ಮಹಿಳೆಯರು ಈ ದಿನ ತಲೆ ಸ್ನಾನ ಮಾಡಿದರೆ ಪತಿಯ ಆಯಸ್ಸು,ಐಶ್ವರ್ಯ ಎರಡಕ್ಕೂ ಬರುವುದು ಕುತ್ತು!ಸಂಸಾರದ ಸುಖ, ಶಾಂತಿಗೆ ಬರುವುದು ಆಪತ್ತು !
ನಮ್ಮ ಹಿರಿಯರು ಈ ದಿನ ಕೂದಲು ಕತ್ತರಿಸಬಾರದು, ಉಗುರು ಕತ್ತರಿಸಬಾರದು, ಎನ್ನುವ ಕಟ್ಟುಪಾಡುಗಳನ್ನು ಹೇಳುತ್ತಾರೆ.ಹಾಗೆಯೇ ಸುಮಂಗಲಿಯರು ಕೆಲವು ದಿನ ತಲೆ ಸ್ನಾನ ಮಾಡಬಾರದು.
ಈ ಎಲ್ಲಾ ಕಟ್ಟು ಕಟ್ಟಳೆಯನ್ನು ನಮ್ಮ ವಾಸ್ತುಗ್ರಂಥದಲ್ಲಿ ಬರೆಯಲಾಗಿದೆ. ಈ ನಿಯಮಗಳನ್ನು ಅನುಸರಿಸುವುದರಿಂದ ಸುಖ, ಶಾಂತಿ, ನೆಮ್ಮದಿಯ ಬದುಕು ನಮ್ಮದಾಗುವುದು.
ಮದುವೆಯಾಗದ ಹೆಣ್ಣು ಮಕ್ಕಳು ಬುಧವಾರದ ದಿನ ತಲೆ ಸ್ನಾನ ಮಾಡಬಾರದು.ಒಂದು ವೇಳೆ ಹೀಗೆ ಮಾಡಿದರೆ ಅವರ ಮದುವೆ ತಡವಾಗುತ್ತದೆಯಂತೆ.ಮಾತ್ರವಲ್ಲ ಜೀವನದಲ್ಲಿ ತೊಂದರೆಗಳನ್ನು ಎದುರಿಸಬೇಕಾಗಿ ಬರಬಹುದು ಎಂದು ಹೇಳಲಾಗುತ್ತದೆ.
ವಿವಾಹಿತ ಮಹಿಳೆಯರು ಮಂಗಳವಾರ, ಗುರುವಾರ ಮತ್ತು ಶನಿವಾರದಂದು ತಲೆ ಸ್ನಾನ ಮಾಡಬಾರದು.ಆ ದಿನಗಳಲ್ಲಿ ಸ್ನಾನ ಮಾಡುವುದರಿಂದ ಮನೆಯಲ್ಲಿ ನಕಾರಾತ್ಮಕತೆ ಹೆಚ್ಚಾಗುತ್ತದೆ.ಆರ್ಥಿಕ ಸಮಸ್ಯೆ ಎದುರಾಗಿ, ಸಾಲದ ಹೊರೆ ಕೂಡಾ ಹೆಚ್ಚುತ್ತದೆಯಂತೆ.
ಸುಮಂಗಲಿಯರು ಗುರುವಾರ ತಲೆ ಸ್ನಾನ ಮಾಡಿದರೆ ಗಂಡನ ಆಯುಷ್ಯ ಕಡಿಮೆಯಾಗುತ್ತದೆಯಂತೆ. ಇದರ ಜೊತೆಗೆ ಮನೆಗೆ ದುರಾದೃಷ್ಟ ಪ್ರವೇಶವಾಗುತ್ತದೆಯಂತೆ. ಇದು ವಿಷ್ಣು ಮತ್ತು ಲಕ್ಷ್ಮೀಯ ಕೋಪಕ್ಕೂ ಕಾರಣವಾಗುತ್ತದೆಯಂತೆ.
ವಿವಾಹಿತ ಮಹಿಳೆಯರು ಶನಿವಾರ ತಲೆಗೆ ಸ್ನಾನ ಮಾಡಿದರೆ ಶನಿದೇವರ ಕೋಪಕ್ಕೆ ಗುರಿಯಾಗಬೇಕಾಗುತ್ತದೆ.ಇದರ ಜೊತೆಗೆ ವಿವಾಹಿತ ಮಹಿಳೆಯರು ಅಮವಾಸ್ಯೆ, ಹುಣ್ಣಿಮೆ ಮತ್ತು ಏಕಾದಶಿಯಂದು ಕೂಡಾ ತಲೆ ಸ್ನಾನ ಮಾಡಬಾರದು.
ವಿವಾಹಿತ ಮಹಿಳೆಯರು ಬುಧವಾರ ಮತ್ತು ಶುಕ್ರವಾರ ತಲೆ ಸ್ನಾನ ಮಾಡಿದರೆ ಸಂಪತ್ತು ಹೆಚ್ಚುತ್ತದೆಯಂತೆ. ಬೇಗನೆ ಶ್ರೀಮಂತರಾಗಬೇಕೆಂದರೆ ಬುಧವಾರ ಮತ್ತು ಶುಕ್ರವಾರ ತಲೆ ಸ್ನಾನ ಮಾಡಿ.
ಸೂಚನೆ: ಈ ಲೇಖನವು ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ, ಅಂತರ್ಜಾಲದಲ್ಲಿ ಲಭ್ಯವಿರುವ ಮಾಹಿತಿಯನ್ನು ನೀಡಲಾಗಿದೆ. Zee Kannada News ಇದನ್ನು ಖಚಿತಪಡಿಸುವುದಿಲ್ಲ.