ಪಥ್ಯ ಬೇಡವೇ ಬೇಡ... ಸ್ನಾನದ ಬಿಸಿನೀರಿಗೆ ಈ ಪುಡಿ ಬೆರೆಸಿದರೆ ನಿಮಿಷದಲ್ಲಿ ಕಂಟ್ರೋಲ್ʼಗೆ ಬರುತ್ತೆ ಬ್ಲಡ್ ಶುಗರ್! ಮತ್ಯಾವತ್ತು ಏರುವ ಭಯವೇ ಬೇಡ
ಅರಿಶಿನ ಕೇವಲ ಮಸಾಲೆ ವಸ್ತುವಲ್ಲ. ಇದನ್ನು ಶತಮಾನಗಳಿಂದ ಔಷಧವಾಗಿಯೂ ಬಳಕೆ ಮಾಡಲಾಗುತ್ತಿದೆ. ಇದರಲ್ಲಿರುವ ಅನೇಕ ಗುಣಗಳು ಮಾನವನ ದೇಹಕ್ಕೂ ಅನೇಕ ವಿಧಗಳಲ್ಲಿ ಪ್ರಯೋಜನವನ್ನು ನೀಡುತ್ತದೆ. ಅಂದಹಾಗೆ ಮಧುಮೇಹ ನಿರ್ವಹಿಸಲು ಅರಿಶಿನ ಹೇಗೆ ಸಹಾಯಕ ಎಂಬುದನ್ನು ಮುಂದೆ ತಿಳಿಯೋಣ.
ಅರಿಶಿನ ಎಂಬುದು ಕರ್ಕುಮಾ ಲಾಂಗಾ ಎಂಬುದರ ಸಾಮಾನ್ಯ ಹೆಸರು. ಏಷ್ಯಾ ದೇಶಗಳಲ್ಲಿ ಸಾಂಪ್ರದಾಯಿಕ ಆಹಾರ ಭಕ್ಷ್ಯಗಳಲ್ಲಿ ಬಳಕೆ ಮಾಡುವ ಪ್ರಧಾನ ಮಸಾಲೆ ವಸ್ತುವಾಗಿದೆ.
ಆರೋಗ್ಯವನ್ನು ಸುಧಾರಿಸಲು ಅರಿಶಿನವನ್ನು ಅಡುಗೆಯಲ್ಲಿ ಬಳಸಲಾಗುತ್ತದೆ. ಅಂದಹಾಗೆ ಆರೋಗ್ಯ ತಜ್ಞರು, ವಿಜ್ಞಾನಿಗಳು ಇದರ ಆರೋಗ್ಯ ಪ್ರಯೋಜನಗಳ ಬಗ್ಗೆ ಅನೇಕ ವರದಿಗಳನ್ನು ನೀಡಿದ್ದಾರೆ.
ಈ ಲೇಖನದಲ್ಲಿ, ಮಧುಮೇಹ ನಿಯಂತ್ರಣಕ್ಕೆ ಅರಶಿನ ಹೇಗೆ ಪ್ರಯೋಜನಕಾರಿ? ಬಳಕೆಯ ವಿಧಾನ ಹೇಗೆ ಎಂಬುದನ್ನು ತಿಳಿಯೋಣ.
ಅರಿಶಿನ ಮತ್ತು ಅದರ ಸಂಯುಕ್ತಗಳು ಮಧುಮೇಹ ಮತ್ತು ಸೋರಿಯಾಸಿಸ್ʼನಂತಹ ಸಮಸ್ಯೆಗಳನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಅರಿಶಿನವು ಉರಿಯೂತ ಮತ್ತು ಆಕ್ಸಿಡೇಟಿವ್ ಒತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುವ ಗುಣಲಕ್ಷಣಗಳನ್ನು ಹೊಂದಿದೆ ಎಂದು ಅನೇಕ ವರದಿಗಳಲ್ಲಿ ವಿಜ್ಞಾನಿಗಳು ಉಲ್ಲೇಖಿಸಿದ್ದಾರೆ.
ಮಧುಮೇಹ ನಿಯಂತ್ರಣದಲ್ಲಿ ಪ್ರಮುಖ ಪಾತ್ರ ವಹಿಸುವ ಅರಶಿಣವನ್ನು ಅನೇಕ ರೀತಿಯಲ್ಲಿ ಬಳಸಬಹುದು. ಅದರಲ್ಲಿ ಒಂದು ಸ್ನಾನದ ನೀರಿಗೆ ಚಿಟಿಕೆಯಷ್ಟು ಅರಶಿಣ ಬೆರೆಸುವುದು. ಈ ವಿಧಾನದ ಮೂಲಕ ಮಧುಮೇಹವನ್ನು ಶೀಘ್ರವೇ ನಿಯಂತ್ರಣಕ್ಕೆ ತರಬಹುದು ಎಂದು ಆರೋಗ್ಯ ತಜ್ಞರ ಅಭಿಪ್ರಾಯ.
ಅರಿಶಿನವು ಕರ್ಕ್ಯುಮಿನ್ ಎಂಬ ಸಂಯುಕ್ತವನ್ನು ಹೊಂದಿದೆ. ಇದು ಅನೇಕ ಆರೋಗ್ಯ ಪ್ರಯೋಜನಗಳ ಮೂಲವಾಗಿದೆ. ಇಲ್ಲಿಯವರೆಗಿನ ಹೆಚ್ಚಿನ ಸಂಶೋಧನೆಗಳಲ್ಲಿ ಕರ್ಕ್ಯುಮಿನ್ ಪ್ರಯೋಜನಗಳ ಬಗ್ಗೆಯೇ ಹೆಚ್ಚಾಗಿ ಹೇಳಲಾಗಿದೆ.
ಕರ್ಕ್ಯುಮಿನ್ ಮಧುಮೇಹ ಹೊಂದಿರುವ ಜನರಿಗೆ ವಿವಿಧ ರೀತಿಯಲ್ಲಿ ಸಹಾಯ ಮಾಡುತ್ತದೆ ಎಂದು ಫಲಿತಾಂಶಗಳು ಸೂಚಿಸುತ್ತವೆ. ಇದು ಇನ್ಸುಲಿನ್ ಪ್ರತಿರೋಧ ಮತ್ತು ಕೊಲೆಸ್ಟ್ರಾಲ್ ಮಟ್ಟವನ್ನು ಸುಧಾರಿಸುತ್ತದೆ.
ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.