ಸರ್ಕಾರಿ ನೌಕರರಿಗೆ ಮೆಗಾ ಅಪ್ಡೇಟ್! ಶೂನ್ಯವಾಗುವುದೇ ತುಟ್ಟಿಭತ್ಯೆ? ಹಬ್ಬದ ಹೊತ್ತಿನಲ್ಲಿ ಹುಸಿಯಾಗುವುದೇ ಡಿಎ ಹೆಚ್ಚಳದ ನಿರೀಕ್ಷೆ
ತುಟ್ಟಿಭತ್ಯೆ ಹೆಚ್ಚಳದ ಘೋಷಣೆಗಾಗಿ ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರು ಬಹಳ ದಿನಗಳಿಂದ ಕಾಯುತ್ತಿದ್ದಾರೆ.ಕಳೆದ ವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ಕುರಿತು ಘೋಷಣೆಯಾಗಬಹುದು ಎನ್ನುವ ನಿರೀಕ್ಷೆಯಿತ್ತು.ಆದರೆ ಹಾಗಾಗಲಿಲ್ಲ.
ಅಕ್ಟೋಬರ್ 23ಕ್ಕೆ ಮತ್ತೊಮ್ಮೆ ಸಚಿವ ಸಂಪುಟ ಸಭೆ ನಡೆಯಲಿದೆ.ಈಗ ಸರ್ಕಾರಿ ನೌಕರರ ದೃಷ್ಟಿ ಆ ಸಂಪುಟ ಸಭೆಯ ನಿರ್ಧಾರದತ್ತ ನೆಟ್ಟಿದೆ.ಈ ಬಾರಿಯದಾರೂ ತುಟ್ಟಿಭತ್ಯೆ ಹೆಚ್ಚಳ ಘೋಷಣೆ ಮಾಡುವರೇ ಎನ್ನುವ ನಿರೀಕ್ಷೆ ಅವರದ್ದು.
ಹಬ್ಬದ ಹೊತ್ತಿನಲ್ಲಿ ನೌಕರರಿಗೆ ಭರ್ಜರಿ ಬೋನಸ್ ಸಿಗಲಿದೆ ಎನ್ನಲಾಗುತ್ತಿದೆ.ಅಂದರೆ ದೀಪಾವಳಿ ಹಬ್ಬಕ್ಕೂ ಮುನ್ನ ಡಿಎ ಹೆಚ್ಚಳ ಘೋಷಿಸಬಹುದು ಎನ್ನಲಾಗಿದೆ.ಆದರೆ ಇಲ್ಲಿ ಇನ್ನೊಂದು ಪ್ರಶ್ನೆ ಕೂಡಾ ಕಾಡುತ್ತಿದೆ.
ತುಟ್ಟಿಭತ್ಯೆ ಶೇ.50 ದಾಟಿದರೆ ಅದನ್ನು ಶೂನ್ಯಗೊಳಿಸಿ ತುಟ್ಟಿಭತ್ಯೆಯನ್ನು ಮೂಲ ವೇತನಕ್ಕೆ ಸೇರಿಸಲಾಗುವುದು ಎಂಬ ಮಾತು ಕೇಳಿಬಂದಿದೆ.ಅಂದರೆ ತುಟ್ಟಿಭತ್ಯೆ ಈಗಾಗಲೇ ಶೇ 50 ತಲುಪಿಯಾಗಿದೆ. ಹಾಗಿದ್ದರೆ ಇನ್ನು ತುಟ್ಟಿಭತ್ಯೆ ಶೂನ್ಯವಾಗುವುದೇ?
ಅಸಲಿಗೆ 7ನೇ ವೇತನ ಆಯೋಗದ ಅಡಿಯಲ್ಲಿ, ಡಿಎ 50% ಮೀರಿದರೆ ಅದನ್ನು ಶೂನ್ಯಗೊಳಿಸಬೇಕು ಎನ್ನುವ ನಿಯಮವಿಲ್ಲ.ಹಾಗಾಗಿ ತುಟ್ಟಿಭತ್ಯೆಯನ್ನು ಶೂನ್ಯ ಮಾಡದೇ ಹಾಗೆಯೇ ಮುಂದುವರಿಸಲಾಗುವುದು.
ಜನವರಿಯಿಂದ ಜೂನ್‌ವರೆಗೆ AICPI ಸೂಚ್ಯಂಕ ಸಂಖ್ಯೆಗಳ ಆಧಾರದ ಮೇಲೆ, ತುಟ್ಟಿಭತ್ಯೆ 3%-4% ರಷ್ಟು ಹೆಚ್ಚಾಗುತ್ತದೆ ಎಂದು ಹೇಳಲಾಗುತ್ತದೆ.ಹೀಗಾದಲ್ಲಿ ನೌಕರರ ಒಟ್ಟು ತುಟ್ಟಿಭತ್ಯೆ ಮತ್ತು ನಿವೃತ್ತಿ ವೇತನದಾರರ ತುಟ್ಟಿ ಪರಿಹಾರ 53%-54% ರಷ್ಟು ಹೆಚ್ಚಾಗುತ್ತದೆ.