಲ್ಲ.
ಗ್ರಹಣದ ಸೂತಕ ಕಾಲವು ರಾತ್ರಿ 8:34 ಕ್ಕೆ ಪ್ರಾರಂಭವಾಗಿ ಮಧ್ಯರಾತ್ರಿ 02:25 ರವರೆಗೆ ಇರುತ್ತದೆ. ಈ ಸಂದರ್ಭದಲ್ಲಿ ಕೆಲ ರಾಶಿಗಳ ಭವಿಷ್ಯವು ಉಜ್ವಲವಾಗಲಿದೆ. ಅಂತಹ ಅದೃಷ್ಟಶಾಲಿ ರಾಶಿಗಳು ಯಾವುವು ಎಂಬುದನ್ನು ತಿಳಿಯೋಣ.
ಮಿಥುನ ರಾಶಿ: ಈ ರಾಶಿಯ ಜನರಿಗೆ ಮಹಾಲಯ ಅಮಾವಾಸ್ಯೆಯು ಶುಭವನ್ನುಂಟು ಮಾಡಲಿದೆ. ಈ ಸಂದರ್ಭದಲ್ಲಿ ಆತ್ಮವಿಶ್ವಾಸ ಹೆಚ್ಚಾಗುತ್ತದೆ. ವೃತ್ತಿಜೀವನದಲ್ಲಿ ಯಶಸ್ಸಿನ ಅವಕಾಶಗಳಿವೆ. ಪೂರ್ವಜರ ಅನುಗ್ರಹದಿಂದಾಗಿ ಕೆಲಸದ ಸ್ಥಳದಲ್ಲಿ ಉನ್ನತಿ ಮತ್ತು ಲಾಭವಾಗಲಿದೆ.
ಸಿಂಹ ರಾಶಿ: ಮಹಾಲಯ ಅಮಾವಾಸ್ಯೆಯಂದೇ ಆಗಮಿಸಿದ ಸೂರ್ಯಗ್ರಹಣದಿಂದ ಸಿಂಹ ರಾಶಿಯ ಜನರಿಗೆ ಹಣಕಾಸಿನ ಲಾಭವಾಗಲಿದೆ. ಬಾಳಲ್ಲಿ ಸಂತೋಷ ಹಾಗು ಸಮೃದ್ಧಿ ವೃದ್ಧಿಸಲಿದೆ. ವೈವಾಹಿಕ ಜೀವನವು ಸಂತೋಷದಿಂದ ತುಂಬಿರುತ್ತದೆ. ವ್ಯವಹಾರದಲ್ಲಿ ನಿರಂತರ ಪ್ರಗತಿ ಇರುತ್ತದೆ.
ತುಲಾ ರಾಶಿ: ಮಹಾಲಯ ಅಮಾವಾಸ್ಯೆ ಮತ್ತು ಸೂರ್ಯ ಗ್ರಹಣದ ಫಲದಿಂದ ತುಲಾ ರಾಶಿಯ ಜನರು ಪ್ರತಿಯೊಂದು ಕ್ಷೇತ್ರದಲ್ಲೂ ಯಶಸ್ಸನ್ನು ಸಾಧಿಸುತ್ತಾರೆ. ಇವರ ಬದುಕು ಸಂಪತ್ತು, ಆರೋಗ್ಯ, ಸಂತೋಷ ಮತ್ತು ಸಮೃದ್ಧಿಯಿಂದ ಕೂಡಿರುತ್ತದೆ.
(ಸೂಚನೆ- ಈ ಲೇಖನದಲ್ಲಿ ನೀಡಲಾಗಿರುವ ಯಾವುದೇ ಮಾಹಿತಿಯ ನಿಖರತೆ ಅಥವಾ ಸ್ಪಷ್ಟತೆಯನ್ನು ಜೀ ಕನ್ನಡ ನ್ಯೂಸ್ ಖಚಿತಪಡಿಸುವುದಿಲ್ಲ. ಜೋತಿಷಿಗಳು, ಪಂಚಾಂಗ, ಮಾನ್ಯತೆಗಳು ಅಥವಾ ಧರ್ಮ ಗ್ರಂಥಗಳಂತಹ ವಿವಿಧ ಮಾಧ್ಯಮಗಳಿಂದ ಸಂಗ್ರಹಿಸಲಾಗಿರುವ ಮಾಹಿತಿಯನ್ನು ನಿಮ್ಮ ಬಳಿ ತಲುಪಿಸುವುದು ಮಾತ್ರ ನಮ್ಮ ಉದ್ದೇಶವಾಗಿದೆ. ಈ ಮಾಹಿತಿಯ ನೈಜತೆ ಹಾಗೂ ಸ್ಪಷ್ಟತೆಯನ್ನು ಖಚಿತಪಡಿಸಲಾಗುವುದಿಲ್ಲ. ಹೀಗಾಗಿ ಯಾವುದೇ ರೀತಿಯಲ್ಲಿ ಈ ಮಾಹಿತಿಯನ್ನು ಬಳಸುವ ಮುನ್ನ ಸಂಬಂಧಿತ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ)