Actress Honey Rose:ರೆಡ್‌ ಡ್ರೆಸ್‌ನಲ್ಲಿ ಹನಿ ರೋಸ್‌ ಸಖತ್‌ ಟ್ರೋಲ್ಡ್‌: ನಟ್ಟಿಗರು ಅಂದಿದ್ದೇನು?

Tue, 13 Feb 2024-5:26 pm,

ಮಾಲಿವುಡ್‌ ನಟಿ ಹನಿ ರೋಸ್‌ ಆಗಾಗ ತನ್ನ ಅಭಿಮಾನಿಗಳ ಮುಂದೆ ಡ್ಯಾನ್ಸ್ ಮಾಡುತ್ತಾ ಮತ್ತು ಅವರೊಂದಿಗೆ ಫೋಟೋಗಳನ್ನು ತೆಗೆದುಕೊಳ್ಳುತ್ತಾ ಬರುತ್ತಾಳೆ. ಇಷ್ಟೇಯಲ್ಲದೇ ಈ ನಟಿಯ ಫೋಟೋಗಳು ಮತ್ತು ವೀಡಿಯೊಗಳನ್ನು ಸೋಷಿಯಲ್‌ ಮಿಡಿಯಾದಲ್ಲಿ ಹರಿದಾಡುತ್ತಿರುತ್ತದೆ.

ನಟಿ ಹನಿ ರೋಸ್‌ ಇತ್ತೀಚೆಗಷ್ಟೇ ಚಿನ್ನಾಭರಣ ಮಳಿಗೆಯೊಂದರ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡವರು, ಅಲ್ಲಿ ಕೆಂಪು ಡ್ರೆಸ್‌ನಲ್ಲಿ ತುಂಬಾ ಸುಂದರವಾಗಿ ಕಾಣುತ್ತಿದ್ದರು. ಆದರೆ ಪ್ರತಿಬಾರಿಯಂತೆ ಈ ಬಾರಿ ಈ ನಟಿ ದೇಹದ ಆಕಾರ ಮತ್ತು ಬಟ್ಟೆಗಳನ್ನು ಪ್ರಶ್ನಿಸುವುದು ಮತ್ತು ಟೀಕಿಗೆ ಒಳಗಾಗಿದ್ದಾರೆ.

ನಟಿ ಹನಿ ರೋಸ್‌ ಕೆಂಪು ಡ್ರೆಸ್‌ನಲ್ಲಿರುವ ಫೋಟೋಗಳನ್ನು ಸೋಷಿಯಲ್‌ ಮಿಡಿಯಾದಲ್ಲಿ ಶೇರ್‌ ಮಾಡಿದನ್ನು ನೋಡಿದ ನೆಟ್ಟಿಗರು, ಇದು ಜೇನು ಗುಲಾಬಿ ಅಲ್ಲ, ಕೆಂಪು ಗುಲಾಬಿ ಎಂಬ ಕಾಮೆಂಟ್‌ಗಳನ್ನು ಹಾಕಲು ಪ್ರಾರಂಭಿಸಿದ್ದಾರೆ.

ಮಾಲಿವುಡ್‌ ಸುಂದರಿ ಫೋಟೋಗಳನ್ನು ನೋಡಿದ ಇನ್ನು ಕೆಲವರು ಚುಡಾಯಿಸುತ್ತಾ, ಕೆಂಪು ರೇಷ್ಮೆ ತೆಗೆದ ಪರಿ ಎಂದು ಬಣ್ಣಿಸಿದ್ದಾರೆ, ಮತ್ತೆ ಇನ್ನೋಬ್ಬರು ಇದೇನಾ ನಾಗವಲ್ಲಿ? ಎಂದು ಕೇಳುವವರು ಹಲವರಿದ್ದಾರೆ. ಇಷ್ಟು ದಿನ ನೋಡಿದ ಮೇಲೆ ಹೀಗೆ ನೋಡಿದಾಗ ಭಯವಾಗುತ್ತಿದೆ ಎನ್ನುವವರು ಬಹಳ ಮಂದಿ ಇದ್ದಾರೆ. 

ಹನಿ ರೋಸ್‌ ಪರವಾಗಿ ಕೆಲವರು ಮಾತನಾಡಿದ್ದು, ಅವರು ಇದು ಏನು? ನನಗೆ ಮಾತ್ರ ಸ್ವಲ್ಪ ಭಯವಾಯಿತೇ? ಹನಿ ರೋಸ್ ಅಥವಾ ಅವರ ಮುಖಗಳನ್ನು ದೂಷಿಸುವುದಿಲ್ಲ. ಹನಿ ನೋಡಿದಾಗ ಯಕ್ಷಿಯಂತೆ ಅನ್ನಿಸಿತು ಎಂದು ನೂರಾರು ಕಮೆಂಟ್ ಗಳು ಬರುತ್ತಿವೆ.

ಮಲಯಾಳಂ ಬೆಡಗಿ ಹನಿ ರೋಸ್‌ ಇದ್ಯಾವುದೂ ತನ್ನ ಮೇಲೆ ಪರಿಣಾಮ ಬೀರುವುದಿಲ್ಲ. ಯಾರು ಏನೇ ಹೇಳಿದರೂ ತೊಂದರೆ ಇಲ್ಲ, ದೇವರು ಕೊಟ್ಟದ್ದನ್ನು ಬಿಟ್ಟರೆ ನನ್ನ ದೇಹದಲ್ಲಿ ಬೇರೇನೂ ಇಲ್ಲ ಎಂದು ನಟಿ ಹೇಳಿದ್ದಾರೆ.

ನಟಿ ಹನಿ ರೋಸ್‌ಗೆ ಕೆಲವರು ಅಸಭ್ಯ ಮತ್ತು ಅಶ್ಲೀಲ ವಸ್ತುಗಳಿಂದ ಬಾಡಿ ಪೇಂಟಿಂಗ್ ಮಾಡುತ್ತಿದ್ದರೂ, ಯಾವುದೇ ಹೊಸ ಟೀಕೆಗಳಿಗೆ ಕಿವಿಗೊಡಲು ಅಥವಾ ಅದಕ್ಕೆ ಪ್ರತಿಕ್ರಿಯಿಸಲು ಹೋಗುವುದಿಲ್ಲ.  

ZEENEWS TRENDING STORIES

By continuing to use the site, you agree to the use of cookies. You can find out more by Tapping this link