Mangal Gochara: ಸೂರ್ಯನ ರಾಶಿಯಲ್ಲಿ ಮಂಗಳನ ಪ್ರವೇಶ ಈ 4 ರಾಶಿಯವರಿಗೆ ಅದೃಷ್ಟ
ವೈದಿಕ ಜ್ಯೋತಿಷ್ಯದಲ್ಲಿ ಧೈರ್ಯ, ಶೌರ್ಯ, ಶಕ್ತಿ, ಭೂಮಿ ಮತ್ತು ಮದುವೆಯ ಅಂಶ ಎಂದು ಪರಿಗಣಿಸಲ್ಪಡುವ ಮಂಗಳನು ಜಾತಕದಲ್ಲಿ ಅಶುಭ ಸ್ಥಾನದಲ್ಲಿದ್ದರೆ ಅಂತಹ ವ್ಯಕ್ತಿ ಸೋಮಾರಿಯಾಗಬಹುದು, ಇಲ್ಲವೇ ಭಯ ಅವನನ್ನು ಬೆಂಬಿಡದೆ ಕಾಡುತ್ತದೆ ಎನ್ನಲಾಗುವುದು. ಅದೇ ಮಂಗಳ ಶುಭ ಸ್ಥಾನದಲ್ಲಿದ್ದರೆ, ಅಂತಹ ವ್ಯಕ್ತಿಯು ನಿರ್ಭೀತನಾಗಿದ್ದು ಭೂಮಿಯ ಒಡೆಯನಾಗುತ್ತಾನೆ ಎಂದು ನಂಬಲಾಗಿದೆ.
ಇದೀಗ ಜುಲೈ 7, 2023 ರಂದು, ಮಂಗಳ ರಾಶಿ ಪರಿವರ್ತನೆ ಹೊಂದಿ ಸಿಂಹ ರಾಶಿಯನ್ನು ಪ್ರವೇಶಿಸಲಿದ್ದಾನೆ. ಮಂಗಳ ಗ್ರಹದ ಸಂಚಾರವು ದ್ವಾದಶ ರಾಶಿಯವರ ಮೇಲೆ ಪರಿಣಾಮ ಬೀರುತ್ತದೆ. ಆದರೂ, ಈ ಸಂಯವನ್ನು ಕೆಲವು ರಾಶಿಯವರಿಗೆ ಭಾಗ್ಯೋದಯದ ಸಮಯ ಎಂದು ಬಣ್ಣಿಸಲಾಗುತ್ತಿದೆ. ಆ ಅದೃಷ್ಟದ ರಾಶಿಗಳು ಯಾವುವೆಂದರೆ...
ಮಂಗಳ ರಾಶಿ ಪರಿವರ್ತನೆಯು ವೃಷಭ ರಾಶಿಯವರಿಗೆ ವ್ಯವಹಾರದಲ್ಲಿ ಬಂಪರ್ ಲಾಭವನ್ನು ನೀಡಲಿದೆ. ಮಾತ್ರವಲ್ಲ, ದಿಢೀರ್ ಧನಾಗಮನದಿಂದ ನಿಮ್ಮ ಸಾಲಗಳಿಂದ ಮುಕ್ತಿ ದೊರೆತು, ನೀವು ಬಹು ದಿನಗಳಿಂದ ಯೋಚಿಸುತ್ತಿದ್ದ ಭೂಮಿ, ವಾಹನವನ್ನು ಖರೀದಿಸಬಹುದು.
ಸ್ವ ರಾಶಿಗೆ ಮಂಗಳ ಪ್ರವೇಶಿಸುತ್ತಿರುವುದು ಈ ರಾಶಿಯವರಿಗೆ ಶುಭ ಫಲಗಳನ್ನು ನೀಡಳಿದ್ದೆ. ಈ ಸಮಯದ್ಲಲಿ ನೀವು ಯಾವ ಕೆಲಸಕ್ಕೆ ಕೈ ಹಾಕಿದರೂ ಯಶಸ್ಸು ನಿಮ್ಮದಾಗಲಿದೆ. ನಿಮ್ಮ ಪ್ರತಿ ಕೆಲಸದಲ್ಲೂ ಅದೃಷ್ಟದ ಬೆಂಬಲ ದೊರೆಯಲಿದ್ದು ಭೂಮಿ, ಕಟ್ಟಡ ಮತ್ತು ಹಣದ ವಿಷಯದಲ್ಲಿ ಭಾಗ್ಯೋದಯದ ಸಮಯ. ಆರೋಗ್ಯವೂ ಉತ್ತಮವಾಗಿರಲಿದೆ.
ವೃಶ್ಚಿಕ ರಾಶಿಯವರ ಅಧಿಪತಿ ಗ್ರಹವಾದ ಮಂಗಳನ ರಾಶಿ ಪರಿವರ್ತನೆಯು ಈ ರಾಶಿಯವರಿಗೆ ವೃತ್ತಿ ಬದುಕಿನಲ್ಲಿ ಭಾಗ್ಯೋದಯವನ್ನು ಕರುಣಿಸಲಿದೆ. ಈ ವೇಳೆ ನಿರುದ್ಯೋಗಿಗಳಿಗೆ ಉದ್ಯೋಗ, ಸರ್ಕಾರಿ ಕೆಲಸಕ್ಕಾಗಿ ಪ್ರಯತ್ನಿಸುತ್ತಿರುವವರಿಗೆ ಸರ್ಕಾರಿ ಉದ್ಯೋಗದ ಜೊತೆಗೆ ಧನಾಗಮನವೂ ಆಗಲಿದೆ. ನಿಮ್ಮ ಜವಾಬ್ದಾರಿಗಳು ಹೆಚ್ಚಾಗಳಿದ್ದು, ಪ್ರತಿ ಕೆಲಸದಲ್ಲೂ ಅದೃಷ್ಟದ ಬೆಂಬಲವೂ ದೊರೆಯಲಿದೆ.
ಮಂಗಳ ರಾಶಿ ಪರಿವರ್ತನೆಯಿಂದ ಈ ರಾಶಿಯವರಿಗೆ ಅದೃಷ್ಟದ ಬಾಗಿಲುಗಳು ತೆರೆಯಲಿವೆ. ದೀರ್ಘ ಸಮಯದಿಂದ ಸ್ಥಗಿತಗೊಂಡಿದ್ದ ಕೆಲಸಗಳು ವೇಗ ಪಡೆಯಲಿದ್ದು ನಿಮ್ಮ ಪ್ರಯತ್ನಕ್ಕೆ ತಕ್ಕ ಪ್ರತಿಫಲ ದೊರೆಯಲಿದೆ. ನೀವು ವಿದ್ಯಾಭ್ಯಾಸಕ್ಕಾಗಿ, ಇಲ್ಲವೇ ಉದ್ಯೋಗಕ್ಕಾಗಿ ವಿದೇಶಕ್ಕೆ ಹೋಗಲು ಬಯಸಿದರೆ ಅತ್ಯುತ್ತಮ ಸಮಯ ಇದಾಗಿದೆ.
ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.