ಹೊಸ ವರ್ಷಾರಂಭದಲ್ಲಿಯೇ ತನ್ನ ಉಚ್ಚ ರಾಶಿಗೆ ಮಂಗಳನ ಪ್ರವೇಶ, ಈ ರಾಶಿಗಳ ಜನರಿಗೆ ಭಾರಿ ಧನಸಂಪತ್ತು ಪ್ರಾಪ್ತಿ!
Mars Entry In Capricorn 2024: ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ಹೊಸ ವರ್ಷದ ಆರಂಭದಲ್ಲಿಯೇ ಮಂಗಳ ತನ್ನ ಉಚ್ಚ ರಾಶಿಯಾಗಿರುವ ಮಕರ ರಾಶಿಗೆ ಪ್ರವೇಶಿಸಲಿದ್ದು, ಇದರಿಂದ ಕೆಲ ಜನರಿಗೆ ಅಪಾರ ಧನ ಪ್ರಾಪ್ತಿಯ ಯೋಗ ರೂಪುಗೊಳ್ಳುತ್ತಿದೆ. (Spiritual News In Kannada)
ಮೇಷ ರಾಶಿ: ನಿಮ್ಮ ಗೋಚರ ಜಾತಕದ ವೃತ್ತಿ ಜೀವನ ಮತ್ತು ವ್ಯಾಪಾರ ತಾಣದಲ್ಲಿ ಮಂಗಳನ ಈ ಗೋಚರ ನೆರವೇರುತ್ತಿದೆ. ಹೀಗಾಗಿ ಈ ಅವಧಿಯಲ್ಲಿ ನಿಮ್ಮ ಕಾರ್ಯಶೈಲಿಯಲ್ಲಿ ಹೊಸ ಹುರುಪು ನೋಡಲು ನಿಮಗೆ ಸಿಗಲಿದೆ. ಈ ಅವಧಿಯಲ್ಲಿ ನೀವು ನಿಮ್ಮ ಕೌಶಲ್ಯ ಹಾಗೂ ಪರಾಕ್ರಮದ ಸಹಾಯದಿಂದ ನಿಮ್ಮ ವೈಯಕ್ತಿಕ ಹಾಗೂ ವೃತ್ತಿ ಜೀವನದಲ್ಲಿ ಸಂಬಂಧಗಳನ್ನು ಗಟ್ಟಿಗೊಳಿಸುವಿರಿ. ರಿಯಲ್ ಎಸ್ಟೇಟ್ ಹಾಗೂ ಭೂಮಿಗೆ ಸಂಬಂಧಿಸಿದ ಕೆಲಸಗಳಲ್ಲಿ ನೀವು ನಿರತರಾಗಿದ್ದಾರೆ ನಿಮಗೆ ಉತ್ತಮ ಲಾಭ ಉಟ್ನಾಗಲಿದೆ. ನೌಕರವರ್ಗದ ಜನರಿಗೆ ಈ ಅವಧಿಯಲ್ಲಿ ಪದೋನ್ನತಿಯ ಎಲ್ಲಾ ಸಂಕೇತಗಳು ಗೋಚರಿಸುತ್ತಿವೆ.
ವೃಷಭ ರಾಶಿ: ಈ ಅವಧಿಯಲ್ಲಿ ಮಂಗಳ ನಿಮ್ಮ ಗೋಚರ ಜಾತಕದ ನವಮಭಾವದಲ್ಲಿ ಸಂಚರಿಸಲಿದ್ದಾನೆ. ಹೀಗಾಗಿ ಈ ಅವಧಿಯಲ್ಲಿ ನಿಮ್ಮ ಕೆಲಸ ಕಾರ್ಯಗಳಲ್ಲಿ ಉನ್ನತಿಯ ಎಲ್ಲಾ ಲಕ್ಷಣಗಳು ಗೋಚರಿಸುತ್ತಿವೆ. ಇದರ ಜೊತೆಗೆ ಈ ಅವಧಿಯಲ್ಲಿ ನಿಮಗೆ ಅದೃಷ್ಟದ ಸಂಪೂರ್ಣ ಬೆಂಬಲ ಸಿಗಲಿದೆ. ನೀವು ಅಂದುಕೊಂಡ ಯೋಜನೆಗಳು ಪೂರ್ಣಗೊಳ್ಳಲಿವೆ. ಪ್ರೊಫೆಷನಲ್ ಲೈಫ್ ನಲ್ಲಿ ಉನ್ನತಿಯ ಯೋಗವಿದೆ. ಸ್ಪರ್ಧಾತ್ಮಕ ಪರೀಕ್ಷೆಯ ಸಿದ್ಧತೆಯಲ್ಲಿ ತೊಡಗಿರುವ ವಿದ್ಯಾರ್ಥಿಗಳಿಗೆ ಯಶಸ್ಸು ಪ್ರಾಪ್ತಿಯಾಗಲಿದೆ. ಈ ಅವಧಿಯಲ್ಲಿ ದೇಶ-ವಿದೇಶಗಳ ಯಾತ್ರೆ ಸಂಭವಿಸಲಿದೆ. ಮಂಗಳ ನಿಮ್ಮ ಗೋಚರ ಜಾತಕದ 12ನೇ ಹಾಗೂ ಆಷ್ಟಮ ಭಾವಕ್ಕೆ ಅಧಿಪತಿಯಾಗಿದ್ದಾನೆ. ಇದರಿಂದ ಈ ಅವಧಿಯಲ್ಲಿ ನೀವು ಅಪಾರ ಧನ ಉಳಿತಾಯ ಮಾಡುವಲ್ಲಿ ಯಶಸ್ವಿಯಾಗುವಿರಿ. ಸಾಲಬಾಧೆಯಿಂದ ನಿಮಗೆ ಮುಕ್ತಿ ಸಿಗಲಿದೆ. ರಿಸರ್ಚ್ ಕ್ಷೇತ್ರಕ್ಕೆ ಸಂಬಂಧಿಸಿದ ಜನರಿಗೆ ಉತ್ತಮ ಲಾಭ ಸಿಗುವ ಸಾಧ್ಯತೆ ಇದೆ.
