Malavya-Shash Rajyog 2024:ಐದು ಶತಮಾನಗಳ ಬಳಿಕ ಮೂರು ರಾಶಿಗಳ ಗೋಚರ ಕುಂಡಲಿಯಲ್ಲಿ ಶಶ-ಮಾಲವ್ಯ ರಾಜಯೋಗ, ಸಿಗಲಿದೆ ಅಪಾರ ಧನ-ಸಂಪತ್ತು-ಸ್ಥಾನಮಾನ-ಪ್ರತಿಷ್ಠೆ

Tue, 09 Jan 2024-4:34 pm,

Malavya-Shash Rajyog 2024: ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ಸುಮಾರು ಐನೂರು ವರ್ಷಗಳ ಬಳಿಕ ಏಕಕಾಲಕ್ಕೆ ಎರಡು ರಾಜಯೋಗಗಳು ನಿರ್ಮಾಣಗೊಳ್ಳುತ್ತಿದ್ದು, ಈ ಯೋಗಗಳ ರಹನೆಯಿಂದ ಕೆಲ ರಾಶಿಗಳ ಜನರ ಜೀವನದಲ್ಲಿ ಒಳ್ಳೆಯ ದಿನಗಳ ಆರಂಭಗೊಳ್ಳಲಿವೆ. (Spiritual News In Kannada)  

ತುಲಾ ರಾಶಿ: ಶಶ-ಮಾಲವ್ಯ ರಾಜಯೋಗಗಳ ಅವಧಿಯಲ್ಲಿ ಶನಿ ನಿಮ್ಮ ಗೋಚರ ಜಾತಕದ ಐದನೇ ಮನೆಯಲ್ಲಿ ಮತ್ತು ಶುಕ್ರ ಆರನೇ ಮನೆಯಲ್ಲಿ ಸಂಚರಿಸಲಿದ್ದಾರೆ. ಹೀಗಾಗಿ ಮಕ್ಕಳಿಗೆ ಸಂಬಂಧಿಸಿದ ಶುಭ ಸಮಾಚಾರ ನಿಮಗೆ ಪ್ರಾಪ್ತಿಯಾಗಲಿದೆ. ಶುಕ್ರ ನಿಮ್ಮ ಗೋಚರ ಜಾತಕದ ಲಗ್ನ ಭಾವಕ್ಕೆ ಅಧಿಪತಿಯಾಗಿದ್ದಾನೆ. ಹೀಗಾಗಿ ನಿಮ್ಮಲ್ಲಿ ಏಕಾಗ್ರತೆ ಹೆಚ್ಚಾಗಲಿದೆ ಮತ್ತು ಬುದ್ಧಿಯ ವಿಕಾಸಕ್ಕೆ ಉತ್ತಮ ನಿರ್ಣಯ ಕೈಗೊಳ್ಳುವ ನಿಮ್ಮ ಸಾಮರ್ಥ್ಯ ಹೆಚ್ಚಾಗಲಿದೆ. ಇದರಿಂದ ನಿಮ್ಮ ವ್ಯಕ್ತಿತ್ವದಲ್ಲಿ ಹೊಸ ಹೊಳಪು ಕಾಣಲು ಸಿಗಲಿದೆ. ಪ್ರೇಮ ಸಂಬಂಧದಲ್ಲಿದ್ದರೆ, ವಿವಾಹ ಮಾತುಕತೆಗೆ ಇದು ಉತ್ತಮ ಸಮಯ.   

ಕುಂಭ ರಾಶಿ: ಈ ಅವಧಿಯಲ್ಲಿ ಶನಿ ನಿಮ್ಮ ಗೋಚರ ಜಾತಕದ ಲಗ್ನ ಭಾವದಲ್ಲಿ ಶಶ ರಾಜಯೋಗ ರೂಪಿಸುತ್ತಿದ್ದರೆ, ಶುಕ್ರ ನಿಮ್ಮ ಗೋಚರ ಜಾತಕದ ಧನಭಾವದಲ್ಲಿ ಸಂಚರಿಸಲಿದ್ದಾನೆ. ಇದರಿಂದ ನಿಮ್ಮ ವ್ಯಕ್ತಿತ್ವದಲ್ಲಿ ನಿಮಗೆ ಹೊಸ ಹೊಳಪು-ಉತ್ಸಾಹ ಕಾಣಲು ಸಿಗಲಿದೆ. ವೃತ್ತಿ ಜೀವನದಲ್ಲಿ ಉನ್ನತಿಯ ಹಲವು ಅವಕಾಶಗಳು ನಿಮಗೆ ಸಿಗಲಿವೆ. ಆದಾಯ ಹೆಚ್ಚಿಸುವ ಹೊಸ ಮಾರ್ಗಗಳು ತೆರೆದುಕೊಳ್ಳಲಿವೆ. ಪಾರ್ಟ್ನರ್ಶಿಪ್ ನಲ್ಲಿ ಬಿಸ್ನೆಸ್ ಮಾಡಲು ನೀವು ಯೋಚಿಸುತ್ತಿದ್ದರೆ, ನಿಮಗೆ ಲಾಭ ಸಿಗಲಿದೆ. ಈ ಅವಧಿಯಲ್ಲಿ ನಿಮಗೆ ಕಾಲಕಾಲಕ್ಕೆ ಧನಲಾಭ ಉಂಟಾಗಲಿದೆ.   

