39 ವಯಸ್ಸಿನಲ್ಲಿ ಎರಡನೆ ಮದುವೆ.. 15 ವರ್ಷದ ಮಗನ ಎದುರಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಖ್ಯಾತ ನಟಿ..!

Thu, 19 Dec 2024-8:13 am,

Mahira Khan: ಇತ್ತೀಚಿನ ದಿನಗಳಲ್ಲಿ ನಿಜವಾದ ಪ್ರೀತಿಗೆ ಬೆಲಯೇ ಇಲ್ಲ ಬಿಡಿ. ಒಂದು ಕಾಲದಲ್ಲಿ ಪ್ರೀತಿಸಿದವರಿಗೋಸ್ಕರ ಜನ ಪ್ರಾಣ ಕೊಡುತ್ತಿದ್ದರು. ತಮ್ಮ ಪ್ರೀತಿಯನ್ನು ಉಳಿಸಿಕೊಳ್ಳಲು ತಮ್ಮ ಪ್ರಾಣವನ್ನು ಪಣಕ್ಕಿಡುತ್ತಿದ್ದರು. ಆದರೆ, ಈಗಿನ ಕಾಲ ಬದಲಾಗಿದೆ. ಡ್ರೆಸ್‌ ಚೇಂಜ್‌ ಮಡಿದಷ್ಟು ಸುಲಭವಾಗಿ ಜನ ತಮ್ಮ ಗಂಡ, ಹೆಂಡತಿ ಅಥವಾ ಲವರ್‌ ಅನ್ನು ಬದಲಾಯಿಸಿಕೊಳ್ಳುತ್ತಿದ್ದಾರೆ. ಇದೀಗ ಇಂತಹದ್ದೆ ಒಂದು ಘಟನೆಗೆ ಖ್ಯಾತ ನಟಿಯೊಬ್ಬರು ಸಾಕ್ಷಿಯಾಗಿದ್ದಾರೆ.  

ಮೂಲತಃ ಪಾಕಿಸ್ತಾನಸವರಾದ್ರೂ ಕೂಡ ಮಹಿರಾ ಖಾನ್‌ ಬಾಲಿವುಡ್‌ ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಶಾರುಕ್‌ ಕಾನ್‌ ಅವರಂತಹ ಗಣ್ಯ ನಟರ ಜೊತೆ ಆಕ್ಟ್‌ ಮಾಡಿ ಮೋಡಿ ಮಾಡಿದ್ದಾರೆ.

ಹೀಗೆ ಸಿನಿಮಾ ಇಂಡಸ್ಟ್ರಿಯಲ್ಲಿ ತಮ್ಮ ನಟನೆಯ ಮೂಲಕ ಛಾಪು ಮೂಡಿಸಿದ್ದ ಮಾಹಿರಾ ಖಾನ್‌ 2023ರ ಅಕ್ಟೋಬರ್‌ನಲ್ಲಿ ತಮ್ಮ 15 ವರ್ಷದ ಮಗನ ಎದುರಿಗೆ ಎರಡನೆ ಮದುವೆಯಾಗಿದ್ದರು.  

ಈ ಮದುವೆಯಲ್ಲಿ ಎಲ್ಲರ ಗಮನ ಸೆಳೆದ ವಿಚಾರವೇನೆಂದರೆ ನಟಿಯ 15 ವರ್ಷದ ಮಗ. ಹೌದು, ಎರಡನೆ ಮದುವೆ ಮಾಡಿಕೊಳ್ಳು ನಿರ್ಧರಿಸಿದಾಗ ತಮ್ಮ ಮಗ ಎಲ್ಲರಿಗಿಂತಲೂ ಹೆಚ್ಚು ಸಂತೋಷ ಪಟ್ಟಿದ್ದ ಎಂದು ನಟಿ ಇತ್ತೀಚೆಗೆ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.  

ನನ್ನ ಮಗ ನನ್ನ ಕೈ ಹಿಡಿದು ಮದುವೆ ಮಂಟಪದವರೆಗೂ ಕರೆದುಕೊಂಡು ಹೋಗಿ, ಮುಂದೆ ನಿಂತು ನಾನು ಮದುವೆಯಾಗುವುದನ್ನು ಅವನ ಸಂಭ್ರಮಿಸಿದ್ದು, ನನಗೆ ಮರೆಯಲಾಗದ ಕ್ಷಣ ಎಂದು ನಟಿ ತಮ್ಮ ಮದುವೆಯ ದಿನವನ್ನು ಮೆಲುಕು ಹಾಕಿಕೊಂಡಿದ್ದಾರೆ.  

39ನೇ ವರ್ಷ ವಯಸ್ಸಿನಲ್ಲಿ ನಾನು ಮದುವೆಯಾಗಲು ನಿರ್ಧಾರ ಮಾಡಿದಾಗ ನನಗೆ ಧೈರ್ಯ ತುಂಬಿದ ವ್ಯಕ್ತಿಗಳಲ್ಲಿ ನನ್ನ ಮಗ ಕೂಡ ಒಬ್ಬ, ಆ ಕ್ಷಣವನ್ನು ನಾನು ಎಂದಿಗೂ ಮರೆಯಲು ಸಾಧ್ಯವಿಲ್ಲ ಎಂದು ಹೇಳಿಕೊಂಡಿದ್ದಾರೆ.  

ಇನ್ನೂ, ನಟಿ ಮಹಿರಾ 2007ರಲ್ಲಿ ಪಾಕಿಸ್ತಾನ ಮೂಲದ ಬ್ಯುಸಿನೆಸ್‌ ಮ್ಯಾನ್‌ ಒಬ್ಬರನ್ನು ಮದುವೆ ಮಾಡಿಕೊಂಡಿದ್ದರು. ಆದರೆ, ಈ ಜೋಡಿ ದಾಂಪತ್ಯ 2015ರಲ್ಲಿ ಕೊನೆ ಗೊಂಡಿತ್ತು.   

ವಿಚ್ಛೇದನ ಪಡೆದ ನಂತರ 8 ವರ್ಷಗಳ ಕಾಲ ತಮ್ಮ ಮಗನನ್ನು ಒಂಟಿಯಾಗಿ ಬೆಳೆಸಿದ ಮಹಿರಾ ಕಳೆದ ವರ್ಷ ಎರಡನೆ ಮದುವೆಯಾದರು.   

ZEENEWS TRENDING STORIES

By continuing to use the site, you agree to the use of cookies. You can find out more by Tapping this link