2025ರವರೆಗೆ ಈ ರಾಶಿಗೆ ಸೋಲೆಂಬುದೇ ಇಲ್ಲ: ಅಪಾರ ಧನಸಂಪತ್ತಿನ ಜೊತೆ ಅದೃಷ್ಟ ಬೆಳಗಿ ಯಶಸ್ಸನ್ನೇ ನೀಡುವನು ಮಾಯಾವಿ ಕೇತು
ಮಾರ್ಚ್ 2025 ರವರೆಗೆ ಕನ್ಯಾರಾಶಿಯಲ್ಲಿ ಕೇತು ಇರುವಿಕೆಯು ಎಲ್ಲಾ ರಾಶಿಗಳ ಮೇಲೆ ಒಳ್ಳೆಯ ಮತ್ತು ಕೆಟ್ಟ ಪರಿಣಾಮಗಳನ್ನು ಬೀರುತ್ತದೆ. ಪ್ರಮುಖವಾಗಿ ಕೇತು ಗ್ರಹದ ಗೋಚರವು ಮೇಷ ರಾಶಿಯ ಜನರ ವೃತ್ತಿ, ವ್ಯಾಪಾರ, ಶಿಕ್ಷಣ, ಕುಟುಂಬ ಮತ್ತು ಆರೋಗ್ಯದ ಮೇಲೆ ಪ್ರಭಾವ ಬೀರುತ್ತದೆ.
ಮೇಷ ರಾಶಿ ಜನರ ವೈವಾಹಿಕ ಜೀವನದಲ್ಲಿ ಮಾಧುರ್ಯತೆ ಇರಲಿದೆ. ಸಂಗಾತಿಯ ಮನಸ್ಸಿನಲ್ಲಿ ಧಾರ್ಮಿಕ ಚಿಂತನೆಗಳು ಹೆಚ್ಚಾಗುತ್ತವೆ. ಜೊತೆಯಾಗಿ ದೇವಾಲಯಗಳಿಗೆ ಭೇಟಿ ನೀಡುವಿರಿ.
ಮೇಷ ರಾಶಿಯ ಜನರು ಕೆಲಸದ ಸ್ಥಳದಲ್ಲಿ ಉತ್ತಮ ಅವಕಾಶಗಳನ್ನು ಪಡೆಯುತ್ತಾರೆ. ವೃತ್ತಿಜೀವನದಲ್ಲಿ ಪ್ರಗತಿಗೆ ಸಹಾಯ ಮಾಡುತ್ತದೆ. ಬೆಳವಣಿಗೆಯ ದೃಷ್ಟಿಯಿಂದ ವೃತ್ತಿಜೀವನವು ಸಾಮಾನ್ಯವಾಗಿರುತ್ತದೆ, ಉದ್ಯೋಗದಲ್ಲಿ ಬದಲಾವಣೆಗೆ ಕೇತು ಸಹಾಯ ಮಾಡುತ್ತದೆ.
ಯಾವುದೇ ರೀತಿಯ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ವಿದ್ಯಾರ್ಥಿಗಳು ಯಶಸ್ಸನ್ನು ಪಡೆಯುತ್ತಾರೆ. ಮುಂದಿನ ಒಂದೂವರೆ ವರ್ಷ ನೀವಂದುಕೊಂಡ ಬಾಳು ನಿಮ್ಮದಾಗುತ್ತದೆ. ಆದರೆ ಪರಿಶ್ರಮ ಅಗತ್ಯ.
ವ್ಯಾಪಾರ ವಿಷಯಗಳಲ್ಲಿ ಏರಿಳಿತಗಳಿರಬಹುದು. ಆದರೆ ಲಾಭದ ಮೂಲ ಕ್ರಮೇಣ ಹೆಚ್ಚಾಗಲಿದೆ. ಕೇತುವಿನ ಆಗಮನದಿಂದ ಒಂದೂವರೆ ವರ್ಷದಲ್ಲಿ ಹೆಚ್ಚಿನ ಲಾಭವನ್ನು ಗಳಿಸಲು ಸಾಧ್ಯವಾಗುತ್ತದೆ.
(ಸೂಚನೆ- ಈ ಲೇಖನದಲ್ಲಿ ನೀಡಲಾಗಿರುವ ಯಾವುದೇ ಮಾಹಿತಿಯ ನಿಖರತೆ ಅಥವಾ ಸ್ಪಷ್ಟತೆಯನ್ನು ಜೀ ಕನ್ನಡ ನ್ಯೂಸ್ ಖಚಿತಪಡಿಸುವುದಿಲ್ಲ. ಜೋತಿಷಿಗಳು, ಪಂಚಾಂಗ, ಮಾನ್ಯತೆಗಳು ಅಥವಾ ಧರ್ಮ ಗ್ರಂಥಗಳಂತಹ ವಿವಿಧ ಮಾಧ್ಯಮಗಳಿಂದ ಸಂಗ್ರಹಿಸಲಾಗಿರುವ ಮಾಹಿತಿಯನ್ನು ನಿಮ್ಮ ಬಳಿ ತಲುಪಿಸುವುದು ಮಾತ್ರ ನಮ್ಮ ಉದ್ದೇಶವಾಗಿದೆ. ಈ ಮಾಹಿತಿಯ ನೈಜತೆ ಹಾಗೂ ಸ್ಪಷ್ಟತೆಯನ್ನು ಖಚಿತಪಡಿಸಲಾಗುವುದಿಲ್ಲ. ಹೀಗಾಗಿ ಯಾವುದೇ ರೀತಿಯಲ್ಲಿ ಈ ಮಾಹಿತಿಯನ್ನು ಬಳಸುವ ಮುನ್ನ ಸಂಬಂಧಿತ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ)