ಅಕ್ಟೋಬರ್ 1 ರಿಂದ ಸೂರ್ಯನಂತೆ ಹೊಳೆಯಲಿದೆ ಈ ಜನರ ಅದೃಷ್ಟ, ಧನಲಕ್ಷ್ಮಿಯ ಕೃಪೆಯಿಂದ ಹಣದ ಸುರಿಮಳೆ!
ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ಬರುವ ಅಕ್ಟೋಬರ್ 1ಕ್ಕೆ ಗ್ರಹಗಳ ರಾಜಕುಮಾರ ಎಂದೇ ಕರೆಯಲಾಗುವ ಬುಧ ತನ್ನ ಸ್ವರಾಶಿಯಾಗಿರುವ ಕನ್ಯಾ ರಾಶಿಯನ್ನು ಪ್ರವೇಶಿಸಲಿದ್ದಾನೆ.ಇದರಿಂದ ಒಟ್ಟು 3 ರಾಶಿಗಳ ಜನರ ಜೀವನದಲ್ಲಿ ಸುದಿನಗಳು ಆಗಮಿಸಲಿದ್ದು, ಅವರ ಮೇಲೆ ಧನಲಕ್ಷ್ಮಿ ಹಣದ ಸುರಿಮಳೆಯನ್ನೆಗೈಯ್ಯಲಿದ್ದಾಳೆ. ಬನ್ನಿ ಆ ಅದೃಷ್ಟವಂತ ರಾಶಿಗಳು ಯಾವುವು ತಿಳಿದುಕೊಳ್ಳೋಣ Spiritual News In Kannada,
ಮಿಥುನ ರಾಶಿ: ಬುಧ ನಿಮ್ಮ ಗೋಚರ ಜಾತಕದ ಲಗ್ನ ಭಾವಕ್ಕೆ ಅಧಿಪತಿಯಾಗಿ ಚತುರ್ಥ ಸ್ಥಾನದಲ್ಲಿ ಗೋಚರಿಸಲಿದ್ದಾನೆ, ಹೀಗಾತಿ ಬುಧನ ಈ ಗೋಚರ ನಿಮ್ಮ ಪಾಲಿಗೆ ಅತ್ಯಂತ ಲಾಭದಾಯಕ ಸಿದ್ಧ ಸಾಬೀತಾಗಲಿದೆ. ಕನ್ಯಾ ರಾಶಿಯ ಜೊತೆಗೆ ಬುಧ ಮಿಥುನ ರಾಶಿಯ ಅಧಿಪತಿ ಕೂಡ ಹೌದು, ಹೀಗಾಗಿ ಈ ಅವಧಿಯಲ್ಲಿ ನಿಮಗೆ ಎಲ್ಲಾ ರೀತಿಯ ಭೌತಿಕ ಸುಖಗಳು ಪ್ರಾಪ್ತಿಯಾಗಲಿವೆ. ಪಿತ್ರಾರ್ಜಿತ ಸಂಪತ್ತಿನಿಂದ ನಿಮಗೆ ಸಾಕಷ್ಟು ಲಾಭ ಉಂಟಾಗಲಿದೆ. ವಾಹನ-ಜಮೀನು ಆಸ್ತಿಪಾಸ್ತಿ ಖರೀದಿಸುವ ಯೋಗ ಕೂಡ ನಿಮಗೆ ಬರಲಿದೆ. ನೌಕರ ವರ್ಗದ ಜನರಿಗೆ ನೌಕರಿಯ ಉತ್ತಮ ಅವಕಾಶಗಳು ಕೂಡಿಬರಲಿವೆ. ಆದರೆ, ಸಾಕಷ್ಟು ಯೋಚಿಸಿದ ನಂತರವೇ ನಿರ್ಧಾರ ಕೈಗೊಳ್ಳುವುದು ಉಚಿತ. ಈ ಅವಧಿಯಲ್ಲಿ ನಿಮ್ಮ ವ್ಯಕ್ತಿತ್ವದಲ್ಲಿ ಸಾಕಷ್ಟು ಹೊಳಪು ಕಾಣಿಸಿಕೊಳ್ಳಲಿದೆ
ವೃಶ್ಚಿಕ ರಾಶಿ: ಬುಧನ ಗೋಚರ ವೃಶ್ಚಿಕ ರಾಶಿಯ ಜಾತಕದವರಿಗೆ ಸಾಕಷ್ಟು ಅನುಕೂಲಕರವಾಗಿದೆ. ಏಕೆಂದರೆ ನಿಮ್ಮ ಗೋಚರ ಜಾತಕದ ಆದಾಯ ಭಾವದಲ್ಲಿ ಬುಧ ಸಂಚರಿಸಲಿದ್ದಾನೆ. ಇದರಿಂದ ನಿಮ್ಮ ಆದಾಯ ಹೆಚ್ಚಾಗಲಿದೆ. ನೀವು ಈ ಮೊದಲು ಮಾಡಿದ ಹೂಡಿಕೆಗಳಿಂದ ನಿಮಗೆ ಲಾಭ ಉಂಟಾಗಲಿದೆ. ವ್ಯಾಪಾರಿಗಳ ಪಾಲಿಗೆ ಹಲವು ಒಪ್ಪಂದಗಳು ಫೈನಲ್ ಆಗಲಿವೆ. ಹೂಡಿಕೆಗೆ ಈ ಸಮಯ ಸಾಕಷ್ಟು ಅನುಕೂಲಕರವಾಗಿದೆ. ನಿಮಗೆ ನಿಮ್ಮ ಹೂಡಿಕೆಯ ಮೇಲೆ ಒಳ್ಳೆಯ ಲಾಭ ಸಿಗಲಿದೆ. ಷೇರುಪೇಟೆ, ಲಾಟರಿಗಳಲ್ಲಿನ ಹೂಡಿಕೆಗೆ ಸಮಯ ಸಾಕಷ್ಟು ಅನುಕೂಲಕರವಾಗಿದೆ.
