ಒಲಂಪಿಕ್ಸ್‌ನಲ್ಲಿ ಅತಿ ಹೆಚ್ಚು ಪದಕ ಗೆದ್ದ ಅಕ್ವಾಮಾನ್‌ ಈತ..! ಈತನ ಹೆಸರು ಕೇಳಿ ಯಾರು ಪೈಪೋಟಿಗೂ ಬರಲ್ಲ

Wed, 17 Jul 2024-8:26 am,

ಅಮೆರಿಕದ ಈಜುಪಟು ಮೈಕೆಲ್ ಫೆಲ್ಪ್ಸ್ ಇದುವರೆಗಿನ ಒಲಿಂಪಿಕ್ ಇತಿಹಾಸದಲ್ಲಿ ಅತಿ ಹೆಚ್ಚು ಪದಕಗಳನ್ನು ಗೆದ್ದಿರುವ ಏಕೈಕ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಮೈಕೆಲ್ ಫೆಲ್ಪ್ಸ್ ಒಲಿಂಪಿಕ್ ಇತಿಹಾಸದಲ್ಲಿ ಅತ್ಯಂತ ಯಶಸ್ವಿ ಅಥ್ಲೀಟ್ ಆಗಿದ್ದು, ಇದುವರೆಗೆ 28 ​​ಪದಕಗಳನ್ನು ಗೆದ್ದಿದ್ದಾರೆ. ಅವುಗಳಲ್ಲಿ 23 ಚಿನ್ನದ ಪದಕಗಳಾಗಿವೆ.

ಭಾರತದಂತಹ ದೇಶಗಳು ಸಹ ಒಲಿಂಪಿಕ್ ಇತಿಹಾಸದಲ್ಲಿ ಇಷ್ಟು ಚಿನ್ನ ಗೆದ್ದಿಲ್ಲ. ಆದರೆ ಮೈಕೆಲ್ ಫೆಲ್ಪ್ಸ್ ಒಬ್ಬಂಟಿಯಾಗಿ ಅನೇಕ ಸಾಧನೆಗಳನ್ನು ಮಾಡಿದ್ದಾರೆ. ಮೈಕೆಲ್ ಫೆಲ್ಪ್ಸ್ ತನ್ನ 15 ನೇ ವಯಸ್ಸಿನಲ್ಲಿ 2000 ನೇ ವರ್ಷದ ಒಲಿಂಪಿಕ್ಸ್‌ನಲ್ಲಿ ಮೊದಲ ಭಾರಿಗೆ ಈಜು ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.  

ಇದರೊಂದಿಗೆ ಒಲಿಂಪಿಕ್ಸ್‌ನಲ್ಲಿ ಸ್ಪರ್ಧಿಸಿದ ಅಮೆರಿಕದ ಅತ್ಯಂತ ಕಿರಿಯ ಈಜುಗಾರ ಎಂಬ ದಾಖಲೆ ಬರೆದರು. ಫೆಲ್ಪ್ಸ್ 15 ನೇ ವಯಸ್ಸಿನಲ್ಲಿ 200 ಮೀಟರ್‌ನ ಬಟರ್‌ಫ್ಲೈ ಫೈನಲ್‌ಗೆ ತಲುಪಿ, ಐದನೇ ಸ್ಥಾನ ಪಡೆದರು. ಆದರೆ, ಈ ಸರಣಿಯಲ್ಲಿ ಅವರು ಯಾವುದೇ ಪದಕ ಗೆಲ್ಲಲಿಲ್ಲ. ಆದರೆ ನಂತರದ ನಾಲ್ಕು ವರ್ಷಗಳಲ್ಲಿ ಮೈಕೆಲ್ ಫೆಲ್ಪ್ಸ್ ಈಜು ಜಗತ್ತಿನಲ್ಲಿ ಉತ್ತಮ ದಾಪುಗಾಲು ಹಾಕಿದರು.  

ಮೈಕೆಲ್ ಫಿಲಿಪ್ಸ್ 100 ಮೀ ಬಟರ್‌ಫ್ಲೈ, 200 ಮೀ ಬಟರ್‌ಫ್ಲೈ, 200 ಮೀ ಮೆಡ್ಲೆ, 400 ಮೀ ಮೆಡ್ಲೆ, 800 ಮೀ ಫ್ರೀ ಸ್ಟೈಲ್, 400 ಮೀ ಮೆಡ್ಲೆಯಲ್ಲಿ ಚಿನ್ನದ ಪದಕಗಳನ್ನು 19 ನೇ ವಯಸ್ಸಿನಲ್ಲಿ ಗೆದ್ದಿದ್ದಾರೆ. ಅದೇ ರೀತಿ 200 ಮೀಟರ್ ಫ್ರೀ ಸ್ಟೈಲ್ ಮತ್ತು 400 ಮೀಟರ್ ಫ್ರೀ ಸ್ಟೈಲ್ ಈಜು ವಿಭಾಗಗಳಲ್ಲಿ ಕಂಚು ಗೆದ್ದಿದ್ದಾರೆ. ಇದರ ನಂತರ, 2008 ರ ಬೀಜಿಂಗ್ ಒಲಿಂಪಿಕ್ ಕ್ರೀಡಾಕೂಟದಲ್ಲಿ, ಫೆಲ್ಪ್ಸ್ ಎಲ್ಲಾ ಸ್ಪರ್ಧೆಗಳಲ್ಲಿ ಚಿನ್ನ ಗೆದ್ದು ವಿಶ್ವದಾಖಲೆ ನಿರ್ಮಿಸಿದರು.  

2012ರ ಒಲಿಂಪಿಕ್ಸ್ ಬಳಿಕ ನಿವೃತ್ತಿ ಘೋಷಿಸಿದ್ದ ಫೆಲ್ಪ್ಸ್ 2014ರಲ್ಲಿ ನಿವೃತ್ತಿಯಿಂದ ದಿಢೀರ್ ವಾಪಸಾಗಿದ್ದರು. ಆ ಬಳಿಕ 2016ರಲ್ಲಿ ಮತ್ತೆ ರಿಯೊ ಒಲಿಂಪಿಕ್ಸ್ ನಲ್ಲಿ ಭಾಗವಹಿಸಿದ್ದ ಮೈಕಲ್ ಫೆಲ್ಪ್ಸ್ ಈ ಹಂತದಲ್ಲಿ 100 ಮೀಟರ್ ಬಟರ್ ಫ್ಲೈ ವಿಭಾಗದಲ್ಲಿ ಬೆಳ್ಳಿ ಪದಕ ಗೆದ್ದುಕೊಂಡರು. ಇದು ಅವರ ಕೊನೆಯ ಒಲಿಂಪಿಕ್ ರೇಸ್ ಆಗಿತ್ತು.  

ಮೈಕೆಲ್ ಫೆಲ್ಪ್ಸ್ ತಮ್ಮ ವೃತ್ತಿಜೀವನದಲ್ಲಿ 23 ಚಿನ್ನದ ಪದಕಗಳನ್ನು ಗೆದ್ದಿದ್ದಾರೆ, ಅದು ಒಲಿಂಪಿಕ್ ಪದಕವನ್ನು ಗೆದ್ದಿರುವುದು ಶ್ರೇಷ್ಠ ಸಾಧನೆ.   

ZEENEWS TRENDING STORIES

By continuing to use the site, you agree to the use of cookies. You can find out more by Tapping this link