ಮಿಥುನ ರಾಶಿ: ಈ ಅವಧಿಯಲ್ಲಿ ಶನಿ ನಿಮ್ಮ ಗೋಚರ ಜಾತಕದ 9ನೇ ಮನೆಯಲ್ಲಿ ಮತ್ತು ಶುಕ್ರ 12ನೇ ಮನೆಯಲ್ಲಿ ಸಂಚರಿಸಲಿದ್ದಾರೆ. ಇದರಿಂದ ನಿಮಗೆ ನಿಮ್ಮ ವೃತ್ತಿ ಜೀವನ ವ್ಯಾಪಾರದಲ್ಲಿ ಭಾರಿ ಲಾಭದ ಸಂಕೇತಗಳಿವೆ. ಅದೃಷ್ಟದ ಬೆಂಬಲ ನಿಮ್ಮ ಮೇಲಿರಲಿದೆ. ಬುದ್ಧಿ-ಸ್ಮರಣಶಕ್ತಿ ಹೆಚ್ಚಾಗಲಿದೆ. ಇದರಿಂದ ನೀವು ನಿಮ್ಮ ನಿರ್ಧಿಷ್ಟ ಗುರಿಯನ್ನು ತಲುಪುವಲ್ಲಿ ಯಶಸ್ವಿಯಾಗುವಿರಿ. ಸಾಕಷ್ಟು ಪರಿಶ್ರಮ ಪಡುವಿರಿ. ಕಾರ್ಯಸ್ಥಳದಲ್ಲಿ ನಿಮ್ಮ ಕೆಲಸವನ್ನು ಪೂರ್ಣಗೊಳಿಸಲು ನೀವು ನಿಮ್ಮ ಶಕ್ತಿ ಮೀರಿ ಪ್ರಯತ್ನಿಸುವಿರಿ. ಇದರಿಂದ ನೀವು ನಿಮ್ಮ ವೃತ್ತಿಜೀವನದಲ್ಲಿ ಹೊಸ ಎತ್ತರಕ್ಕೆ ತಲುಪುವಿರಿ.   

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಯಾವುದೇ ಮಾಹಿತಿಯ ನಿಖರತೆ ಅಥವಾ ಸ್ಪಷ್ಟತೆಯನ್ನು ಜೀ ಕನ್ನಡ ನ್ಯೂಸ್ ಖಚಿತಪಡಿಸುವುದಿಲ್ಲ. ಜೋತಿಷಿಗಳು, ಪಂಚಾಂಗ, ಮಾನ್ಯತೆಗಳು ಅಥವಾ ಧರ್ಮ ಗ್ರಂಥಗಳಂತಹ ವಿವಿಧ ಮಾಧ್ಯಮಗಳಿಂದ ಸಂಗ್ರಹಿಸಲಾಗಿರುವ ಮಾಹಿತಿಯನ್ನು ನಿಮ್ಮ ಬಳಿ ತಲುಪಿಸುವುದು ಮಾತ್ರ ನಮ್ಮ ಉದ್ದೇಶವಾಗಿದೆ. ಈ ಮಾಹಿತಿಯ ನೈಜತೆ ಹಾಗೂ ಸ್ಪಷ್ಟತೆಯನ್ನು ಖಚಿತಪಡಿಸಲಾಗುವುದಿಲ್ಲ. ಹೀಗಾಗಿ ಯಾವುದೇ ರೀತಿಯಲ್ಲಿ ಈ ಮಾಹಿತಿಯನ್ನು ಬಳಸುವ ಮುನ್ನ ಸಂಬಂಧಿತ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ)  

ZEENEWS TRENDING STORIES

By continuing to use the site, you agree to the use of cookies. You can find out more by Tapping this link