ಮಹಾತ್ಮಗಾಂಧಿ ಜಯಂತಿ ಹಿನ್ನೆಲೆ ಗಾಂಧಿ ಪ್ರತಿಮೆಗೆ ಪಾಲಿಕೆಯಿಂದ ಪುಷ್ಪ ನಮನ
ಮಹಾತ್ಮಗಾಂಧಿ ಜಯಂತಿ ಹಿನ್ನೆಲೆ ಎಂ.ಜಿ.ರಸ್ತೆಯಲ್ಲಿರುವ ಗಾಂಧಿ ಪ್ರತಿಮೆಗೆ ಪಾಲಿಕೆಯಿಂದ ಪುಷ್ಪ ನಮನ ಸಲ್ಲಿಸಲಾಯಿತು.
ಬಿಬಿಎಂಪಿ ಆಡಳಿತಗಾರ ರಾಕೇಶ್ ಸಿಂಗ್, ಮುಖ್ಯ ಆಯುಕ್ತ ತುಷಾರ್ ಗಿರಿ ನಾಥ್ ಮಾಲಾರ್ಪಣೆ ನೆರವೇರಿಸಿದರು.
ಗಾಂಧಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು.
ಈ ವೇಳೆ ವಲಯ ಆಯುಕ್ತರಾದ ಪಿ.ಎನ್.ರವೀಂದ್ರ, ಮಾಜಿ ಸಚಿವ ರಾಮಚಂದ್ರ ಗೌಡ, ಮಾಜಿ ಮೇಯರ್ ಗಳಾದ ಪದ್ಮಾವತಿ, ಮಂಜುನಾಥ್ ರೆಡ್ಡಿ, ಸಂಪತ್ ರಾಜ್ ಹಾಗೂ ಇನ್ನಿತರೆ ಅಧಿಕಾರಿಗಳು ಭಾಗಿಯಾಗಿದ್ದರು.