ಏಕಕಾಲದಲ್ಲಿ 9 ಮಕ್ಕಳಿಗೆ ಜನ್ಮ ನೀಡಿದ 25 ವರ್ಷದ ಮಹಿಳೆ, 1 ತಿಂಗಳ ನಂತರ ಪರಿಸ್ಥಿತಿ ಹೇಗಿದೆ ಗೊತ್ತಾ!

Sat, 05 Jun 2021-8:15 am,

ರಬತ್: ಮೊರಾಕೊದಲ್ಲಿ ಪ್ರಕೃತಿಯ ಪವಾಡ ಏನೆಂಬುದು ಮತ್ತೊಮ್ಮೆ ಸಾಬೀತಾಗಿದೆ, ಅಲ್ಲಿ ಒಬ್ಬ ಮಹಿಳೆ 9 ಮಕ್ಕಳಿಗೆ ಏಕಕಾಲದಲ್ಲಿ ಜನ್ಮ ನೀಡಿದಳು. ಈ ಶಿಶುಗಳು ಕಳೆದ ತಿಂಗಳು ಜನಿಸಿದ್ದು ಅವರು ಸಂಪೂರ್ಣವಾಗಿ ಆರೋಗ್ಯವಾಗಿದ್ದಾರೆ. ಆದಾಗ್ಯೂ, ಅವರು ಸಾಮಾನ್ಯ ಜೀವನವನ್ನು ಪ್ರಾರಂಭಿಸಲು ಇನ್ನೂ ಒಂದರಿಂದ ಎರಡು ತಿಂಗಳು ಬೇಕಾಗಬಹುದು ಎಂದು ಹೇಳಲಾಗುತ್ತಿದೆ.

ಎಎಫ್‌ಪಿ ವರದಿಯ ಪ್ರಕಾರ, ಮೊರಾಕೊದಲ್ಲಿ 9 ಮಕ್ಕಳಿಗೆ ಜನ್ಮ ನೀಡಿದ ಮಹಿಳೆಯ ಹೆಸರು ಮಾಲಿ ಮೂಲದ ಹಲೀಮಾ. ಆಕೆಯ ಹೊಟ್ಟೆಯಲ್ಲಿ 7 ಶಿಶುಗಳಿದ್ದು, ಹೆರಿಗೆಯಲ್ಲಿ ಸಮಸ್ಯೆಗಳಿವೆ ಎಂದು ಅಲ್ಟ್ರಾಸೌಂಡ್‌ನಲ್ಲಿ ಕಂಡುಬಂದಿದೆ. ಅಂತಹ ಪರಿಸ್ಥಿತಿಯಲ್ಲಿ ಸರ್ಕಾರ ಅವರನ್ನು ಮೊರಾಕೊಗೆ ಕಳುಹಿಸಿತು.

ಮೊರಾಕೊದಲ್ಲಿ ಹೆರಿಗೆಯ ಸಮಯದಲ್ಲಿ, ಮಹಿಳೆಗೆ ತನ್ನ ಹೊಟ್ಟೆಯಲ್ಲಿರುವುದು ಏಳಲ್ಲ ಒಂಬತ್ತು ಮಕ್ಕಳು ಎಂದು ಗೊತ್ತಾಗಿದೆ. 10 ವೈದ್ಯರ ಜೊತೆಗೆ, 25 ದಾದಿಯರ ತಂಡವು ಅವರ ಹೆರಿಗೆಯ ಸಮಯದಲ್ಲಿ ತೊಡಗಿಸಿಕೊಂಡಿದೆ. ಜನನದ ನಂತರ, ಮಕ್ಕಳ ಸ್ಥಿತಿ ತುಂಬಾ ಗಂಭೀರವಾಗಿತ್ತು.

ಇದನ್ನೂ ಓದಿ -  Soft Toy ಗಳು ನಿಮ್ಮ ಮಕ್ಕಳ ಪಾಲಿಗೆ ಅಪಾಯಕಾರಿಯಾಗಬಹುದು ಎಚ್ಚರಿಕೆ..!

ಮೊರೊಕ್ಕೊದ ಐನ್ ಬೊರ್ಜಾ ಚಿಕಿತ್ಸಾಲಯದ ವಕ್ತಾರ ಅಬ್ದೆಲ್ಕೋಡ್ಡಾಸ್ ಹಫ್ಸಿ, ಮೇ 4 ರಂದು ಮಾಲಿಯನ್ ಮಹಿಳೆ ಜನ್ಮ ನೀಡಿದ ಒಂಬತ್ತು ಶಿಶುಗಳು (New Born Babies) ಈಗ ಆರೋಗ್ಯವಾಗಿವೆ. ಆದರೆ ಇನ್ನೂ ಎರಡು ತಿಂಗಳುಗಳವರೆಗೆ ಅವಲೋಕನದಲ್ಲಿ ಇರಿಸಬೇಕಾಗಿದೆ. ಅದಕ್ಕಾಗಿಯೇ ಅವರನ್ನು ಆಸ್ಪತ್ರೆಯಲ್ಲಿಯೇ ಇರಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ- Coronavirus Third Wave: ಮಕ್ಕಳ ಪಾಲಿಗೆ ಅಪಾಯಕಾರಿ ಸಾಬೀತಾಗಲಿದೆ, ಈ ರಾಜ್ಯದಿಂದ ಆರಂಭ!

ಮಕ್ಕಳಿಗೆ ಟ್ಯೂಬ್‌ಗಳ ಮೂಲಕ ಹಾಲು ನೀಡಲಾಗುತ್ತಿದ್ದು, ಅವರ ತೂಕ ಈಗ 800 ಗ್ರಾಂ ಮತ್ತು 1.4 ಕೆಜಿ ನಡುವೆ ಹೆಚ್ಚಾಗಿದೆ ಎಂದು ಹಫ್ಸಿ ಹೇಳಿದರು. ಈ 9 ಮಕ್ಕಳಲ್ಲಿ ಐದು ಹುಡುಗಿಯರು ಮತ್ತು ನಾಲ್ಕು ಹುಡುಗರು. ಮಕ್ಕಳ ತಾಯಿ ಅವರ ಬಳಿಯೇ ಇದ್ದಾರೆ. ಈ ಒಂಬತ್ತು ಮಕ್ಕಳು ಈಗ ಯಾವುದೇ ವೈದ್ಯಕೀಯ ಉಪಕರಣಗಳಿಲ್ಲದೆ ಉಸಿರಾಡುತ್ತಿದ್ದಾರೆ. ಉಸಿರಾಟದ ತೊಂದರೆಯಿಂದ ಅವರು ಚೇತರಿಸಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link