Malaika Arora: ಮಲೈಕಾ ಅರೋರಾ ಬೋಲ್ಡ್ ಲುಕ್ಗೆ ಫಿದಾ ಆದ ಫ್ಯಾನ್ಸ್

Fri, 12 Nov 2021-2:30 pm,

ಬಾಲಿವುಡ್ ನಟಿ, ಮಾಡೆಲ್ ಮತ್ತು ಡ್ಯಾನ್ಸಿಂಗ್ ದಿವಾ ಮಲೈಕಾ ಅರೋರಾ ತೆರೆಯ ಮೇಲೆ ಬಂದಾಗಲೆಲ್ಲಾ ಅವರು ತಮ್ಮ ಅಭಿಮಾನಿಗಳ ಮೇಲೆ ಸಾಕಷ್ಟು ಮ್ಯಾಜಿಕ್ ಸೃಷ್ಟಿಸುತ್ತಾರೆ. ಇದೀಗ ಮತ್ತೊಮ್ಮೆ ಮಲೈಕಾ ತನ್ನ ಹೊಸ ಫೋಟೋಶೂಟ್‌ನಿಂದ ಸಾಕಷ್ಟು ಸುದ್ದಿಯಲ್ಲಿದ್ದಾರೆ. ಇಲ್ಲಿ ನಟಿ ಅನೇಕ ಪೋಸ್‌ಗಳನ್ನು ನೀಡಿದ್ದು, ಅವರ ಮೋಹಕ ಲುಕ್ ನಿಂದ ಅಭಿಮಾನಿಗಳ ಮನಸ್ಸು ಗೆಲ್ಲುತ್ತಿದ್ದಾರೆ.  ಮಲೈಕಾ ಅವರ ಈ ಫೋಟೋಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ವೈರಲ್ ಆಗುತ್ತಿದ್ದು, ಅಭಿಮಾನಿಗಳು ಈ ಬಗ್ಗೆ ವಿಭಿನ್ನ ರೀತಿಯ ಪ್ರತಿಕ್ರಿಯೆಗಳನ್ನು ವ್ಯಕ್ತಪಡಿಸುತ್ತಿದ್ದಾರೆ.

ಮಲೈಕಾ ತನ್ನ ಫೋಟೋಶೂಟ್ ಅನ್ನು 3 ಪೋಸ್ಗಳಲ್ಲಿ ಹಂಚಿಕೊಂಡಿದ್ದಾರೆ. ಪ್ರತಿ ಫೋಟೋದಲ್ಲಿ ನಟಿಯ ವಿಭಿನ್ನ ಶೈಲಿಯು ಕಂಡುಬಂದಿದೆ. ಮಲೈಕಾ ಇಲ್ಲಿ ಸೀಕ್ವಿನ್ಡ್ ರೋಸ್ ಗೋಲ್ಡ್ ಕಲರ್ ಬಾಡಿ ಹಗ್ಗಿಂಗ್ ಗೌನ್ ಧರಿಸಿದ್ದು, ಖ್ಯಾತ ಡಿಸೈನರ್ ನಯೀಮ್ ಖಾನ್ ವಿನ್ಯಾಸಗೊಳಿಸಿದ್ದಾರೆ. ನಟಿ ವಜ್ರದ ಉದ್ದನೆಯ ನೇತಾಡುವ ಕಿವಿಯೋಲೆಗಳು ಮತ್ತು ನೆಕ್ಲೇಸ್ ಅನ್ನು ಸಹ ಧರಿಸಿದ್ದಾರೆ.

