Shani Mangala Yuti: 30 ವರ್ಷಗಳ ನಂತರ ನಿರ್ಮಾಣಗೊಳ್ಳಲಿದೆ ಅಪಾಯಕಾರಿ ಯೋಗ, ಈ ರಾಶಿಯವರಿಗೆ ಭಾರೀ ಸಂಕಷ್ಟ
ಶನಿ ದೇವ: ಜ್ಯೋತಿಷ್ಯ ಶಾಸ್ತ್ರದಲ್ಲಿ, ನ್ಯಾಯದ ದೇವರು, ಕರ್ಮಫಲದಾತ ಎಂದು ಪರಿಗಣಿಸಲ್ಪಟ್ಟಿರುವ ಶನಿ ದೇವನು ತನ್ನದೇ ಆದ ಕುಂಭ ರಾಶಿಯಲ್ಲಿ ನೆಲೆಸಿದ್ದಾನೆ.
ಮಂಗಳ ರಾಶಿ ಪರಿವರ್ತನೆ: ವೈದಿಕ ಜ್ಯೋತಿಷ್ಯ ಶಾಸ್ತ್ರದಲ್ಲಿ, ಕಮಾಂಡರ್ ಗ್ರಹ ಎಂದು ಪರಿಗಣಿಸಲ್ಪಟ್ಟಿರುವ ಮಂಗಳನು ಮಾರ್ಚ್ 15ರಂದು ಕುಂಭ ರಾಶಿಗೆ ಪ್ರವೇಶಿಸಲಿದ್ದಾನೆ.
ಶನಿ ಮಂಗಳ ಯುತಿ: ಇದರಿಂದ ಕುಂಭ ರಾಶಿಯಲ್ಲಿ ಶನಿ ಮತ್ತು ಮಂಗಳ ಯುತಿ ಸಂಭವಿಸಲಿದೆ. ಗಮನಾರ್ಹವಾಗಿ, ಮೂರು ದಶಕಗಳ ಬಳಿಕ ಕುಂಭ ರಾಶಿಯಲ್ಲಿ ಶನಿ ಮಂಗಳ ಸಂಯೋಜನೆಗೊಳ್ಳಲಿದ್ದಾರೆ.
ಅಪಾಯಕಾರಿ ಯೋಗ: ಕುಂಭ ರಾಶಿಯಲ್ಲಿ ಶನಿ ಮತ್ತು ಮಂಗಳ ಒಟ್ಟಿಗೆ ಕೂಡುವುದರಿಂದ ಎರಡೂ ಗ್ರಹಗಳ ಅಪಾಯಕಾರಿ ಸಂಯೋಜನೆಯು ರೂಪುಗೊಳ್ಳಲಿದೆ. ಇದರಿಂದಾಗಿ ಅಪಾಯಕಾರಿ ಯೋಗ ನಿರ್ಮಾಣಗೊಳ್ಳಲಿದ್ದು, ಇದು ಕೆಲವು ರಾಶಿಯವರ ಜೀವನದಲ್ಲಿ ಭಾರೀ ಸಮಸ್ಯೆಗಳನ್ನು ಸೃಷ್ಟಿಸಲಿದೆ ಎಂದು ಹೇಳಲಾಗುತ್ತಿದೆ. ಆ ರಾಶಿಗಳೆಂದರೆ...
ಕರ್ಕಾಟಕ ರಾಶಿ: ಎರಡು ಅಪಾಯಕಾರಿ ರಾಶಿಗಳ ಸಂಯೋಜನೆಯು ಕರ್ಕಾಟಕ ರಾಶಿಯವರ ಜೀವನದ್ಲಲಿ ಪ್ರತಿಕೂಲ ಪರಿಣಾಮಗಳನ್ನು ಉಂಟುಮಾಡಲಿದೆ. ಈ ಸಮಯದಲ್ಲಿ ಗುಪ್ತ ರೋಗಗಳ ಸಮಸ್ಯೆ ಬಾಧಿಸಬಹುದು. ಅಪಘಾತ ಸಾಧ್ಯತೆ ಇರುವುದರಿಂದ ವಾಹನ ಚಾಲನೆ ವೇಳೆ ಜಾಗರೂಕರಾಗಿರಿ.
ವೃಶ್ಚಿಕ ರಾಶಿ: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಶನಿ-ಮಂಗಳ ಸಂಯೋಜನೆಯು ವೃಶ್ಚಿಕ ರಾಶಿಯವರಿಗೆ ಹಾನಿಕಾರಕವೆಂದು ಸಾಬೀತುಪಡಿಸಬಹುದು. ಈ ಸಮಯದಲ್ಲಿ ಆರೋಗ್ಯದಲ್ಲಿ ಕ್ಷೀಣತೆ ಕಂಡು ಬರುವುದು. ವೃತ್ತಿ-ವ್ಯವಹಾರದಲ್ಲಿ ಯಾವುದೇ ಬದಲಾವಣೆಗಳನ್ನು ಮಾಡುವುದನ್ನು ತಪ್ಪಿಸಿ. ಆರ್ಥಿಕ ಸ್ಥಿತಿಯು ಸಹ ಹದಗೆಡುವ ಸಾಧ್ಯತೆ ಇರುವುದರಿಂದ ತುಂಬಾ ಎಚ್ಚರಿಕೆಯಿಂದ ಹೆಜ್ಜೆಯಿಡುವುದು ಒಳ್ಳೆಯದು.
ಮೀನ ರಾಶಿ: ಶನಿ ಮಂಗಳ ಯುತಿ ಮೀನ ರಾಶಿಯ ಜನರಿಗೆ ಕೂಡ ಹನಿಕಾರಕ ಎಂದು ಸಾಬೀತುಪಡಿಸಲಿದೆ. ಈ ಸಮಯದಲ್ಲಿ ನಿಮ್ಮ ವಿರುದ್ಧ ಕೆಲವು ಸುಳ್ಳು ಆರೋಪಗಳು ಕೇಳಿ ಬರುವ ಸಾಧ್ಯತೆ ಇರುವುದರಿಂದ ಎಚ್ಚರಿಕೆಯಿಂದಿರಿ. ಸಂಭಾವ್ಯ ಆರ್ಥಿಕ ಮುಗ್ಗಟ್ಟನು ಪರಿಗಣಿಸಿ, ಅನಗತ್ಯ ವೆಚ್ಚಗಳಿಗೆ ಕಡಿವಾಣ ಹಾಕುವುದು ಒಳ್ಳೆಯದು.
ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.