ಮಕರ ಸಂಕ್ರಾಂತಿಯಿಂದ ಈ ರಾಶಿಯವರ ಎಲ್ಲ ಕಷ್ಟಗಳೂ ಮಾಯ.. ದುಡ್ಡಿನ ಸುರಿಮಳೆ, ಸಕಲ ಐಶ್ವರ್ಯ ಪ್ರಾಪ್ತಿ.. ಇನ್ನೂ ನಿಮ್ಮನ್ನು ಹಿಡಿಯೋರಿಲ್ಲ!

Sat, 04 Jan 2025-6:10 am,

Makar Sankranti 2025 Lucky Zodiac Signs: ಮಕರ ಸಂಕ್ರಾಂತಿ ಭಾರತದ ಪ್ರಮುಖ ಹಬ್ಬಗಳಲ್ಲಿ ಒಂದಾಗಿದೆ. ಈ ಹಬ್ಬಕ್ಕೆ ವಿಶೇಷ ಮಹತ್ವವಿದೆ. ಸಂಕ್ರಾಂತಿ ಸಮಯದಲ್ಲಿ ಅತ್ಯಂತ ಶಕ್ತಿಶಾಲಿ ಗ್ರಹಗಳ ಸಂಚಾರ ನಡೆಯಲಿದೆ.

ಮಕರ ಸಂಕ್ರಾಂತಿ 2025: ಜನವರಿ 14 ರಂದು ಮಕರ ಸಂಕ್ರಾಂತಿ ಹಬ್ಬವನ್ನು ಆಚರಿಸಲಾಗುತ್ತಿದೆ. ಈ ದಿನ ಸೂರ್ಯನು ಮಕರ ರಾಶಿಯನ್ನು ಪ್ರವೇಶಿಸುತ್ತಾನೆ. ಅದಕ್ಕಾಗಿಯೇ ಮಕರ ಸಂಕ್ರಾಂತಿ ಎನ್ನಲಾಗುತ್ತದೆ. ಮಕರ ರಾಶಿಯಲ್ಲಿ ಸೂರ್ಯ ಸಂಚಾರದಿಂದ ಕೆಲವು ರಾಶಿಗಳ ಅದೃಷ್ಟದ ಬಾಗಿಲು ತೆರೆಯಲಿದೆ. 

ಸಿಂಹ ರಾಶಿ : ಉದ್ಯೋಗ ಮಾಡುವವರಿಗೆ ಈ ಸಮಯ ಅದ್ಭುತವಾಗಿದೆ. ಈ ಸಮಯದಲ್ಲಿ, ಕಠಿಣ ಪರಿಶ್ರಮಕ್ಕೆ ಪ್ರತಿಫಲವೂ ದೊರೆಯುತ್ತದೆ. ಇದರೊಂದಿಗೆ ಒಂಟಿಯಾಗಿ ಬದುಕುತ್ತಿರುವವರಿಗೆ ಉತ್ತಮ ಸಂಗಾತಿ ಸಿಗುವ ಸಾಧ್ಯತೆಗಳಿವೆ.

ಮಕರ ರಾಶಿ: ವ್ಯವಹಾರದಲ್ಲಿ ಧನಾತ್ಮಕ ಬದಲಾವಣೆಗಳನ್ನು ಕಾಣುವಿರಿ. ಅನಿರೀಕ್ಷಿತ ಆರ್ಥಿಕ ಲಾಭಗಳನ್ನು ಪಡೆಯುತ್ತಾರೆ. ಅಲ್ಲದೆ ವಿದ್ಯಾರ್ಥಿಗಳ ಉತ್ಸಾಹವೂ ಹೆಚ್ಚುತ್ತದೆ. ಕುಟುಂಬದಲ್ಲಿ ಸಂತೋಷವು ದ್ವಿಗುಣಗೊಳ್ಳುತ್ತದೆ.

ಕರ್ಕಾಟಕ ರಾಶಿ: ಅಪಾರ ಆರ್ಥಿಕ ಲಾಭವನ್ನು ಪಡೆಯುತ್ತಾರೆ. ಪ್ರೇಮ ಜೀವನದಲ್ಲಿನ ಸಮಸ್ಯೆಗಳು ದೂರವಾಗಿ ಮದುವೆಯಾಗುವ ಸಾಧ್ಯತೆಗಳಿವೆ. ವಿವಾಹಿತರಿಗೆ ಸಂಗಾತಿಯೊಂದಿಗೆ ಉತ್ತಮ ಸಂಬಂಧದ ಸಾಧ್ಯತೆಗಳಿವೆ.

(ಗಮನಿಸಿ: ಇಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಧಾರ್ಮಿಕ ವಿಚಾರಗಳನ್ನು ಆಧರಿಸಿದೆ. ಇದನ್ನು Zee ಕನ್ನಡ ನ್ಯೂಸ್ ಪರಿಶೀಲಿಸಿಲ್ಲ.)

ZEENEWS TRENDING STORIES

By continuing to use the site, you agree to the use of cookies. You can find out more by Tapping this link