Premature White Hair Remedies:ಬೇಸಿಗೆಯಲ್ಲಿ ಹೇರಳವಾಗಿ ಸಿಗುವ ಈ ಹಣ್ಣಿನ ಎಲೆಯಿದ್ದರೆ ಸಾಕು ಬಿಳಿ ಕೂದಲನ್ನು ಬುಡ ದಿಂದಲೇ ಕಪ್ಪಾಗಿಸಲು !
ದೇಹದಲ್ಲಿ ಮೆಲನಿನ್ ಕೊರತೆಯಾದಾಗ ನಮ್ಮ ಕೂದಲು ಬೆಳ್ಳಗಾಗುತ್ತದೆ.ಆದರೆ ಕಡಿಮೆ ಪೋಷಕಾಂಶದ ಆಹಾರವನ್ನು ಸೇವಿಸುವುದರಿಂದಲೂ ಈ ಸಮಸ್ಯೆ ಎದುರಾಗುತ್ತದೆ.
ಬಿಳಿ ಕೂದಲನ್ನು ಮತ್ತೆ ಕಪ್ಪಾಗಿಸಲು ನೈಸರ್ಗಿಕ ಪರಿಹಾರಗಳನ್ನು ಪ್ರಯತ್ನಿಸಬಹುದು. ಮಾವಿನ ಎಲೆಗಳು ಬಿಳಿ ಕೂದಲನ್ನು ಕಪ್ಪಾಗಿಸಲು ಸಹಾಯ ಮಾಡುತ್ತವೆ.
ಮಾವಿನ ಎಲೆಗಳಲ್ಲಿ ವಿಟಮಿನ್ ಎ, ವಿಟಮಿನ್ ಬಿ, ವಿಟಮಿನ್ ಸಿ, ಮೆಗ್ನೀಸಿಯಮ್, ಪೊಟ್ಯಾಸಿಯಮ್ ಮತ್ತು ತಾಮ್ರ ಕಂಡುಬರುತ್ತದೆ. ಇದಲ್ಲದೇ ಮಾವಿನ ಎಲೆಗಳಲ್ಲಿ ಫಿನಾಲ್ ಎಂಬ ಆ್ಯಂಟಿ ಆಕ್ಸಿಡೆಂಟ್ ಇದ್ದು, ನಮ್ಮ ಕೂದಲು ಬಿಳಿಯಾಗುವುದನ್ನು ತಡೆಯುತ್ತದೆ.
ಮೊದಲು ಮಾವಿನ ಎಲೆಗಳನ್ನು ಕಿತ್ತು ಈಗ ಅದನ್ನು ಪುಡಿಮಾಡಿ ಪೇಸ್ಟ್ ತಯಾರಿಸಿ. ಈಗ ಅದನ್ನು ಕೂದಲಿಗೆ ಹಚ್ಚಿ ಮತ್ತು ಸುಮಾರು ಅರ್ಧ ಘಂಟೆಯವರೆಗೆ ಬಿಟ್ಟು ಕೂದಲನ್ನು ತೊಳೆಯಿರಿ. ನಿಯಮಿತವಾಗಿ ಇದನ್ನೂ ಮಾಡುತ್ತಾ ಬಂದರೆ ಕೆಲವೇ ವಾರಗಳಲ್ಲಿ ಬಿಳಿ ಕೂದಲು ಕಪ್ಪಾಗುವುದು.
ಮಾವಿನ ಎಲೆಗಳನ್ನು ಕೆಲವು ಪೇರಳೆ ಎಲೆಗಳೊಂದಿಗೆ ತೆಗೆದುಕೊಂಡು ಅವುಗಳನ್ನು ಒಂದು ಪಾತ್ರೆಯಲ್ಲಿ ನೀರಿನೊಂದಿಗೆ ಚೆನ್ನಾಗಿ ಕುದಿಸಿ. ನೀರಿನ ಬಣ್ಣ ಬದಲಾದ ತಕ್ಷಣ, ಒಲೆಯಿಂದ ಪಾತ್ರೆಯನ್ನು ಕೆಳಗಿಳಿಸಿ ನೀರು ತಣ್ಣಗಾಗಲು ಬಿಡಿ. ಈ ನೀರನ್ನು ತಲೆಯ ಬುಡಕ್ಕೆ ಹಚ್ಚಿ. ನಿಯಮಿತವಾಗಿ ಹೀಗೆ ಮಾಡುವುದರಿಂದ ಕೂದಲು ಕಪ್ಪಾಗುವುದು ಮಾತ್ರವಲ್ಲದೆ ಬಿಳಿ ಕೂದಲು ಬೆಳೆಯುವುದು ಕಡಿಮೆಯಾಗುತ್ತದೆ. ( ಸೂಚನೆ :ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು, ದಯವಿಟ್ಟು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. ZEE NEWS ಇದನ್ನು ಖಚಿತಪಡಿಸುವುದಿಲ್ಲ.)