ವೃಷಭ ರಾಶಿ: ಬುಧನ ಈ ರಾಶಿ ಪರಿವರ್ತನೆ ನಿಮ್ಮ ಪಾಲಿಗೂ ಕೂಡ ತುಂಬಾ ಲಕ್ಕಿ ಸಾಬೀತಾಗಲಿದೆ, ಏಕೆಂದರೆ, ನಿಮ್ಮ ಜಾತಕದ ಧನಭಾವಕ್ಕೆ ಅಧಿಪತಿಯಾಗಿರುವ ಬುಧ ಪಂಚಮ ಸ್ಥಾನದಲ್ಲಿ ಸಂಚರಿಸಲಿದ್ದಾನೆ. ಹೀಗಾಗಿ ಮಕ್ಕಳಿಗೆ ಸಂಬಂಧಿಸಿದ ಒಳ್ಳೆಯ ಸುದ್ದಿಗಳನ್ನು ನೀವು ಕೇಳುವ ಸಾಧ್ಯತೆ ಇದೆ. ಇದಲ್ಲದೆ ನಿಮಗೆ ಆಕಸ್ಮಿಕ ಧನಲಾಭ ಯೋಗ ಕೂಡ ಒದಗಿ ಬರಲಿದೆ. ಮಕ್ಕಳ ಏಳ್ಗೆಯಾಗಿ ನಿಮ್ಮ ಘನತೆ-ಗೌರವ ಸಾಕಷ್ಟು ಹೆಚ್ಚಾಗಲಿದೆ. ನಿಮ್ಮ ಕೆಲಸಕ್ಕೆ ಜನರಿಂದ ಸಾಕಷ್ಟು ಪ್ರಶಂಸೆ ವ್ಯಕ್ತವಾಗಲಿದೆ. ಯಾವುದಾದರೊಂದು ಯೋಜನೆಯಲ್ಲಿ ನಿಮಗೆ ಅಪಾರ ಯಶಸ್ಸು ಸಿಗುವ ಸಾಧ್ಯತೆ ಇದೆ. ವಿದ್ಯಾರ್ಥಿಗಳ ಪಾಲಿಗೆ ಸಮಯ ಸಾಕಷ್ಟು ಉತ್ತಮವಾಗಿದೆ. ನೌಕರಿಗಾಗಿ ಹುಡುಕಾಟದಲ್ಲಿ ನಿರತರಾದ ಈ ಜಾತಕದ ನೌಕರಿ ಭಾಗ್ಯ ಪ್ರಾಪ್ತಿಯಾಗುವ ಸಾಧ್ಯತೆ ಇದೆ.
(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಯಾವುದೇ ಮಾಹಿತಿಯ ನಿಖರತೆ ಅಥವಾ ಸ್ಪಷ್ಟತೆಯನ್ನು ಜೀ ಕನ್ನಡ ನ್ಯೂಸ್ ಖಚಿತಪಡಿಸುವುದಿಲ್ಲ. ಜೋತಿಷಿಗಳು, ಪಂಚಾಂಗ, ಮಾನ್ಯತೆಗಳು ಅಥವಾ ಧರ್ಮ ಗ್ರಂಥಗಳಂತಹ ವಿವಿಧ ಮಾಧ್ಯಮಗಳಿಂದ ಸಂಗ್ರಹಿಸಲಾಗಿರುವ ಮಾಹಿತಿಯನ್ನು ನಿಮ್ಮ ಬಳಿ ತಲುಪಿಸುವುದು ಮಾತ್ರ ನಮ್ಮ ಉದ್ದೇಶವಾಗಿದೆ. ಈ ಮಾಹಿತಿಯ ನೈಜತೆ ಹಾಗೂ ಸ್ಪಷ್ಟತೆಯನ್ನು ಖಚಿತಪಡಿಸಲಾಗುವುದಿಲ್ಲ. ಹೀಗಾಗಿ ಯಾವುದೇ ರೀತಿಯಲ್ಲಿ ಈ ಮಾಹಿತಿಯನ್ನು ಬಳಸುವ ಮುನ್ನ ಸಂಬಂಧಿತ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ)