Mahindra XUV 3XO: ಕಡಿಮೆ EMI ಪಾವತಿಸಿ ಮಹೀಂದ್ರಾ XUV 3XO ಮನೆಗೆ ಕೊಂಡೊಯ್ಯಿರಿ
ಬೆಂಗಳೂರಿನಲ್ಲಿ ಹೊಸ ಮಹೀಂದ್ರಾ XUV 3XO ಕಾರಿನ ಪೆಟ್ರೋಲ್ ಚಾಲಿತ ಬೇಸ್ ಮಾಡೆಲ್(ಆರಂಭಿಕ ಮಾದರಿ) ಆಗಿರುವ MX19.06 ಲಕ್ಷ ರೂ., ಟಾಪ್ ಎಂಡ್ ಮಾಡೆಲ್(ಗರಿಷ್ಠ ಶ್ರೇಣಿ) ಎಂದು ಹೆಸರಿಸಲಾಗಿರುವ AX7 L ಟರ್ಬೊ AT 19.27 ಲಕ್ಷ ರೂ. ಆನ್-ರೋಡ್ ಬೆಲೆಯನ್ನು ಹೊಂದಿದೆ. ಅದೇ ರೀತಿ ಡಿಸೇಲ್ ಚಾಲಿತ ಬೇಸ್ ಮಾಡೆಲ್ MX2 12.04 ಲಕ್ಷ ರೂ. ಹಾಗೂ ಟಾಪ್ ಎಂಡ್ ಮಾಡೆಲ್ AX7 L 18.65 ಲಕ್ಷ ರೂ. ಆನ್-ರೋಡ್ ಬೆಲೆ ಹೊಂದಿದೆ.
ನೀವು ಈ ಕಾರನ್ನು 2 ಲಕ್ಷ ರೂ.ಗಳ ಡೌನ್ ಪೇಮೆಂಟ್ ಪಾವತಿಸಿ ಖರೀದಿಸಿದರೆ, 5 ವರ್ಷದ ಅವಧಿಗೆ ಶೇ.9.8ರಷ್ಟು ಬಡ್ಡಿ ದರದಲ್ಲಿ ಮಾಸಿಕ 14,925 ರೂ. EMI ಪಾವತಿಸಬೇಕಾಗುತ್ತದೆ. ನೂತನ ಮಹೀಂದ್ರಾ XUV 3XOಯು ಅತ್ಯಾಧುನಿಕ ವಿನ್ಯಾಸವನ್ನು ಹೊಂದಿದ್ದು, LED ಹೆಡ್‌ಲೈಟ್‌ಗಳು, ಇಂಟಿಗ್ರೇಟೆಡ್ ಡೇಟೈಮ್ ರನ್ನಿಂಗ್ ಲೈಟ್‌ಗಳು, ಹೊಸ ಬಂಪರ್, ಹೊಸತನದಿಂದ ಕೂಡಿರುವ ಅಲಾಯ್ ವೀಲ್‌ಗಳು, ಸಿ-ಆಕಾರಕ್ಕೆ ಹೋಲುವ ಟೈಲ್‌ಲ್ಯಾಂಪ್‌ಗಳನ್ನು ಒಳಗೊಂಡಿದೆ. ಜೊತೆಗೆ ವಿವಿಧ ಬಣ್ಣಗಳೊಂದಿಗೂ ಸಿಗಲಿದ್ದು, ಈ ಕಾರಿನಲ್ಲಿ 5 ಮಂದಿ ಆರಾಮವಾಗಿ ಪ್ರಯಾಣಿಸಬಹುದು.