ಮಲೈಕಾ ತನ್ನ ನೋಟವನ್ನು ಪೂರ್ಣಗೊಳಿಸಲು ನ್ಯೂಡ್ ಮೇಕಪ್ ಮಾಡಿದ್ದಾರೆ. ರೋಸ್ ಗೋಲ್ಡ್ ಶೇಡ್ ನಿಂದಲೇ ಸ್ಮೋಕಿ ಐ ಮೇಕಪ್ ಲುಕ್ ನೀಡಿದ್ದಾರೆ. ಇದರೊಂದಿಗೆ, ಅವರು ಹೈ ಬನ್ ಹೇರ್ ಸ್ಟೈಲ್ ಮಾಡಿದ್ದಾರೆ. ಅದರಲ್ಲೂ ಈ ಡ್ರೆಸ್ ನಲ್ಲಿ ಅವರ ಫಿಟ್ ನೆಸ್ ಎಲ್ಲರ ಗಮನ ಸೆಳೆದಿದೆ. ಮಲೈಕಾ ಇದರಲ್ಲಿ ತುಂಬಾ ಸುಂದರವಾಗಿ ಕಾಣುತ್ತಿದ್ದಾರೆ. ಈಗ ಅವರ ಈ ಲೇಟೆಸ್ಟ್ ಲುಕ್ ಅನ್ನು ಅಭಿಮಾನಿಗಳು ತುಂಬಾ ಇಷ್ಟ ಪಡುತ್ತಿದ್ದಾರೆ. 

ಇದನ್ನೂ ಓದಿ- Katrina Kaif: ಕತ್ರಿನಾ ಕೈಫ್ ಡ್ಯಾನ್ಸ್ ಪ್ರಾಕ್ಟೀಸ್ ವಿಡಿಯೋ ವೈರಲ್, ವಿಕ್ಕಿ ಜೊತೆ ಮದುವೆಗೆ ನಡೆದಿದೆಯೇ ತಯಾರಿ?

ಮಲೈಕಾ ಸೋಷಿಯಲ್ ಮೀಡಿಯಾದಲ್ಲಿ ತುಂಬಾ ಸಕ್ರಿಯರಾಗಿದ್ದಾರೆ. ಅವರು ಆಗಾಗ್ಗೆ ತನ್ನ ಫೋಟೋಗಳು ಮತ್ತು ವೀಡಿಯೊಗಳನ್ನು ತನ್ನ ಅಭಿಮಾನಿಗಳೊಂದಿಗೆ ಹಂಚಿಕೊಳ್ಳುತ್ತಾರೆ.  ಅದು ಹೆಚ್ಚು ವೈರಲ್ ಆಗುತ್ತಿದೆ. ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿಗಳು ಮಲೈಕಾ ಅವರ ಹೊಸ ಫೋಟೋಗಳಿಗಾಗಿ ಕಾತರದಿಂದ ಕಾಯುತ್ತಿರುತ್ತಾರೆ. ಹೀಗಾಗಿಯೇ ಇನ್‌ಸ್ಟಾಗ್ರಾಮ್‌ನಲ್ಲಿ ಮಲೈಕಾ ಫಾಲೋವರ್ಸ್‌ಗಳ ಪಟ್ಟಿಯೂ ದಿನೇ ದಿನೇ ಉದ್ದವಾಗುತ್ತಿದೆ. 

ತನ್ನ ಫೋಟೋಶೂಟ್ ಜೊತೆಗೆ, ಮಲೈಕಾ ತನ್ನ ವೈಯಕ್ತಿಕ ಜೀವನದ ಬಗ್ಗೆಯೂ ಸಾಕಷ್ಟು ಚರ್ಚೆಯಲ್ಲಿದ್ದಾರೆ. ವೈಯಕ್ತಿಕ ಜೀವನವು ಯಾರಿಂದಲೂ ಮರೆಮಾಡಲ್ಪಟ್ಟಿಲ್ಲ. ಅರ್ಬಾಜ್ ಖಾನ್‌ನಿಂದ ವಿಚ್ಛೇದನದ ನಂತರ, ಅವರು ಈಗ ನಟ ಅರ್ಜುನ್ ಕಪೂರ್ ಅವರೊಂದಿಗೆ ಡೇಟಿಂಗ್ ಮಾಡುತ್ತಿದ್ದಾರೆ. ಇವರಿಬ್ಬರ ಚಿತ್ರಗಳು ಸಾಮಾಜಿಕ ಜಾಲಾತಾಣದಲ್ಲಿ ಆಗಾಗ್ಗೆ ಕಾಣಿಸಿಕೊಳ್ಳುತ್ತವೆ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link