ಚಪಾತಿಗೆ ಹಿಟ್ಟು ನಾದುವಾಗ ಮಾಡುವ ಈ ತಪ್ಪಿನ ಪರಿಣಾಮ ಇಡೀ ಕುಟುಂಬವೇ ಎದುರಿಸಬೇಕಾಗುತ್ತದೆ ಎಚ್ಚರ .!
ಯಾವಾಗಲೂ ಅಗತ್ಯವಿರುವಷ್ಟು ಹಿಟ್ಟನ್ನು ಮಾತ್ರ ತೆಗೆದುಕೊಳ್ಳಿ. ಯಾಕೆಂದರೆ ಹಿಟ್ಟು ಉಳಿಯಿತು ಎಂದು ಫ್ರಿಡ್ಜ್‌ನಲ್ಲಿ ಇಟ್ಟು , ಬಳಸುವುದರಿಂದ ಕ್ಯಾನ್ಸರ್‌ನಂತಹ ಅಪಾಯಕಾರಿ ಕಾಯಿಲೆಗಳು ಬರುತ್ತವೆ. ಮತ್ತೊಂದೆಡೆ, ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಫ್ರಿಡ್ಜ್‌ನಲ್ಲಿ ಇರಿಸಲಾದ ಹಿಟ್ಟು ಮನೆಯ ಏಳಿಗೆಯನ್ನು ತಡೆಯುತ್ತದೆ.
ಮುಂಚಿತವಾಗಿ ಹಿಟ್ಟನ್ನು ಬೆರೆಸಬೇಡಿ. ಹೀಗೆ ಮಾಡುವುದರಿಂದ ಮನೆಯಲ್ಲಿ ನಕಾರಾತ್ಮಕ ಶಕ್ತಿ ಹೆಚ್ಚುತ್ತದೆ. ಒಂದು ವೇಳೆ ಕೆಲವು ಕಾರಣಗಳಿಂದ ಹಿಟ್ಟನ್ನು ಬಹಳ ಮುಂಚಿತವಾಗಿಯೇ ಕಲಸಿಡಬೇಕಾದ ಸಂದರ್ಭ ಬಂದರೆ ಅದನ್ನು ಮುಚ್ಚಿಡಿ.
ಹಿಟ್ಟನ್ನು ನಾಡಿದ ನಂತರ ಅದರ ಮೇಲೆ ನಿಮ್ಮ ಬೆರಳುಗಳಿಂದ ಗುರುತುಗಳನ್ನು ಮಾಡಿಕೊಳ್ಳಿ. ಪೂರ್ವಜರಿಗೆ ಪಿಂಡವನ್ನು ಅರ್ಪಿಸುವಾಗ ಹಿಟ್ಟಿನ ಉಂಡೆಯನ್ನು ಬಳಸಲಾಗುತ್ತದೆ. ಇಂತಹ ದುಂಡು ಹಿಟ್ಟಿನಿಂದ ಮಾಡಿದ ರೊಟ್ಟಿಯನ್ನು ತಿನ್ನುವುದರಿಂದ ಪಿತ್ರಾ ದೋಷ ಉಂಟಾಗುತ್ತದೆ ಎಂದು ಹೇಳಲಾಗುತ್ತದೆ.
ಯಾವಾಗಲೂ ಸ್ನಾನ ಮಾಡಿದ ನಂತರವೇ ಹಿಟ್ಟನ್ನು ಕಲಸಿಕೊಳ್ಳಿ. ಹಿಟ್ಟನ್ನು ಬೆರೆಸುವಾಗ ತಾಮ್ರದ ಪಾತ್ರೆಯಲ್ಲಿ ನೀರನ್ನು ತೆಗೆದುಕೊಳ್ಳಿ. ಹೀಗೆ ಮಾಡುವುದರಿಂದ ಮನೆಯಲ್ಲಿ ದೇವರ ಆಶೀರ್ವಾದ ಉಳಿಯುತ್ತದೆ ಎಂದು ಹೇಳಲಾಗುತ್ತದೆ. ಮಾತ್ರವಲ್ಲ ಆರೋಗ್ಯದ ದೃಷ್ಟಿಯಿಂದಲೂ ಇದು ಒಳ್ಳೆಯದು.
ಹಿಟ್ಟನ್ನು ಬೆರೆಸಿದ ನಂತರ, ಉಳಿದ ನೀರನ್ನು ಮರ ಗಿಡಗಳಿಗೆ ಹಾಕಿ. ಅಥವಾ ಬೇರೆ ಉದ್ದೇಶಕ್ಕಾಗಿ ಬಳಸ. ಆದರೆ ನೀರನು ಸುಮ್ಮನೇ ಎಸೆದು ವ್ಯರ್ಥ ಮಾಡಬೇಡಿ.
( ಸೂಚನೆ : ಇಲ್ಲಿ ನೀಡಲಾದ ಲೇಖನವು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.)