ಫೆಂಗಲ್ ಚಂಡಮಾರುತ ಆಯ್ತು.. ಇದೀಗ ಮತ್ತೊಂದು ಚಂಡಮಾರುತದ ಭೀತಿ! 4 ರಾಜ್ಯಗಳಿಗೆ ಎಚ್ಚರಿಕೆ ಕೊಟ್ಟ ಹವಾಮಾನ ಇಲಾಖೆ
Weather Update: ಮಳೆಗಾಲ ಮುಗಿದು ಚಳಿಗಾಲ ಆರಂಭವಾಗಿದೆ. ಒಂದು ಕಡೆ ಜನರು ಚಳಿಯ ಕಾರಣ ಗಢ ಗಢ ನಡುಗುತ್ತಿದ್ದರೆ, ಮತ್ತೊಂದೆಡೆ ಮಳೆ ಜನರನ್ನು ಮನೆಯಿಂದ ಒರಗೆ ಬರದಂತೆ ಮಾಡಿ ಬಿಟ್ಟಿದೆ. ಒಂದು ವಾರದಿಂದ ಫೆಂಗಲ್ ಚಂಡಮಾರುತ ಕಾರಣ ಸುರಿದ ಮಳೆಯಿಂದಾಗಿ ಜನ ಬೇಸತ್ತುಬಿಟ್ಟಿದ್ದಾರೆ. ಇದೀಗ ಅದರ ಬೆನ್ನಲ್ಲೆ ಮತ್ತೊಂದು ಚೆಂಡಮಾರುತದ ಮನ್ಸೂಚನೆ ಸಿಕ್ಕಿದ್ದು, ಈ ಕುರಿತು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.
ದೇಶದ ವಿವಿಧ ಭಾಗಗಳಲ್ಲಿ ಮಳೆ ಬಿಡದೆ ಸುರಿಯುತ್ತಿದೆ, ನೆರೆ ರಾಜ್ಯವಾದ ತಮಿಳುನಾಡು ಫೆಂಗಲ್ ಚಂಡಮಾರುತಕ್ಕೆ ಮುಳುಗಿ ಹೋಗಿದೆ. ಕನರ್ಟಕ ಹಾಗೂ ಪುದುಚೇರಿಯಲ್ಲಿಯೂ ಫೆಂಗಲ್ ಚಂಡಮಾರುತ್ ಸಾಕಷ್ಟು ಅವಾಂತರವನ್ನು ಸೃಷ್ಟಿಸಿಬಿಟ್ಟಿತ್ತು. ಇದೀಗ ಇದರಿಂದ ತತ್ತರಿಸಿದ್ದ ಜನ, ಈಗ ತಾನೆ ನಿಟ್ಟಿಸುರಿ ಬಿಟ್ಟಿದ್ದರು. ಆದರೆ, ಇದರ ಬೆನ್ನಲ್ಲೆ ಜನರಿಗೆ ಮತ್ತೊಂದು ಶಾಕ್ ಎದುರಾಗಿದೆ.
ಹೌದು, ದೇಶದ ಹವಾಮಾನ ಇಲಾಖೆ ಇದೀ ಮತ್ತೊಂದು ಚಂಡಮಾರುತದ ಕುರಿತು ಎಚ್ಚರಿಕೆಯನ್ನು ನೀಡಿದೆ.
ಬಂಗಾಳಕೊಳ್ಳಿಯಲ್ಲಿ ಸಾಕಷ್ಟು ಹವಾಮಾನ ವೈಫರಿತ್ಯ ಉಂಟಾಗುತ್ತಿದೆ, ಇದೇ ಕಾರಣದಿಂದಾಗಿ ಡಿ. 12 ರಿಂದು 13ರ ನಡುವೆ ಜೋರು ಮಳೆ ಸುರಿಯುವ ಮನಸೂಚನೆ ಸಕ್ಕಿದ್ದು, ಹವಾಮಾನ ಇಲಾಖೆ ನಾಲ್ಕು ಭಾಗಗಳಿಗೆ ಭಾರಿ ಮಳೆಯ ಮುನ್ಸೂಚನೆಯನ್ನು ಕೊಟ್ಟಿದೆ.
ಬಂಗಾಳಕೊಳ್ಳಿಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ವಾಯುಭಾರ ಕುಸಿತ ಕಂಡು ಬಂದಿದ್ದು, ಇದರಿಂದ ಉಂಟಾದ ವೈಪರಿತ್ಯದ ಕಾರಣದಿಂದಾಗಿ, ಬಂಗಾಳಕೊಳ್ಳಿಯಲ್ಲಿ ಒಂದಲ್ಲ ಎರಡಲ್ಲ ಸಾಕಷ್ಟು ಚಂಡ ಮಾರುತಗಳು ಹುಟ್ಟಿಕೊಂಡಿವೆ.
ಒಡಿಶಾ, ಪುದುಚೇರಿ, ಪಶ್ಚಿಮ ಬಂಗಾಳ, ಪುದುಚೇರಿ ಸೇರಿ ಹಲವು ಭಾಗಗಳಲ್ಲಿ ಇದರ ಪರಿಣಾಮದಿಂದಾಗಿ ಹೆಚ್ಚು ಮಳೆ ದಾಕಲಾಗಿದೆ.
ಸದ್ಯ, ಹವಾಮಾನ ಇಲಾಖೆ ನೀಡಿರುವ ಮಾಹಿತಿಯ ಪ್ರಕಾರ ಡಿ. 12 ರಂದು ಪುದುಚೇರಿ, ಕಾರೈಕಲ್ ಹಾಗೂ ತಮಿಳುನಾಡು ಪ್ರದೇಶಗಳಲ್ಲಿ ಭಾರಿ ಮಳೆ ಆಗುವ ಸಾಧ್ಯತೆ ಇರುವುದು ಕಂಡು ಬಂದಿದೆ.
ಇನ್ನೂ, ರಾಯಲಸೀಮಾ, ದಕ್ಷಿಣ ಕರ್ನಾಟಕ, ಆಂಧ್ರ ಪ್ರದೇಶ ಹಾಗೂ ಕೇರಳ ಪ್ರದೇಶಗಳಲ್ಲಿ ಧಾರಾಕಾರ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.