Wealthiest Pets: ಸಾವಿರಾರು ಕೋಟಿ ರೂ.ಗಳಿಗೆ ಒಡೆಯ ಈ ಸಾಕು ಪ್ರಾಣಿಗಳು

Sat, 07 Jan 2023-3:05 pm,

1. ಜರ್ಮನ್ ಶೆಫರ್ಡ್ ತಳಿ ಗುಂಥರ್ IV ವಿಶ್ವದ ಶ್ರೀಮಂತ ಸಾಕುಪ್ರಾಣಿಯಾಗಿದೆ. ಇದು ಇಟಾಲಿಯನ್ ಮಾಧ್ಯಮ ಕಂಪನಿ ಗುಂಥರ್ ಕಾರ್ಪೊರೇಷನ್ ಒಡೆತನದಲ್ಲಿದೆ. Allaountcats.com  ಪ್ರಕಾರ ಇದರ ನಿವ್ವಳ ಮೌಲ್ಯ 4,000 ಕೋಟಿ ರೂ.

2, ನಾಲಾ ಎಂಬ ಹೆಸರಿನ ಈ ಬೆಕ್ಕು ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿ ಮಾಡುತ್ತಿದೆ. ಈ ಸರಳವಾಗಿ ಕಾಣುವ ಬೆಕ್ಕು ಅಸಾಮಾನ್ಯವಾಗಿದೆ. ನಾಲಾ 800 ಕೋಟಿ ರೂ.ಗೂ ಹೆಚ್ಚು ಮೌಲ್ಯದ ಚರ ಮತ್ತು ಸ್ಥಿರ ಆಸ್ತಿಗಳನ್ನು ಹೊಂದಿದೆ. ಈ ಪ್ರಭಾವಿ ಬೆಕ್ಕು ತನ್ನದೇ ಆದ ಬೆಕ್ಕಿನ ಆಹಾರ ಬ್ರಾಂಡ್ ಅನ್ನು ಹೊಂದಿದೆ. ಈ ಬೆಕ್ಕು ಇನ್‌ಸ್ಟಾಗ್ರಾಮ್‌ನಲ್ಲಿ 44 ಲಕ್ಷ ಫಾಲೋವರ್ಸ್ ಅಳನ್ನು ಹೊಂದಿದೆ. ಇದು ವಿಶ್ವದ ಎರಡನೇ ಶ್ರೀಮಂತ ಬೆಕ್ಕು. ಇದರ ಹೆಸರು ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ ನಲ್ಲಿಯೂ ಕೂಡ ದಾಖಲಾಗಿದೆ.  ಈ ಬೆಕ್ಕು Instagram ನಲ್ಲಿ ಅತಿ ಹೆಚ್ಚು ಹಿಂಬಾಲಿಸಲ್ಪಡುವ ಬೇಕ್ಕಾಗಿದೆ..ಇದು ವಿಶ್ವದ ಎರಡನೇ ಶ್ರೀಮಂತ ಪೆಟ್ ಆಗಿದೆ.  

3. ಪಾಪ್ ತಾರೆ ಟೇಲರ್ ಸ್ವಿಫ್ಟ್ ಅವರ ಪೆಟ್ ಹೆಸರು ಒಲಿವಿಯಾ ಬೆನ್ಸನ್. ಈ ಬೆಕ್ಕು 800 ಕೋಟಿ ರೂ. ಆಸ್ತಿಗೆ ಒಡೆಯನಾಗಿದೆ ಇದು ಟೇಲರ್ ಸ್ವಿಫ್ಟ್‌ನ ಅನೇಕ ಸಂಗೀತ ವೀಡಿಯೊಗಳಲ್ಲಿ ಕಾಣಿಸಿಕೊಂಡಿದೆ. ಈ ಬೆಕ್ಕು ತನ್ನದೇ ಆದ ಅನೇಕ ಬ್ರಾಂಡ್ಗಳನ್ನು ಹೊಂದಿದೆ. ಇದು ಅನೇಕ ಉನ್ನತ ಜಾಹೀರಾತುಗಳಲ್ಲಿ ಕೂಡ ಕಾಣಿಸಿಕೊಂಡಿದೆ.   

4. ಜಿಫ್‌ಪೋಮ್ ಪೊಮೆರೇನಿಯನ್ ತಳಿಯು ಅತಿ ಹೆಚ್ಚು ಗಳಿಕೆ ಮಾಡುವ ಕೆನೈಟ್ ಇನ್ಫ್ಲುಯೇಸರ್ ನಾಯಿಗಳಲ್ಲಿ ಒಂದಾಗಿದೆ. ಈ ನಾಯಿ 200 ಕೋಟಿ ರೂ.ಗಳಿಗೆ ಒಡೆಯ. ಇದು Instagram ನಲ್ಲಿ 5.5 ಮಿಲಿಯನ್ ಅನುಯಾಯಿಗಳನ್ನು ಹೊಂದಿದೆ. ಅಲ್ಲಿ ಅದು ಪ್ರತಿ ಪೋಸ್ಟ್‌ ಗೆ ಸುಮಾರು 33000 ಡಾಲರ್‌ಗಳನ್ನು ಪಡೆಯುತ್ತದೆ.  

5. ಅಮೆರಿಕದ ಟಿವಿ ತಾರೆ ಓಪ್ರಾ ವಿನ್‌ಫ್ರೇ ಐದು ಸಾಕು ನಾಯಿಗಳನ್ನು ಹೊಂದಿದ್ದಾರೆ. ಅವೂ ಕೂಡ ಅತ್ಯಂತ ಶ್ರೀಮಂತ ನಾಯಿಗಲಾಗಿವೆ. ಈ ಐದು ಸಾಕುಪ್ರಾಣಿಗಳ ಹೆಸರುಗಳು ಸ್ಯಾಡಿ, ಸನ್ನಿ, ಲಾರೆನ್, ಲಾಯ್ಲಾ ಮತ್ತು ಲ್ಯೂಕ್. ಇವುಗಳು ಒಟ್ಟು 250 ಕೋಟಿ ರೂ. ಆಸ್ತಿಗೆ ಒಡೆಯರಾಗಿವೆ. ಈ ಪ್ರತಿಯೊಂದು ಸಾಕುಪ್ರಾಣಿಗಳು ತನ್ನದೇ ಆದ ಟ್ರಸ್ಟ್ ಫಂಡ್ ಹೊಂದಿವೆ.  

ZEENEWS TRENDING STORIES

By continuing to use the site, you agree to the use of cookies. You can find out more by Tapping this link