ಆಗಸ್ಟ್‌ನಲ್ಲಿ ಗ್ರಹಗಳ ಬದಲಾವಣೆ: ಈ ರಾಶಿಯವರಿಗೆ ಅದೃಷ್ಟ

Tue, 23 Aug 2022-5:37 pm,

ಮೇಷ ರಾಶಿ: ಮೇಷ ರಾಶಿಯವರಿಗೆ ಈಗ ಉತ್ತಮ ಸಮಯ. ನೀವು ಎಲ್ಲಾ ರೀತಿಯಲ್ಲೂ ಪ್ರಯೋಜನ ಪಡೆಯುತ್ತೀರಿ. ವ್ಯಾಪಾರದಲ್ಲಿ ಪ್ರಗತಿ ಕಾಣುವಿರಿ. ಕೆಲಸದ ಸ್ಥಳದಲ್ಲಿ ಎಲ್ಲರ ಸಹಕಾರ ಸಿಗುತ್ತದೆ. ವ್ಯಾಪಾರದಲ್ಲಿ ಲಾಭ ಇರುತ್ತದೆ. ಹಣದ ಹರಿವು ಅನುಕೂಲಕರವಾಗಿರುತ್ತದೆ. ಒಟ್ಟಿನಲ್ಲಿ ಈ ಸಮಯ ನಿಮಗೆ ವರದಾನವಾಗಲಿದೆ. 

ವೃಷಭ ರಾಶಿ:  ವೃಷಭ ರಾಶಿಯವರಿಗೆ ಗ್ರಹಗಳ ಸಂಚಾರವು ಶುಭ ಸಮಯವನ್ನು ತಂದಿದೆ. ಈ ಸಮಯದಲ್ಲಿ, ವೃಷಭ ರಾಶಿಯ ಜನರು ವ್ಯಾಪಾರದಲ್ಲಿ ಲಾಭವನ್ನು ಪಡೆಯುತ್ತಾರೆ. ಕಚೇರಿ ಕೆಲಸದಲ್ಲಿರುವವರಿಗೆ ಬಡ್ತಿ ದೊರೆಯುತ್ತದೆ. ಉದ್ಯೋಗಾಕಾಂಕ್ಷಿಗಳಿಗೆ ಹೊಸ ಉದ್ಯೋಗಾವಕಾಶಗಳು ದೊರೆಯಲಿವೆ. ಆದರೆ, ನಿಮ್ಮ ಆರೋಗ್ಯದ ಬಗ್ಗೆ ಸ್ವಲ್ಪ ಗಮನಹರಿಸಿ.

ಕರ್ಕಾಟಕ ರಾಶಿ: ಆಗಸ್ಟ್ ತಿಂಗಳಲ್ಲಿ ಶುಕ್ರನ ಸಂಚಾರವು ಕರ್ಕಾಟಕ ರಾಶಿಯವರಿಗೆ ಸಮಾಜದಲ್ಲಿ ಸ್ಥಾನಮಾನವನ್ನು ಹೆಚ್ಚಿಸುತ್ತದೆ. ಕೆಲಸದಲ್ಲಿ ಅತಿಯಾದ ಒತ್ತಡ ಇದ್ದರೂ ಸಹ ಯಶಸ್ಸು ಮಾತ್ರ ನಿಮ್ಮದೇ ಆಗಿರುತ್ತದೆ. ನಿಮ್ಮ ಆರೋಗ್ಯದ ಬಗ್ಗೆ ಯಾವುದೇ ನಿರ್ಲಕ್ಷವನ್ನು ಮಾಡಬೇಡಿ.

ಸಿಂಹ ರಾಶಿ: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಸೂರ್ಯನನ್ನು ಸಿಂಹ ರಾಶಿಯ ಅಧಿಪತಿ ಎಂದು ಪರಿಗಣಿಸಲಾಗುತ್ತದೆ. ಆದ್ದರಿಂದ, ಸಿಂಹ ರಾಶಿಯವರಿಗೆ ಸೂರ್ಯನ ಸಂಚಾರವು ತುಂಬಾ ಒಳ್ಳೆಯದು. ಸಮಾಜದಲ್ಲಿ ಗೌರವ ಹೆಚ್ಚಾಗುತ್ತದೆ. 

ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link