ಮೀನ ರಾಶಿ: ಮಂಗಳ ನಿಮ್ಮ ರಾಶಿಯ ರಾಶ್ಯಾಧಿಪನಾಗಿರುವ ಗುರುವಿನ ಜೊತೆಗೆ ಸ್ನೇಹಭಾವದ ಸಂಬಂಧ ಹೊಂದಿದ್ದಾನೆ. ಇದರ ಜೊತೆಗೆ ಮಂಗಳ ನಿಮ್ಮ ಗೋಚರ ಜಾತಕದ ಆದಾಯ ಭಾವದಲ್ಲಿ ಸಂಚರಿಸಲಿದ್ದಾನೆ. ಇದರಿಂದ ಈ ಅವಧಿಯಲ್ಲಿ ನಿಮ್ಮ ಆದಾಯದಲ್ಲಿ ವಿಪರೀತ ಹೆಚ್ಚಳ ಉಂಟಾಗಲಿದೆ. ಇದಲ್ಲದೆ ಆದಾಯದ ಹೊಸ ಮಾರ್ಗಗಳು ಕೂಡ ತೆರೆದುಕೊಳ್ಳಲಿವೆ. ಮಂಗಳ ನಿಮ್ಮ ಜಾತಕದ ಲಗ್ನ ಹಾಗೂ ದಶಮ ಭಾವಕ್ಕೆ ಅಧಿಪತಿಯಾಗಿದ್ದಾನೆ. ಹೀಗಾಗಿ ಮಂಗಳ ಮಕರ ರಾಶಿಗೆ ಪ್ರವೇಶಿಸುವುದರಿಂದ ನಿಮ್ಮ ಕೆಲಸ-ವ್ಯಾಪಾರ ಹೊಸ ಮೆರಗು ಪಡೆದುಕೊಳ್ಳಲಿದೆ. ಈ ಅವಧಿಯಲ್ಲಿ ಮೀನ ರಾಶಿಯ ಜನರಿಗೆ ಹೂಡಿಕೆಯಿಂದ ಉತ್ತಮ ಲಾಭವನ್ನು ಪಡೆದುಕೊಳ್ಳಲಿದ್ದಾರೆ. ಆರ್ಥಿಕ ಸ್ಥಿತಿ ಬಲಗೊಳ್ಳಲಿದೆ. ಈ ಅವಧಿಯಲ್ಲಿ ನೀವು ಸಾಕಷ್ಟು ಪರಿಶ್ರಮ ಪಡುವಿರಿ ಮತ್ತು ನಿಮಗೆ ನಿಮ್ಮ ಪರಿಶ್ರಮಕ್ಕೆ ತಕ್ಕ ಫಲ ಪ್ರಾಪ್ತಿಯಾಗಲಿದೆ. ಪ್ರಾಪರ್ಟೀ ಖರೀದಿ-ಮಾರಾಟದಿಂದ ನಿಮಗೆ ಉತ್ತಮ ಲಾಭ ಸಿಗಲಿದೆ.
(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಯಾವುದೇ ಮಾಹಿತಿಯ ನಿಖರತೆ ಅಥವಾ ಸ್ಪಷ್ಟತೆಯನ್ನು ಜೀ ಕನ್ನಡ ನ್ಯೂಸ್ ಖಚಿತಪಡಿಸುವುದಿಲ್ಲ. ಜೋತಿಷಿಗಳು, ಪಂಚಾಂಗ, ಮಾನ್ಯತೆಗಳು ಅಥವಾ ಧರ್ಮ ಗ್ರಂಥಗಳಂತಹ ವಿವಿಧ ಮಾಧ್ಯಮಗಳಿಂದ ಸಂಗ್ರಹಿಸಲಾಗಿರುವ ಮಾಹಿತಿಯನ್ನು ನಿಮ್ಮ ಬಳಿ ತಲುಪಿಸುವುದು ಮಾತ್ರ ನಮ್ಮ ಉದ್ದೇಶವಾಗಿದೆ. ಈ ಮಾಹಿತಿಯ ನೈಜತೆ ಹಾಗೂ ಸ್ಪಷ್ಟತೆಯನ್ನು ಖಚಿತಪಡಿಸಲಾಗುವುದಿಲ್ಲ. ಹೀಗಾಗಿ ಯಾವುದೇ ರೀತಿಯಲ್ಲಿ ಈ ಮಾಹಿತಿಯನ್ನು ಬಳಸುವ ಮುನ್ನ ಸಂಬಂಧಿತ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ)