Soft Toy ಗಳು ನಿಮ್ಮ ಮಕ್ಕಳ ಪಾಲಿಗೆ ಅಪಾಯಕಾರಿಯಾಗಬಹುದು ಎಚ್ಚರಿಕೆ..!

ನಾವು ನಿತ್ಯ ನಮ್ಮ ಬಟ್ಟೆಗಳನ್ನು ಶುಚಿಗೊಳಿಸುವಂತೆ, ಮಕ್ಕಳ ಮೃದುವಾದ ಆಟಿಕೆಗಳನ್ನು ಕೂಡ ನಿತ್ಯ  ತೊಳೆಯಬೇಕು. ಹಾಗೆ ಮಾಡದಿದ್ದರೆ, ಮಕ್ಕಳಲ್ಲಿ ರೈನಾಯಿಟಿಸ್ ಸಮಸ್ಯೆ ಕಾಣಿಸಿಕೊಳ್ಳುವ ಸಾಧ್ಯತೆ ಇದೆ.

Last Updated : Aug 16, 2020, 07:30 PM IST
Soft Toy ಗಳು ನಿಮ್ಮ ಮಕ್ಕಳ ಪಾಲಿಗೆ ಅಪಾಯಕಾರಿಯಾಗಬಹುದು ಎಚ್ಚರಿಕೆ..! title=

ನವದೆಹಲಿ: ಮಕ್ಕಳಿಗೆ ಒಟ್ಟಿಗೆ ಮೃದುವಾದ ಆಟಿಕೆ(Soft Toys)ಗಳೊಂದಿಗೆ ಮಲಗುವ ಅಭ್ಯಾಸ ಇರುತ್ತದೆ. ಅನೇಕ ಮಕ್ಕಳು ಈ ಆಟಿಕೆಗಳನ್ನು ಬಿಟ್ಟು ಆಹಾರವನ್ನು ಸಹ ಸೇವಿಸುವುದಿಲ್ಲ. ಮೃದುವಾದ ಆಟಿಕೆಗಳ ಬಗ್ಗೆ ಅವರು ತುಂಬಾ ಸೆನ್ಸಿಟಿವ್ ಆಗಿರುತ್ತಾರೆ ಮತ್ತು ಅದನ್ನು ಯಾರೊಂದಿಗೂ ಹಂಚಿಕೊಳ್ಳಲು ಅವರು ಇಷ್ಟಪಡುವುದಿಲ್ಲ. ಆದರೆ ಈ ಮೃದು ಆಟಿಕೆಗಳು ಮಕ್ಕಳ ಆರೋಗ್ಯಕ್ಕೆ ಎಷ್ಟು ಹಾನಿಕಾರಕವೆಂದು ನಿಮಗೆ ತಿಳಿದಿದೆಯೇ? ಅವುಗಳನ್ನು ಕಾಲಕಾಲಕ್ಕೆ ತೊಳೆಯಬೇಕು. ಇಲ್ಲದಿದ್ದರೆ ನಿಮ್ಮ ಮಕ್ಕಳಿಗೆ ರೈನಾಯಿಟಿಸ್ ಸಮಸ್ಯೆ ಕಾಣಿಸಿಕೊಳ್ಳುವ ಸಾಧ್ಯತೆ ಇದೆ.

ಏನಿದು ರೈನಾಯಿಟಿಸ್ ಸಮಸ್ಯೆ?
ಆಗಾಗ್ಗೆ ಸೀನುವುದು, ಮೂಗಿನಿಂದ ನೀರಿನಂತಹ ದ್ರವದ ಹರಿಯುವುದು, ಮೂಗು, ಕಣ್ಣು, ಅಂಗೈ ನಲ್ಲಿ ತುರಿಕೆ ಕಾಣಿಸಿಕೊಳ್ಳುವುದು ರೈನಾಯಿಟಿಸ್ ಲಕ್ಷಣಗಳಾಗಿವೆ. ರೈನಾಯಿಟಿಸ್ ಗೆ  ನಿಜವಾದ ಮೂಲ ಧೂಳು ಮತ್ತು ಮಣ್ಣು. ಹವಾಮಾನದಲ್ಲಿನ ಬದಲಾವಣೆಯಿಂದ ರೈನಾಯಿಟಿಸ್ ಸಂಭವಿಸಬಹುದು. ನಾವು ನಿತ್ಯ ನಮ್ಮ ಬಟ್ಟೆಗಳನ್ನು ಶುಚಿಗೊಳಿಸುವಂತೆ, ಮಕ್ಕಳ ಮೃದುವಾದ ಆಟಿಕೆಗಳನ್ನು ಕೂಡ ನಿತ್ಯ  ತೊಳೆಯಬೇಕು. ಹಾಗೆ ಮಾಡದಿದ್ದರೆ, ಮಕ್ಕಳಲ್ಲಿ ರೈನಾಯಿಟಿಸ್ ಸಮಸ್ಯೆ ಕಾಣಿಸಿಕೊಳ್ಳುವ ಸಾಧ್ಯತೆ ಇದೆ. ಕೊಳೆಯಾದ ಮೃದು ಆಟಿಕೆಗಳಿಂದ ಮಕ್ಕಳ ಇಮ್ಯೂನ್ ಸಿಸ್ಟಂ ವೀಕ್ ಆಗುತ್ತದೆ. ಇದರಿಂದ ಮಕ್ಕಳು ಅತಿ ಶೀಘ್ರ ಇನ್ಫೆಕ್ಷನ್ ಗೆ ತುತ್ತಾಗುವ ಸಾಧ್ಯತೆ ಇದೆ.

