ಈ ಹಣ್ಣನ್ನು ಸಿಪ್ಪೆ ಸಮೇತ ಕಚ್ಚಿ ತಿಂದರೆ ಕಣ್ಣ ದೃಷ್ಟಿ ಎಷ್ಟೇ ಮಂಜಾಗಿದ್ದರೂ ಶಾರ್ಪ್ ಆಗುತ್ತೆ: 80ರ ವಯಸ್ಸಲ್ಲೂ ಕನ್ನಡಕ ಹಾಕುವ ಅಗತ್ಯವೇ ಬರಲ್ಲ
ಮಾವು ಆರೋಗ್ಯಕ್ಕೆ ನಿಧಿ ಎನ್ನುತ್ತಾರೆ. ಮಾವು ರುಚಿಯಲ್ಲಿ ಮಾತ್ರವಲ್ಲದೆ ಬೇಸಿಗೆಯಲ್ಲಿ ಹೆಚ್ಚು ಮಾರಾಟವಾಗುವ ಈ ಹಣ್ಣು ಆರೋಗ್ಯಕ್ಕೂ ಅತ್ಯುತ್ತಮವಾಗಿದೆ. ಇನ್ನು ಮಾವಿನ ಹಣ್ಣನ್ನು ತಿನ್ನುವುದರಿಂದ ಆಗುವ ಆರೋಗ್ಯ ಲಾಭಗಳೇನು ಎಂಬುದನ್ನು ತಿಳಿಯೋಣ.
ಮಾವಿನ ಹಣ್ಣಿನಲ್ಲಿ ವಿಟಮಿನ್ ಎ ಹೇರಳವಾಗಿದೆ. ಈ ಕಾರಣಕ್ಕಾಗಿ ಇದು ಕಣ್ಣುಗಳಿಗೆ ಪ್ರಯೋಜನಕಾರಿಯಾಗಿದೆ. ದೃಷ್ಟಿ ಸುಧಾರಿಸಲು ಮಾವಿನ ಹಣ್ಣನ್ನು ತಿನ್ನಬೇಕು. ಅನೇಕರು ಸಿಪ್ಪೆ ತೆಗೆದು ಮಾವಿನ ಹಣ್ಣನ್ನು ತಿನ್ನುತ್ತಾರೆ. ಆದರೆ ಕಣ್ಣಿನ ಆರೋಗ್ಯಕ್ಕೆ ಮಾವಿನ ಸಿಪ್ಪೆಯೇ ಪ್ರಮುಖವಾದುದು. ಹೀಗಾಗಿ ಸಿಪ್ಪೆ ಸಮೇತ ಮಾವು ತಿಂದರೆ ಕಣ್ಣ ದೃಷ್ಟಿ ಸುಧಾರಿಸುತ್ತದೆ.
ಮಾವು ರುಚಿಕರವಾಗಿರುವುದರ ಜೊತೆಗೆ, ಕೆಟ್ಟ ಕೊಲೆಸ್ಟ್ರಾಲ್ ಅನ್ನು ನಿಯಂತ್ರಿಸುವಲ್ಲಿ ಸಹಾಯ ಮಾಡುತ್ತದೆ. ಇದರಲ್ಲಿ ಫೈಬರ್ ಮತ್ತು ವಿಟಮಿನ್ ಸಿ ಸಮೃದ್ಧವಾಗಿದೆ.
ಮಾವಿನಹಣ್ಣಿನ ಸೇವನೆಯಿಂದ ತೂಕ ಕೂಡ ಕಡಿಮೆಯಾಗುತ್ತದೆ. ಮಾವಿನಹಣ್ಣಲ್ಲಿ ಇರುವ ಫೈಬರ್ಗಳು ದೇಹದಲ್ಲಿ ಸಂಗ್ರಹವಾದ ಹೆಚ್ಚುವರಿ ಕೊಬ್ಬನ್ನು ಕಡಿಮೆ ಮಾಡಲು ಪರಿಣಾಮಕಾರಿಯಾಗಿದೆ. ಇದರೊಂದಿಗೆ ಮಾವಿನ ಹಣ್ಣನ್ನು ಸೇವಿಸುವುದರಿಂದ ಹಸಿವು ಕಡಿಮೆಯಾಗುತ್ತದೆ.
ನೆನಪಿನ ಶಕ್ತಿ ಹೆಚ್ಚಿಸುವಲ್ಲಿಯೂ ಮಾವು ಸಹಕಾರಿ. ಗ್ಲುಟಾಮಿನ್ ಆಸಿಡ್ ಎಂಬ ಅಂಶ ಇದರಲ್ಲಿ ಕಂಡುಬರುತ್ತದೆ. ಈ ಅಂಶವು ಸ್ಮರಣೆಯನ್ನು ಹೆಚ್ಚಿಸಲು ಕೆಲಸ ಮಾಡುತ್ತದೆ.
ಮಾವು ಶಾಖದ ಹೊಡೆತದಿಂದ ರಕ್ಷಿಸುತ್ತದೆ. ಮನೆಯಿಂದ ಹೊರಗೆ ಹೋಗುವ ಮೊದಲು ನೀವು ಒಂದು ಲೋಟ ಮಾವಿನ ಹಣ್ಣಿನ ಜ್ಯೂಸ್ ಕುಡಿದರೆ, ಅದು ನಿಮ್ಮನ್ನು ಶಾಖದ ಹೊಡೆತದಿಂದ ರಕ್ಷಿಸಲು ಸಹಾಯ ಮಾಡುತ್ತದೆ.
ಗಮನಿಸಿ: ಈ ಲೇಖನವು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. zee kannada news ಇದನ್ನು ಖಚಿತಪಡಿಸುವುದಿಲ್ಲ.