ಶುಕ್ರನಿಂದ ರೂಪುಗಳ್ಳಲಿದೆ ಮಾಲವ್ಯ ರಾಜಯೋಗ.. 2025 ರಲ್ಲಿ ಈ ರಾಶಿಗೆ ಭಾಗ್ಯೋದಯ, ಅದೃಷ್ಟದ ಆಟ ಶುರು.. ಶ್ರೀಮಂತಿಕೆ ಬರುವ ಸಮಯ ಬಹುದೂರವಿಲ್ಲ!

Sat, 16 Nov 2024-7:56 am,

shukra gochar 2025 effects: ಸಂಪತ್ತನ್ನು ನೀಡುವ ಶುಕ್ರನು ಮಾಲವ್ಯ ರಾಜ್ಯಯೋಗವನ್ನು ರೂಪಿಸಲಿದ್ದಾನೆ. ಈ ರಾಜಯೋಗವು ಮೀನ ರಾಶಿಯಲ್ಲಿ ಶುಕ್ರ ಸಂಚಾರದಿಂದ ರೂಪುಗೊಳ್ಳುತ್ತದೆ. ಇದರಿಂದಾಗಿ ಕೆಲವು ರಾಶಿಗಳ ಜನರ ಅದೃಷ್ಟವು ಬೆಳಗಬಹುದು. ಈ ಭಾಗ್ಯವಂತ ರಾಶಿಗಳು ಯಾವುವು ಎಂದು ತಿಳಿಯೋಣ...

ವೃಷಭ ರಾಶಿ : ಆದಾಯ ಮತ್ತು ಲಾಭ ಎರಡೂ ಹೆಚ್ಚಾಗಲಿವೆ. ಸಾಕಷ್ಟು ಹಣವನ್ನು ಗಳಿಸಬಹುದು. ಆಸ್ತಿ ಅಥವಾ ವಾಹನವನ್ನು ಖರೀದಿಸಬಹುದು. ಪ್ರಗತಿಯ ಬಾಗಿಲುಗಳು ತೆರೆದುಕೊಳ್ಳಬಹುದು. ಹಳೆಯ ಹೂಡಿಕೆಯಿಂದಲೂ ನೀವು ಲಾಭ ಪಡೆಯುತ್ತೀರಿ.

ಧನು ರಾಶಿ : ಭೌತಿಕ ಸಂತೋಷ ಸುಖಗಳು ಹೆಚ್ಚಾಗಲಿವೆ. ವಾಹನ ಮತ್ತು ಆಸ್ತಿಯನ್ನು ಸಹ ಖರೀದಿಸಬಹುದು. ಪೂರ್ವಜರ ಆಸ್ತಿಯ ಲಾಭವನ್ನು ಸಹ ಪಡೆಯಬಹುದು. ಆದಾಯದಲ್ಲಿ ಭಾರಿ ಹೆಚ್ಚಳವಾಗಬಹುದು. ವೃತ್ತಿಜೀವನದಲ್ಲಿಯೂ ಯಶಸ್ಸನ್ನು ಪಡೆಯುತ್ತೀರಿ. ಐಷಾರಾಮಿ ವಸ್ತುಗಳನ್ನು ಖರೀದಿಸಬಹುದು.

ಕರ್ಕಾಟಕ ರಾಶಿ : ಅದೃಷ್ಟವು ಅನುಕೂಲಕರವಾಗಿರುತ್ತದೆ. ಲಾಭ ಮತ್ತು ಪ್ರಗತಿಗೆ ಅನೇಕ ಉತ್ತಮ ಅವಕಾಶಗಳನ್ನು ಪಡೆಯಬಹುದು. ವಿದೇಶಕ್ಕೆ ಪ್ರಯಾಣಿಸಬಹುದು. ಧಾರ್ಮಿಕ ಮತ್ತು ಮಂಗಳಕರ ಕಾರ್ಯಕ್ರಮಗಳಲ್ಲಿ ಭಾಗವಹಿಸಬಹುದು. ಆರ್ಥಿಕವಾಗಿ ಸಾಕಷ್ಟು ಪ್ರಗತಿ ಕಾಣುವಿರಿ.

ಸೂಚನೆ: ಈ ಲೇಖನವು ಧಾರ್ಮಿಕ ಮಾಹಿತಿಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್‌ ಇದನ್ನು ಖಚಿತಪಡಿಸುವುದಿಲ್ಲ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link