ಸಾಫ್ಟ್ ಟಾಯ್ ಗಳಿಂದ ಹೇಗೆ ಇನ್ಫೆಕ್ಷನ್ ಆಗುತ್ತದೆ?
ಧೂಳು ಮತ್ತು ಮಣ್ಣು ಎಲ್ಲಕ್ಕಿಂತ ಮೊದಲು ಈ ಸಾಫ್ಟ್ ಟಾಯ್ ಗಳಲ್ಲಿಯೇ ಸೇರುತ್ತವೆ. ನಾವು ನಿತ್ಯ ಅವುಗಳನ್ನು ಶುಚಿಯಾಗಿಡುವುದಿಲ್ಲ. ಇದರಿಂದ ಈ ಆತಿಕೆಗಳಲ್ಲಿ ಹಾನಿಕಾರಕ ಬ್ಯಾಕ್ಟೀರಿಯಾಗಳು ಸೇರುತ್ತವೆ. ಮಕ್ಕಳು ಆಟಿಕೆಗಳನ್ನು ತಮ್ಮ ಪಕ್ಕಕ್ಕಿಟ್ಟು ಮಲಗಿದಾಗ ಈ ಹಾನಿಕಾರಕ ಬ್ಯಾಕ್ಟೀರಿಯಾಗಳು ಉಸಿರಿನ ಮೂಲಕ ಅವರ ದೇಹ ಪ್ರವೇಶಿಸಿ, ಮೂಗಿನಲ್ಲಿ ಬ್ಲಾಕೆಜ್ ನಿರ್ಮಾಣಗೊಳ್ಳುತ್ತದೆ.

ಈ ಆಟಿಕೆಗಳನ್ನು ಹೇಗೆ ಶುಚಿಯಾಗಿಡಬೇಕು?
- ಮೃದುವಾದ ಆಟಿಕೆಗಳನ್ನು ಯಂತ್ರದಿಂದ ತೊಳೆಯಲು ಸಾಧ್ಯವಾದರೆ, ವಾರಕ್ಕೊಮ್ಮೆ ಅವುಗಳನ್ನು ತೊಳೆದು ಚೆನ್ನಾಗಿ ಒಣಗಿಸಿ. ಒಣಗಲು ಅವುಗಳನ್ನು ಬಿಸಿಲಿನಲ್ಲಿ ಇರಿಸಿ.
- ಮೃದುವಾದ ಆಟಿಕೆಗಳು ತೊಳೆದು ಯಂತ್ರದಲ್ಲಿ ತೊಳೆಯಲು ಸಾಧ್ಯವಾದರೆ, ಅವುಗಳನ್ನು ಡಿಟರ್ಜೆಂಟ್‌ನೊಂದಿಗೆ ಬಿಸಿ ನೀರಿನಲ್ಲಿ ಹಾಕಿ ಸ್ಕ್ರಬ್‌ನಿಂದ ಸ್ವಚ್ಛಗೊಳಿಸಿ. 
- ವ್ಯಾಕ್ಯೂಮ್ ಅಥವಾ ಡ್ರೈ ಕ್ಲೀನ್ ಕೂಡ ಮಾಡಬಹುದು.
- ಒಂದು ವೇಳೆ ಮಕ್ಕಳಿಗೆ ಸಾಫ್ಟ್ ಟಾಯ್ ಪಕ್ಕಕ್ಕಿಟ್ಟು ಮಲಗುವ ರೂಢಿ ಇದ್ದರೆ, ಅವರು ಮಲಗಿದ ಬಳಿಕ ಆಟಿಕೆಯನ್ನು ನಿಧಾನಕ್ಕೆ ತೆಗೆದಿಡಿ.
- ಕೇವಲ ಒಂದೆರಡು ಆಟಿಕೆಗಳನ್ನು ಮಾತ್ರ ನೀಡಿ. ಉಳಿದ ಆಟಿಕೆಗಳನ್ನು ಪ್ಲಾಸ್ಟಿಕ್ ಶೀಟ್ ನಲ್ಲಿ ಪ್ಯಾಕ್ ಮಾಡಿ ಕೊಡಿ.
- ಸಾಫ್ಟ್ ಟಾಯ್ ನಿಂದ ಅವರ ಗಮನ ಬೇರೆಡೆ ಸೆಳೆಯಲು ಇತರ ಚಟುವಟಿಕೆಗಳತ್ತ ಅವರ ಗಮನ ಸೆಳೆಯಿರಿ.

Trending News