Bathing Tips: ದಿನವಿಡೀ ಫ್ರೆಶ್ ಆಗಿರಲು ಸ್ನಾನ ಮಾಡುವ ನೀರಿನಲ್ಲಿ ಇದನ್ನು ಬೆರೆಸಿ!
ಬೇಸಿಗೆಯಲ್ಲಿ ಬೆವರಿನ ದುರ್ಗಂಧದಿಂದ ಮುಕ್ತಿ ಹೊಂದಿ, ದಿನ ಪೂರ್ತಿ ಫ್ರೆಶ್ ಆಗಿರಲು ಬಯಸುತ್ತೀರಾ? ಇದಕ್ಕಾಗಿ, ಹೆಚ್ಚೇನೂ ಮಾಡಬೇಕಿಲ್ಲ. ನೀವು ಸ್ನಾನ ಮಾಡುವ ನೀರಿನಲ್ಲಿ ಕೆಲವು ವಸ್ತುಗಳನ್ನು ಬೆರೆಸಿ ಸ್ನಾನ ಮಾಡಿದರೆ ಅಷ್ಟೇ ಸಾಕು.
ಸ್ನಾನದ ನೀರಿನಲ್ಲಿ ರೋಸ್ ವಾಟರ್ ಬೆರೆಸಿ ಸ್ನಾನ ಮಾಡುವುದರಿಂದ ಬೆವರುವಿಕೆಯನ್ನು ತಡೆಗಟ್ಟಬಹುದು ಎಂದು ಹೇಳಲಾಗುತ್ತದೆ.
ನೀವು ಸ್ನಾನ ಮಾಡುವ ನೀರಿನಲ್ಲಿ ಪುದೀನಾ ಎಲೆಗಳನ್ನು ಬೆರೆಸಿ ಸ್ನಾನ ಮಾಡುವುದರಿಂದ ಬೆವರಿನ ವಾಸನೆಯಿಂದ ಪರಿಹಾರ ಪಡೆಯಬಹುದು ಎನ್ನಲಾಗುತ್ತದೆ.
ಆಯುರ್ವೇದದ ಗಣಿ ಎಂತಲೇ ಪರಿಗಣಿಸಲಾಗಿರುವ ಬೇವಿನ ಎಲೆಗಳನ್ನು ಸ್ನಾನ ಮಾಡುವ ನೀರಿನಲ್ಲಿ ಬೆರ್ಫೆಸಿ ಸ್ನಾನ ಮಾಡುವುದರಿಂದ ತುರಿಕೆ, ದದ್ದು ಸೇರಿದಂತೆ ಚರ್ಮದ ಹಲವು ಸಮಸ್ಯೆಗಳಿಂದ ದೂರ ಉಳಿಯಬಹುದು. ಮಾತ್ರವಲ್ಲ, ದಿನವಿಡೀ ದೇಹವು ತಾಜಾತನವನ್ನು ಅನುಭವಿಸುತ್ತದೆ.
ಅತ್ಯುತ್ತಮ ಬ್ಯಾಕ್ಟೀರಿಯಾ ನಿವಾರಕವಾಗಿರುವ ಅರಿಶಿನವನ್ನು ಸ್ನಾನದ ನೀರಿನಲ್ಲಿ ಬೆರೆಸಿ ಸ್ನಾನ ಮಾಡುವುದರಿಂದ ದೇಹದ ಪಿಹೆಚ್ ಅನ್ನು ಸಮತೋಲನದಲ್ಲಿಡಲು ಇದು ತುಂಬಾ ಪ್ರಯೋಜನಕಾರಿ ಆಗಿದೆ.
ಸ್ನಾನ ಮಾಡುವ ನೀರಿನಲ್ಲಿ ಒಂದೆರಡು ಹನಿ ಹರಳೆಣ್ಣೆ ಬಳಸುವುದರಿಂದ ಇದು ದೇಹದ ದುರ್ವಾಸನೆಯನ್ನು, ಅದರಲ್ಲೂ ಅಂಡರ್ ಆರ್ಮ್ ನ ವಾಸನೆಯನ್ನು ಕಡಿಮೆ ಮಾಡಲು ಪ್ರಯೋಜನಕಾರಿ ಎನ್ನಲಾಗುತ್ತದೆ.
ಸೂಚನೆ: ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ದಯವಿಟ್ಟು ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.