Raja Yoga: ಮಂಗಳ-ಶುಕ್ರರ ಯುತಿಯಿಂದ ರಾಜಯೋಗ ನಿರ್ಮಾಣ, ಡಿಸೆಂಬರ್ ನಲ್ಲಿ ಈ ರಾಶಿಗಳ ಜನರಿಗೆ ಜಬರ್ದಸ್ತ್ ಲಾಭ

Thu, 24 Nov 2022-7:12 pm,

1. ಒಂದೇ ರಾಶಿಯಲ್ಲಿ ಎರಡು ಗ್ರಹಗಳ ಸಂಚಾರ ನಡೆದರೆ ಅದರಿಂದ ಶುಭ ಮತ್ತು ಅಶುಭ ಯೋಗಗಳು ರೂಪಗೊಳ್ಳುತ್ತವೆ. ಈ ರೀತಿ ನಿರ್ಮಾಣಗೊಳ್ಳುವ ಮಂಗಳಕರ ಯೋಗದಿಂದ ಒಬ್ಬ ವ್ಯಕ್ತಿ ತನ್ನ ಜೀವನದಲ್ಲಿ ಸಾಕಷ್ಟು ಪ್ರಯೋಜನವನ್ನು ಪಡೆಯುತ್ತಾನೆ ಮತ್ತು ಅವನ ಅದೃಷ್ಟ ಬದಲಾಗುತ್ತದೆ. ಇನ್ನೊಂದೆಡೆ, ಅಶುಭ ಯೋಗದಿಂದ ಅನೇಕ ರೀತಿಯ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಜ್ಯೋತಿಷ್ಯ ಶಾಸ್ತ್ರದಲ್ಲಿ ರಾಜಯೋಗವನ್ನು ಅತ್ಯಂತ ಮಂಗಳಕರ ಯೋಗವೆಂದು ಪರಿಗಣಿಸಲಾಗಿದೆ.  

2. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಡಿಸೆಂಬರ್ ತಿಂಗಳು ಕೆಲ ರಾಶಿಗಳ ಜಾತಕದವರ ಪಾಲಿಗೆ ತುಂಬಾ ವಿಶೇಷವಾಗಿರಲಿದೆ. ಪ್ರಸ್ತುತ ನವೆಂಬರ್ 13 ರಂದು, ಮಂಗಳ ವೃಷಭ ರಾಶಿಗೆ ಪ್ರವೇಶಿಸಿದ್ದಾನೆ. ಇದೇ ವೇಳೆ ಶುಕ್ರ ಗ್ರಹ ಕೂಡ ಧನು ರಾಶಿಗೆ ಪ್ರವೇಶಿಸಿದೆ. ಇಂತಹ ಪರಿಸ್ಥಿತಿಯಲ್ಲಿ, ಡಿಸೆಂಬರ್ ನಲ್ಲಿ ಮಂಗಳ ಮತ್ತು ಶುಕ್ರನ ಸಂಯೋಜನೆಯಿಂದ ರೂಪುಗೊಳ್ಳುವ ರಾಜಯೋಗವು ಕೆಲವು ರಾಶಿಚಕ್ರ ಚಿಹ್ನೆಗಳಿಗೆ ತುಂಬಾ ಪ್ರಯೋಜನಕಾರಿಯಾಗಿದೆ.  

3. ಈ ಅವಧಿಯಲ್ಲಿ, ವೃಷಭ ರಾಶಿಯ ಜನರು ಸಾಕಷ್ಟು ಆತ್ಮವಿಶ್ವಾಸದಿಂದ ಕೂಡಿರುತ್ತಾರೆ. ಪ್ರತಿಯೊಂದು ಕೆಲಸದಲ್ಲಿ ಅವರಿಗೆ ಯಶಸ್ಸು ಸಿಗಲಿದೆ, ಅಂದರೆ ಇವರು  ಕೈ ಹಾಕುವ ಯಾವುದೇ ಕೆಲಸದಲ್ಲಿ, ಪ್ರಚಂಡ ಯಶಸ್ಸು ಗಳಿಸಲಿದ್ದಾರೆ. ಸಂಪತ್ತು ಮತ್ತು ಸಂತೋಷದ ಸಾಧನಗಳು ಹೆಚ್ಚಾಗಲಿವೆ.  ಹೊಸ ಆದಾಯದ ಮೂಲಗಳು ಸೃಷ್ಟಿಯಾಗುತ್ತಿದ್ದು, ಅಪಾರ ಆರ್ಥಿಕ ಲಾಭ ನಿಮ್ಮದಾಗಲಿದೆ.  

4. ಕರ್ಕ ರಾಶಿಯವರಿಗೆ ರಾಶಿಯವರಿಗೆ ಮಂಗಳ ಮತ್ತು ಶುಕ್ರರ ಯುತಿಯಿಂದ ರೂಪುಗೊಂಡ ರಾಜಯೋಗದಿಂದ ಹೆಚ್ಚಿನ ಲಾಭ ಸಿಗಲಿದೆ. ದಾಂಪತ್ಯ ಜೀವನದಲ್ಲಿ ಮಧುರತೆ ಇರುತ್ತದೆ. ಉದ್ಯೋಗ, ವೃತ್ತಿಪರರು ಮತ್ತು ವ್ಯಾಪಾರಸ್ಥರ ಅದೃಷ್ಟವು ಸೂರ್ಯನ ಹಾಗೆ ಹೊಳೆಯಲಿದೆ ಮತ್ತು ಅವರು ಶುಭ ಫಲಿತಾಂಶಗಳನ್ನು ಪಡೆಯಲಿದ್ದಾರೆ. ಭೌತಿಕ ಸೌಕರ್ಯಗಳ ಸಾಧನಗಳಲ್ಲಿ ಹೆಚ್ಚಳವಾಗಲಿದೆ.  

5. ಮಂಗಳ-ಶುಕ್ರರಿಂದ ನಿರ್ಮಾಣಗೊಳ್ಳುತ್ತಿರುವ ಈ ರಾಜಯೋಗವು ಧನು ಜಾತಕದವರ ಪಾಲಿಗೆ ತುಂಬಾ ಶುಭ ಫಲಪ್ರದಾಯಿ ಸಾಬೀತಾಗಲಿದೆ. ಈ ಅವಧಿಯಲ್ಲಿ ನೀವು ಮಾಡುವ ಎಲ್ಲಾ ಕೆಲಸಗಳಲ್ಲಿ ನಿಮಗೆ ಯಶಸ್ಸು ಸಿಗಲಿದೆ. ಕೌಟುಂಬಿಕ ಜೀವನ ಸಂತೋಷದಿಂದ ಕೂಡಿರಲಿದೆ. ಅಪಾರ ಧನಪ್ರಾಪ್ತಿಯ ಸಂಕೇತಗಳು ಗೋಚರಿಸುತ್ತಿವೆ. ಹೊಸ ಮೂಲಗಳಿಂದ ಆದಾಯ ಹರಿದುಬರಲಿದೆ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link