Mars Transit 2024: ಮೀನ ರಾಶಿಗೆ ಮಂಗಳನ ಪ್ರವೇಶ, ಈ ರಾಶಿಯವರಿಗೆ ಉದ್ಯೋಗದಲ್ಲಿ ಬಡ್ತಿ, ಆದಾಯ ಹೆಚ್ಚಳ

Wed, 20 Mar 2024-8:37 am,

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, 2024ರ  ಏಪ್ರಿಲ್ 23 ರಂದು, ಗ್ರಹಗಳ ಕಮಾಂಡರ್ ಮಂಗಳನು ಮೀನ ರಾಶಿಗೆ ಪ್ರವೇಶಿಸಲಿದ್ದಾನೆ. ಈ ಸಂದರ್ಭದಲ್ಲಿ ಮಂಗಳನು ಕೆಲವು ರಾಶಿಯವರ ಮೇಲೆ ದಯೆ ತೋರಲಿದ್ದು, ಅವರ ಅದೃಷ್ಟದ ಬಾಗಿಲುಗಳನ್ನು ತೆರೆಯಲಿದ್ದಾನೆ ಎಂದು ಹೇಳಲಾಗುತ್ತಿದೆ. ಆ ಅದೃಷ್ಟದ ರಾಶಿಗಳೆಂದರೆ... 

ಏಪ್ರಿಲ್ ತಿಂಗಳಿನಲ್ಲಿ ಮಂಗಳ ಗ್ರಹ ರಾಶಿ ಪರಿವರ್ತನೆಯು ವೃಷಭ ರಾಶಿಯವರಿಗೆ ವೃತ್ತಿ ಬದುಕಿನಲ್ಲಿ ಸಕಾರಾತ್ಮಕ ಬದಲಾವಣೆಗಳನ್ನು ತರಲಿದೆ. ಉದ್ಯೋಗಸ್ಥರಿಗೆ ಇನ್‌ಕ್ರಿಮೆಂಟ್ ಸಾಧ್ಯತೆ ಇದೆ. ಸಾಮಾಜಿಕ ಬದುಕಿನಲ್ಲಿ ಸಕ್ರಿಯರಾಗಿರುವವರಿಗೆ ಪ್ರಚಾರದ ಜೊತೆಗೆ ಪ್ರಶಸ್ತಿ ಸಾಧ್ಯತೆಯೂ ಇದೆ.   

ಗ್ರಹಗಳ ಕಮಾಂಡರ್ ಮಂಗಳನ ರಾಶಿ ಪರಿವರ್ತನೆಯು ಸರ್ಕಾರಿ ಉದ್ಯೋಗದಲ್ಲಿರುವವರಿಗೆ ಹೆಚ್ಚು ಲಾಭದಾಯಕವಾಗಿರಲಿದೆ. ಆದಾಯದ ಮೂಲಗಳು ಹೆಚ್ಚಾಗಲಿದ್ದು, ಭೂಮಿ ಅಥವಾ ಹೊಸ ವಾಹನ ಖರೀದಿಸುವ ಯೋಗವೂ ಇದೆ. 

ಮಂಗಳ ರಾಶಿ ಬದಲಾವಣೆಯು ತುಲಾ ರಾಶಿಯವರ ಜೀವನದಲ್ಲಿ ನಾನಾ ರೀತಿಯಲ್ಲಿ ಧನಾತ್ಮಕ ಫಲಗಳನ್ನು ನೀಡಲಿದೆ. ಈ ಸಮಯದಲ್ಲಿ ಕೆಲಸ ಸ್ಥಳದಲ್ಲಿ ಕೀರ್ತಿ ಹೆಚ್ಚಾಗಲಿದ್ದು, ಬಡ್ತಿ ಸಂಭವವೂ ಇದೆ. 

ಮಂಗಳ ರಾಶಿ ಪರಿವರ್ತನೆಯು ಮಕರ ರಾಶಿಯವರ ಬದುಕಿನಲ್ಲಿ ಧನಯೋಗವನ್ನು ತರಲಿದೆ. ಹೊಸ ವ್ಯವಹಾರವನ್ನು ಆರಂಭಿಸಲು ಯೋಚಿಸುತ್ತಿರುವವರಿಗೆ ಈ ಸಮಯವು ಅತ್ಯುತ್ತಮವಾಗಿದೆ. ದೀರ್ಘ ಸಮಯದಿಂದ ಎದುರಾಗಿದ್ದ ಹಣಕಾಸಿನ ಸಮಸ್ಯೆಗಳು ಈಗ ಬಗೆಹರಿಯಲಿವೆ. 

ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link