ಈರುಳ್ಳಿ ಸಿಪ್ಪೆ ಇದ್ದರೆ ಸಾಕು: ಒಂದೇ ವಾರದಲ್ಲಿ ಸೊಂಟದ ಸುತ್ತ ತುಂಬಿರುವ ಕಠಿಣ ಬೊಜ್ಜನ್ನು ಸರಾಗವಾಗಿ ಇಳಿಸಬಹುದು!
ಆಹಾರದ ರುಚಿಯನ್ನು ಹೆಚ್ಚಿಸುವ ಈರುಳ್ಳಿ ನಿಮ್ಮ ತೂಕ ಹೆಚ್ಚಾಗುವುದನ್ನು ಕೂಡ ತಡೆಯಬಹುದು. ಶಾಕ್ ಆದರೂ ಸಹ ಇದು ನಿಜ. ಈರುಳ್ಳಿ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಹಲವಾರು ರೀತಿಯ ಪೋಷಕಾಂಶಗಳನ್ನು ಒಳಗೊಂಡಿರುವ ಈರುಳ್ಳಿ, ಪೋಷಕಾಂಶಗಳಿಂದ ಸಮೃದ್ಧವಾಗಿದೆ. ಇದು ತೂಕವನ್ನು ಕಡಿಮೆ ಮಾಡುವಲ್ಲಿ ಸಹಾಯ ಮಾಡುತ್ತದೆ.
ನಮ್ಮ ಅಡುಗೆಮನೆಯಲ್ಲಿ ಕಂಡುಬರುವ ಕೆಲವು ವಸ್ತುಗಳು ತೂಕ ನಷ್ಟಕ್ಕೆ ಪ್ರಯೋಜನಕಾರಿ. ಇವುಗಳಲ್ಲಿ ಒಂದು ಈರುಳ್ಳಿ. ಇದು ಅಡುಗೆಯಲ್ಲಿ ರುಚಿಯನ್ನು ಸೇರಿಸುವುದು ಮಾತ್ರವಲ್ಲದೆ ಆರೋಗ್ಯದ ದೃಷ್ಟಿಯಿಂದ ತುಂಬಾ ಪ್ರಯೋಜನಕಾರಿಯಾಗಿದೆ.
ತೂಕ ನಷ್ಟಕ್ಕೆ ಆಹಾರದಲ್ಲಿ ಈರುಳ್ಳಿಯನ್ನು ಸೇರಿಸಿ. ಅಥವಾ ಈರುಳ್ಳಿ ರಸವನ್ನು ನಿಯಮಿತವಾಗಿ ಕುಡಿಯುವುದು ಕೂಡ ಇದಕ್ಕೆ ಬೆಸ್ಟ್. ಈರುಳ್ಳಿಯನ್ನು ಕುದಿಸಿ ಕೂಡ ಅದರಿಂದ ಜ್ಯೂಸ್ ತಯಾರಿಸಬಹುದು.
ಈರುಳ್ಳಿ ಸೂಪ್ ಅನ್ನು ರಾತ್ರಿಯ ಊಟದ ಸಂದರ್ಭದಲ್ಲಿ ಕುಡಿಯಬಹುದು. ಅನೇಕ ಪೋಷಕಾಂಶಗಳಿಂದ ಸಮೃದ್ಧವಾಗಿರುವ ಇದರ ಸೂಪ್ ನಿಮ್ಮನ್ನು ದೀರ್ಘಕಾಲದವರೆಗೆ ಹೊಟ್ಟೆ ತುಂಬಿಸುತ್ತದೆ. ಹೀಗಿರುವಾಗ ಕಡಿಮೆ ಆಹಾರ ಸೇವಿಸುವ ಮೂಲಕ ತೂಕ ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ಈರುಳ್ಳಿಯಲ್ಲಿರುವ ಕರಗುವ ನಾರಿನಂಶವು ಹೊಟ್ಟೆಯನ್ನು ದೀರ್ಘಕಾಲದವರೆಗೆ ತುಂಬಿರುತ್ತದೆ, ಇದು ತೂಕ ನಷ್ಟಕ್ಕೆ ಸಹಾಯ ಮಾಡುತ್ತದೆ. ಈರುಳ್ಳಿ ತುಂಬಾ ಕಡಿಮೆ ಕ್ಯಾಲೋರಿಗಳನ್ನು ಹೊಂದಿದ್ದು, ತೂಕ ಇಳಿಸಿಕೊಳ್ಳಲು ಬೆಸ್ಟ್,
ಈರುಳ್ಳಿ ಸಿಪ್ಪೆಯ ಚಹಾ ಮಾಡಿ ಕುಡಿಯುವುದರಿಂದ ಸಹ ಅನೇಕ ಆರೋಗ್ಯ ಪ್ರಯೋಜನ ಸಿಗುತ್ತದೆ. ಅದರಲ್ಲೂ ಈರುಳ್ಳಿ ಸಿಪ್ಪೆಯ ಟೀ ಕುಡಿದರೆ ಒಂದೇ ವಾರದಲ್ಲಿ ನಿಮಗೆ ರಿಸಲ್ಟ್ ಗೋಚರಿಸುತ್ತದೆ.
ಈರುಳ್ಳಿಯಲ್ಲಿ ಅನೇಕ ಪೋಷಕಾಂಶಗಳು ಕಂಡುಬರುತ್ತವೆ. ಒಂದು ಕಪ್ ಈರುಳ್ಳಿ 64 ಕ್ಯಾಲೋರಿಗಳು, 15 ಗ್ರಾಂ ಕಾರ್ಬೋಹೈಡ್ರೇಟ್ಗಳು, 16 ಗ್ರಾಂ ಕೊಬ್ಬು, 7 ಗ್ರಾಂ ಫೈಬರ್, 76 ಗ್ರಾಂ ಸಕ್ಕರೆ ಮತ್ತು ವಿಟಮಿನ್ಗಳನ್ನು ಹೊಂದಿರುತ್ತದೆ.
ಒಂದು ದೊಡ್ಡ ಈರುಳ್ಳಿ ಸಿಪ್ಪೆ ತೆಗೆದುಕೊಳ್ಳಿ. ನಂತರ ಒಂದು ಲೋಟ ನೀರಿಗೆ ಆ ಸಿಪ್ಪೆಯನ್ನು ಹಾಕಿ ಕುದಿಯಲು ಬಿಡಿ. ನಂತರ ಉರಿಯನ್ನು ಆಫ್ ಮಾಡಿ. ಅದನ್ನು ಚೆನ್ನಾಗಿ ಮಿಶ್ರಣ ಮಾಡಿ. ಈಗ ಅದಕ್ಕೆ ಮತ್ತೆ ಎರಡು ಕಪ್ ನೀರು ಸೇರಿಸಿ ಮಿಕ್ಸ್ ಮಾಡಿ. ನಂತರ ಫಿಲ್ಟರ್ ಮಾಡಿ ಕುಡಿಯಿರಿ.
(ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಇವುಗಳನ್ನು ಅನುಸರಿಸುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಬೇಕು. Zee News Kannada ಈ ಮಾಹಿತಿಯನ್ನು ಅನುಮೋದಿಸುವುದಿಲ್ಲ.)