ಈ ಕಾರು ಪೆಟ್ರೋಲ್ ಹಾಗೂ ಡೀಸೆಲ್ ಪವರ್‌ಟ್ರೇನ್ ಆಯ್ಕೆಯಲ್ಲಿ ದೊರೆಯುತ್ತದೆ. ಇದರ 1.2-ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್ 110 PS ಗರಿಷ್ಠ ಪವರ್ (ಶಕ್ತಿ) ಹಾಗೂ 200 NM ಪೀಕ್ ಟಾರ್ಕ್ ಹೊರಹಾಕುತ್ತದೆ. 1.2-ಲೀಟರ್ TGDI ಟರ್ಬೊ ಪೆಟ್ರೋಲ್ ಎಂಜಿನ್ 130 PS ಪವರ್ ಮತ್ತು 250 NM ಪೀಕ್ ಟಾರ್ಕ್ ಉತ್ಪಾದಿಸುತ್ತದೆ.
ಮತ್ತೊಂದು 1.5-ಲೀಟರ್ ಡೀಸೆಲ್ ಎಂಜಿನ್ 117 PS ಪವರ್ ಹಾಗೂ 300 NM ಪೀಕ್ ಟಾರ್ಕ್ ಹೊರಹಾಕುತ್ತದೆ. ರೂಪಾಂತರಗಳಿಗೆ ಅನುಗುಣವಾಗಿ 6-ಸ್ಪೀಡ್ ಮ್ಯಾನುವಲ್/ಆಟೋಮೆಟಿಕ್ ಗೇರ್ ಬಾಕ್ಸ್ ಆಯ್ಕೆಯನ್ನು ಹೊಂದಿದೆ. ಪೆಟ್ರೋಲ್ ರೂಪಾಂತರಗಳು 17.96 ರಿಂದ 20.1 KMPL, ಡೀಸೆಲ್ ಮಾದರಿಗಳು 20.6ರಿಂದ 21.2 KMPL ಮೈಲೇಜ್ ನೀಡುತ್ತವೆ.
ಮಹೀಂದ್ರಾ XUV 3XO SUVಯು ಇನ್ಫೋಟೈನ್‌ಮೆಂಟ್ ಸಿಸ್ಟಮ್ ಮತ್ತು ಇನ್ಸ್ಟ್ರುಮೆಂಟ್ ಕ್ಲಸ್ಟರ್‌ಗಾಗಿ ಡುಯಲ್ 10.25-ಇಂಚಿನ ಡಿಸ್ಪ್ಲೇಗಳು, ಕ್ರೂಸ್ ಕಂಟ್ರೋಲ್, ಡುಯಲ್-ಜೋನ್ AC, ವೈರ್‌ಲೆಸ್ ಫೋನ್ ಚಾರ್ಜರ್, ಕನೆಕ್ಟೆಡ್ ಕಾರ್‌ಟೆಕ್, ಅಲೆಕ್ಸಾ ಕನೆಕ್ಟಿವಿಟಿ, ಪನೋರಮಿಕ್ ಸನ್‌ರೂಫ್ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಹೊಂದಿದೆ. ಸುರಕ್ಷತೆಗಾಗಿ 6 ಏರ್‌ಬ್ಯಾಗ್, ADAS (ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್ಸ್), 360-ಡಿಗ್ರಿ ಕ್ಯಾಮೆರಾವನ್ನು ಹೊಂದಿದೆ. ಈ ಕಾರಿಗೆ ನಿಸ್ಸಾನ್ ಮ್ಯಾಗ್ನೈಟ್, ಹ್ಯುಂಡೈ ವೆನ್ಯೂ, ರೆನಾಲ್ಟ್ ಕಿಗರ್, ಟಾಟಾ ನೆಕ್ಸಾನ್, ಕಿಯಾ ಸೋನೆಟ್, ಮಾರುತಿ ಸುಜುಕಿ ಬ್ರೆಝಾ, ಮಾರುತಿ ಸುಜುಕಿ ಫ್ರಾಂಕ್ಸ್ ಹಾಗೂ ಟೊಯೊಟಾ ಅರ್ಬನ್ ಕ್ರೂಸರ್ ಟೈಸರ್ ಪ್ರಬಲ ಎದುರಾಳಿಯಾಗಿವೆ.