ಕುಂಭದಲ್ಲಿ ಮಂಗಳ ಸಂಚಾರ.. ಈ 5 ರಾಶಿಗಳ ಮೇಲೆ ಹಣದ ಮಳೆ, ಇನ್ನೇನಿದ್ದರೂ ಗೆಲುವಿನ ಓಟವೇ!

Sun, 25 Feb 2024-6:27 am,

ಮಂಗಳ ಗ್ರಹಕ್ಕೆ ವಿಶೇಷವಾದ ಮಹತ್ವವಿದೆ. ಏಕೆಂದರೆ ಈ ಗ್ರಹವು ಧೈರ್ಯ ಮತ್ತು ನಂಬಿಕೆಯನ್ನು ಪ್ರತಿನಿಧಿಸುತ್ತದೆ. ಮಾರ್ಚ್ 15 ರಂದು ಮಂಗಳ ಗ್ರಹವು ಶನಿಯ ಕುಂಭ ರಾಶಿಗೆ ಸಾಗಲಿದೆ. ಇದರಿಂದ ಕೆಲವು ರಾಶಿಗಳಿಗೆ ಅನಿರೀಕ್ಷಿತ ಲಾಭ ದೊರೆಯುತ್ತದೆ.

ಮೇಷ ರಾಶಿ: ಈ ರಾಶಿಯವರಿಗೆ ರಾಜಕೀಯ ಕ್ಷೇತ್ರದಲ್ಲಿ ಅನಿರೀಕ್ಷಿತ ಲಾಭ. ಪ್ರತಿ ಕೆಲಸದಲ್ಲೂ ಸುಲಭವಾಗಿ ಯಶಸ್ಸನ್ನು ಸಾಧಿಸಬಹುದು. ವೈವಾಹಿಕ ಜೀವನದಲ್ಲಿ ಸಂತೋಷವು ದ್ವಿಗುಣಗೊಳ್ಳುತ್ತದೆ. ಶೀಘ್ರದಲ್ಲೇ ಒಳ್ಳೆಯ ಸುದ್ದಿಯನ್ನು ಕೇಳುವಿರಿ. 

ಮಕರ ರಾಶಿ: ಮಂಗಳ ಗ್ರಹದ ಸಂಚಾರವು ಆರ್ಥಿಕ ಪ್ರಯೋಜನಗಳನ್ನು ನೀಡುತ್ತದೆ. ವೃತ್ತಿ ಸಂಬಂಧಿತ ಬದಲಾವಣೆಗಳನ್ನು ಕಾಣುವಿರಿ. ರಾಜಕೀಯ ಕ್ಷೇತ್ರಗಳಲ್ಲಿ ಕೆಲಸ ಮಾಡುವವರಿಗೆ ಸಮಾಜದಲ್ಲಿ ಗೌರವ ದುಪ್ಪಟ್ಟಾಗುತ್ತದೆ. ಆದಾಯವೂ ಹೆಚ್ಚಲಿದೆ.

ತುಲಾ ರಾಶಿ: ಮಂಗಳ ಗೋಚಾರ ತುಂಬಾ ಪ್ರಯೋಜನಕಾರಿಯಾಗಿದೆ. ಕೆಲಸ ಮಾಡುವವರ ಆದಾಯವೂ ದುಪ್ಪಟ್ಟಾಗುತ್ತದೆ. ಕುಟುಂಬ ಸದಸ್ಯರಿಂದ ಶುಭ ಸುದ್ದಿಯನ್ನೂ ಕೇಳುವಿರಿ. ಈ ಸಮಯವು ವಿವಾಹಿತರಿಗೆ ಅನೇಕ ಪ್ರಯೋಜನಗಳನ್ನು ತರುತ್ತದೆ.

ಕುಂಭ ರಾಶಿ: ನೀವು ಹೊಸ ವ್ಯವಹಾರಗಳನ್ನು ಪ್ರಾರಂಭಿಸುವುದರಿಂದ ಲಾಭವನ್ನು ಪಡೆಯುತ್ತೀರಿ. ವೃತ್ತಿಗೆ ಸಂಬಂಧಿತ ವಿಷಯಗಳಲ್ಲಿ ಹಠಾತ್ ಬದಲಾವಣೆಗಳನ್ನು ಕಾಣುವಿರಿ. ಉದ್ಯೋಗ ಮಾಡುವವರಿಗೆ ಈ ಸಮಯವು ತುಂಬಾ ಸೂಕ್ತವಾಗಿದೆ. ಜತೆಗೆ ಆದಾಯವೂ ಹೆಚ್ಚಲಿದೆ.

ಕಟಕ ರಾಶಿ: ಅನಿರೀಕ್ಷಿತ ಲಾಭವನ್ನು ತರುತ್ತದೆ. ಮಂಗಳನ ಕೃಪೆಯೂ ಸಿಗಲಿದ್ದು, ಆತ್ಮವಿಶ್ವಾಸವೂ ಹೆಚ್ಚುತ್ತದೆ. ಜನರಿಗೆ ಆಸ್ತಿ ಖರೀದಿಸಲು ಸಹ ಅವಕಾಶಗಳಿವೆ. ಅಲ್ಲದೆ ಮನಸ್ಸು ತುಂಬಾ ಶಾಂತವಾಗಿರುತ್ತದೆ.

ಸೂಚನೆ: ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ಮತ್ತು ಧಾರ್ಮಿ ವಿಚಾರಗಳನ್ನು ಆಧರಿಸಿದೆ. ಅಳವಡಿಸಿಕೊಳ್ಳುವ ಮೊದಲು ತಜ್ಞರ ಸಲಹೆಯನ್ನು ಪಡೆಯಿರಿ. Zee Kannada News ಇದನ್ನು ಖಚಿತಪಡಿಸುವುದಿಲ್ಲ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link