ಈ ಸಮಯದಲ್ಲಿ ಎಳನೀರು ಕುಡಿದರೆ ಶಾಶ್ವತವಾಗಿ ದೂರವಾಗುವುದು ಈ ಸಮಸ್ಯೆಗಳು

Fri, 24 Nov 2023-4:10 pm,

ಎಳನೀರು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಬೇಸಿಗೆಯಲ್ಲಿ ಯಾವಾಗ ಬೇಕಾದರೂ ಎಳನೀರು ಕುಡಿಯಬಹುದು. ಆದರೆ, ತೂಕ ಇಳಿಸಿಕೊಳ್ಳಲು ಬಯಸುವವರು ಸರಿಯಾದ ಸಮಯಕ್ಕೆ ಎಳನೀರು ಕುಡಿಯುವುದು ಉತ್ತಮ. 

ಎಳನೀರು ಅನೇಕ ಜೀವಸತ್ವಗಳು ಮತ್ತು ಖನಿಜಗಳನ್ನು ಹೊಂದಿರುತ್ತದೆ. ಇದು ದೇಹವನ್ನು ಹೈಡ್ರೀಕರಿಸುತ್ತದೆ.    

ಎಳನೀರಿನಲ್ಲಿ ಎರಡು ವಿಧವಿರುತ್ತದೆ. ಕೆಂಪು ಮತ್ತು ಹಸಿರು. ಎರಡೂ ಒಂದೇ ರೀತಿಯ ಗುಣ ಲಕ್ಷಣಗಳನ್ನು ಹೊಂದಿದೆ.

 ಎಳನೀರು ಕಡಿಮೆ ಕಾರ್ಬೋಹೈಡ್ರೇಟ್‌ಗಳನ್ನು ಹೊಂದಿದೆ. ಆದರೂ ಕೂಡಾ  ಇದು ಹಸಿವನ್ನು ತಡೆಯಲು ಸಹಾಯ ಮಾಡುತ್ತದೆ. ದಿನಕ್ಕೆ 3 ರಿಂದ 4 ಕಪ್ ಎಳ ನೀರು ಕುಡಿದರೆ ಸಾಕು. ಅದಕ್ಕಿಂತ ಹೆಚ್ಚು ಕುಡಿಯುವ ಅಗತ್ಯವಿರುವುದಿಲ್ಲ. 

ಖಾಲಿ ಹೊಟ್ಟೆಯಲ್ಲಿ ಬೆಳಿಗ್ಗೆ ಎಳನೀರು ಕುಡಿಯುವುದು ಉತ್ತಮ. ಏಕೆಂದರೆ ಎಳನೀರಿನಲ್ಲಿರುವ ಲಾರಿಕ್ ಆಸಿಡ್ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ

ಗರ್ಭಿಣಿಯರು ಬೆಳಿಗ್ಗೆ ಎಳನೀರು ಕುಡಿಯಬಹುದು. ಇದು  ದೇಹದಲ್ಲಿ ನೀರಿನ ಅಂಶವನ್ನು ಉಳಿಸಿಕೊಳ್ಳಲು ಸಹಾಯ ಮಾಡುತ್ತದೆ ಮತ್ತು ಮಲಬದ್ಧತೆಯ ಸಮಸ್ಯೆಯನ್ನು ನಿವಾರಿಸುತ್ತದೆ. ಗರ್ಭಿಣಿಯರಲ್ಲಿ ವಾಕರಿಕೆ  ಸಮಸ್ಯೆಯನ್ನು ನಿಯಂತ್ರಿಸುತ್ತದೆ. 

ಊಟಕ್ಕೂ ಮುನ್ನ ನೀರು ಕುಡಿಯುವುದರಿಂದ ಆಹಾರ ಸೇವನೆಯನ್ನು ಕಡಿಮೆ ಮಾಡಬಹುದು. ಇದರಿಂದ ಅತಿಯಾಗಿ ತಿನ್ನುವುದನ್ನು ತಡೆಯಬಹುದು ಮತ್ತು ದೇಹದಲ್ಲಿ ಕ್ಯಾಲೋರಿ ಹೆಚ್ಚಾಗದಂತೆ ನೋಡಿಕೊಳ್ಳಬಹುದು

ರಾತ್ರಿ ಮಲಗುವ ಮುನ್ನ ಎಳನೀರು ಕುಡಿಯುವುದರಿಂದ ದೇಹದಲ್ಲಿರುವ ವಿಷಕಾರಿ ಅಂಶಗಳೆಲ್ಲ ಹೊರ ಹೋಗಿ ಮೂತ್ರನಾಳವನ್ನು ಸ್ವಚ್ಛಗೊಳಿಸುತ್ತದೆ. 

ಎಳನೀರು ಕಡಿಮೆ ಕ್ಯಾಲೋರಿಗಳನ್ನು ಹೊಂದಿದೆ ಮತ್ತು ಜೀರ್ಣಕ್ರಿಯೆ ಮತ್ತು ಹೊಟ್ಟೆಗೆ ಒಳ್ಳೆಯದು. ಇದು ಜೀರ್ಣಕ್ರಿಯೆಯನ್ನು ಸುಗಮಗೊಳಿಸುತ್ತದೆ  

ZEENEWS TRENDING STORIES

By continuing to use the site, you agree to the use of cookies. You can find out more by Tapping this link