ಟಿ20 ಕ್ರಿಕೆಟ್ʼನಲ್ಲಿ ತ್ರಿಶತಕ ಬಾರಿಸಿದ ವಿಶ್ವದ ಒಬ್ಬನೇ ಒಬ್ಬ ಆಟಗಾರ ಯಾರು ಗೊತ್ತಾ? ಈತ ಭಾರತದವನೇ... 39 ಸಿಕ್ಸರ್, 14 ಬೌಂಡರಿ ಬಾರಿಸಿದ್ದ ಸ್ಟಾರ್ ಕ್ರಿಕೆಟಿಗನೀತ
ಟಿ20 ಕ್ರಿಕೆಟ್ ಅಂದರೇನೆ ನಿಜವಾದ ಥ್ರಿಲ್.. ನಿಜವಾದ ಕಿಕ್... ಈ ಸ್ವರೂಪದಲ್ಲಿ ಸಿಕ್ಸರ್ ಬೌಂಡರಿಗಳದ್ದೇ ಅಬ್ಬರ... ಅಂದಹಾಗೆ ಈ ಸ್ವರೂಪದಲ್ಲಿ ದ್ವಿಶತಕ ಬಾರಿಸೋದೇ ಹೆಚ್ಚು. ಅಂತಹದ್ದರಲ್ಲಿ ತ್ರಿಶತಕ ಬಾರಿಸಿದ ಕ್ರಿಕೆಟಿಗನಿದ್ದಾನೆ. ಆತ ಯಾರೆಂಬುದು ನಿಮಗೆ ತಿಳಿದಿದೆಯೇ? ಆತನ ಬಗ್ಗೆ ನಾವಿಂದು ಮಾಹಿತಿ ನೀಡಲಿದ್ದೇವೆ
T20 ಕ್ರಿಕೆಟ್ʼನಲ್ಲಿ, ಯಾವುದೇ ಬ್ಯಾಟ್ಸ್‌ಮನ್ ಒಂದು ಇನ್ನಿಂಗ್ಸ್ʼನಲ್ಲಿ ಒಟ್ಟು 120 ಎಸೆತಗಳಲ್ಲಿ ಶತಕ ಗಳಿಸುವುದೆಂದರೆ ಅದು ಅದ್ಭುತವೇ. ಒಂದು ವೇಳೆ ದ್ವಿಶತಕ ಬಾರಿಸಿದರೆ ಅದು ದೊಡ್ಡ ಮಾತೇ... ಆದರೆ, ಇಲ್ಲೊಬ್ಬ ಕ್ರಿಕೆಟಿಗ ಟ್ರಿಪಲ್ ಸೆಂಚುರಿ ಬಾರಿಸಿದ್ದಾನೆ, ಇದನ್ನು ಪವಾಡವೇನೋ ಎನ್ನಬೇಕು ಹೊರತು ಬೇರೇನು ಅಲ್ಲ.
ಅಂದಹಾಗೆ ಅಂತಹ ಸಾಹಸ ಮಾಡಿದ ಕ್ರಿಕೆಟಿಗ ಮೋಹಿತ್ ಅಹ್ಲಾವತ್. ದೆಹಲಿಯಲ್ಲಿ ಆಯೋಜಿಸಲಾದ ಸ್ಥಳೀಯ ಪಂದ್ಯಾವಳಿಯಲ್ಲಿ ಮಾವಿ ಇಲೆವೆನ್ ಪರ ಅದ್ಭುತವಾಗಿ ಬ್ಯಾಟಿಂಗ್ ಮಾಡುತ್ತಿದ್ದ ಮೋಹಿತ್, ಫ್ರೆಂಡ್ಸ್ ಇಲೆವೆನ್ ಬೌಲರ್ʼಗಳನ್ನು ಬೆಂಡೆತ್ತಿದ್ದರು.
72 ಎಸೆತಗಳಲ್ಲಿ 39 ಸಿಕ್ಸರ್ ಮತ್ತು 14 ಬೌಂಡರಿಗಳ ನೆರವಿನಿಂದ ತ್ರಿಶತಕ ಗಳಿಸಿದ್ದರು. 2017ರಲ್ಲಿ ಈ ಸಾಧನೆ ಮಾಡಿದ ಅವರು ಇತಿಹಾಸ ಸೃಷ್ಟಿಸುತ್ತಿದ್ದಲ್ಲದೆ, ಈ ದಾಖಲೆಯನ್ನು ಇದುವರೆಗೆ ಯಾರೂ ಮುರಿದಿಲ್ಲ.
ದೆಹಲಿಯಲ್ಲಿ ನಡೆದ ಸ್ಥಳೀಯ ಟೂರ್ನಿಯಲ್ಲಿ ಅಮೋಘ ಬ್ಯಾಟಿಂಗ್ ಮಾಡಿದರೂ ಮೋಹಿತ್ ಅಹ್ಲಾವತ್ ಐಪಿಎಲ್ʼನಲ್ಲಿ ಸ್ಥಾನ ಪಡೆದಿರಲಿಲ್ಲ. ಅದಾದ ಬಳಿಕ ಮೋಹಿತ್ ದೆಹಲಿ ರಣಜಿ ತಂಡ ಮತ್ತು ಸರ್ವಿಸಸ್ʼಗಾಗಿ ವಿಕೆಟ್ ಕೀಪರ್-ಬ್ಯಾಟ್ಸ್‌ಮನ್ ಆಗಿ ಆಡಿದ್ದಾರೆ.
ನಂತರ 2015 ರಲ್ಲಿ ರಾಜಸ್ಥಾನ ತಂಡದ ವಿರುದ್ಧ ಪ್ರಥಮ ದರ್ಜೆಗೆ ಪಾದಾರ್ಪಣೆ ಮಾಡಿದರು. ಅಂಕಿಅಂಶಗಳನ್ನು ಗಮನಿಸಿದರೆ, ಮೋಹಿತ್ ಪ್ರಥಮ ದರ್ಜೆ ಕ್ರಿಕೆಟ್ʼನಲ್ಲಿ 236 ರನ್ ಮತ್ತು ಲಿಸ್ಟ್ ಎ ಕ್ರಿಕೆಟ್ʼನಲ್ಲಿ 554 ರನ್ ಗಳಿಸಿದ್ದಾರೆ.
ದೆಹಲಿಯಲ್ಲಿರುವ ಲಾಲ್ ಬಹದ್ದೂರ್ ಶಾಸ್ತ್ರಿ ಕ್ರಿಕೆಟ್ ಅಕಾಡೆಮಿಯಿಂದ ತರಬೇತಿ ಪಡೆದಿದ್ದಾರೆ. ಅಂದಹಾಗೆ ಸದ್ಯ ಭಾರತ ಕ್ರಿಕೆಟ್ ತಂಡದ ಕೋಚ್ ಆಗಿರುವ ಗೌತಮ್ ಗಂಭೀರ್ ಕೂಡ ಇದೇ ಕ್ರಿಕೆಟ್ ಅಕಾಡೆಮಿಯಿಂದಲೇ ಬ್ಯಾಟಿಂಗ್ ತರಬೇತಿ ಆರಂಭಿಸಿದ್ದರು.