Photo Gallery: ಧಾರವಾಡದ ಕೃಷಿ ವಿಶ್ವವಿದ್ಯಾಲಯ ಘಟಿಕೋತ್ಸವದ ಕ್ಷಣಗಳು

Tue, 13 Jun 2023-4:40 pm,

ಕೃಷಿ ವಿಶ್ವವಿದ್ಯಾಲಯದ 36 ನೇ ಘಟಿಕೋತ್ಸವದಲ್ಲಿ ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಉಳುವರೆ ಗ್ರಾಮದ ಪದ್ಮಶ್ರೀ ತುಳಸಿಗೌಡ ಮತ್ತು ಧಾರವಾಡ ಜಿಲ್ಲೆಯ ಅಣ್ಣಿಗೇರಿ ಪಟ್ಟಣದ ವಿಶ್ವಶಾಂತಿ ಕೃಷಿ ಸಂಶೋಧನಾ ಕೇಂದ್ರದ ಸಂಸ್ಥಾಪಕ ಪದ್ಮಶ್ರೀ ಅಬ್ದುಲಖಾದರ ಇಮಾಮ್‍ಸಾಬ ನಡಕಟ್ಟಿನ ಅವರಿಗೆ ರಾಜ್ಯಪಾಲರು ಮತ್ತು ಕೃಷಿವಿವಿಯ ಕುಲಾಧಿಪತಿಗಳಾದ ಥಾವರ್‍ಚಂದ್ ಗೆಹ್ಲೋಟ್ ಅವರು ಗೌರವ ಡಾಕ್ಟರೇಟ್ ಪ್ರಧಾನ ಮಾಡಿದರು.

ಕೃಷಿ ಆಧುನಿಕರಣಗೊಳಿಸಲು ಮತ್ತು ಹೆಚ್ಚು ಲಾಭದಾಯಕಗೊಳಿಸಲು ರಾಜ್ಯ ಮತ್ತು ಕೇಂದ್ರ ಸರಕಾರಗಳು ಅನೇಕ ಯೋಜನೆಗಳ ಮೂಲಕ  ಪೆÇ್ರೀತ್ಸಾಹ ನೀಡುತ್ತಿವೆ. ರೈತರನ್ನು ಸಶಕ್ತರನ್ನಾಗಿ, ಸುಖಿಗಳನ್ನಾಗಿ ಮಾಡಲು ಪ್ರಾಮುಖ್ಯತೆ ನೀಡಬೇಕೆಂದು ಸಚಿವ ಎನ್.ಚೆಲುವರಾಯಸ್ವಾಮಿ ಹೇಳಿದರು.

ಪದವಿ ಪಡೆದು ವಿವಿಯಿಂದ ಹೊರ ಬರುತ್ತಿರುವ ಯುವ ಕೃಷಿಮಿತ್ರರು, ವಿಜ್ಞಾನಿಗಳು ತಾವು ಕಲಿಕೆಯಲ್ಲಿ ಪಡೆದ ಜ್ಞಾನವನ್ನು ರೈತರ ಜಮೀನುಗಳಲ್ಲಿ, ಕ್ಷೇತ್ರಮಟ್ಟದಲ್ಲಿ ಬಳಸಿ, ಬದಲಾವಣೆ ತರಬೇಕು ಎಂದು ಕೃಷಿ ಸಚಿವರು ತಿಳಿಸಿದರು.

ಕೃಷಿ ಸಚಿವ ಮತ್ತು ಕೃಷಿ ವಿಶ್ವವಿದ್ಯಾಲಯದ ಸಹಕುಲಾಧಿಪತಿ ಎನ್. ಚೆಲುವರಾಯಸ್ವಾಮಿ ಅವರು ಮಾತನಾಡಿ, ಧಾರವಾಡ ಕೃಷಿ ವಿಶ್ವವಿದ್ಯಾಲಯ ಶಿಕ್ಷಣ, ಸಂಶೋಧನೆ ಮತ್ತು ಕೃಷಿ ತಂತ್ರಜ್ಞಾನ ಕ್ಷೇತ್ರದಲ್ಲಿ ರಾಷ್ಟ್ರಮಟ್ಟದಲ್ಲಿ ಕೀರ್ತಿ, ಯಶಸ್ಸು ಗಳಿಸಿದೆ. ಕೃಷಿ ಇಲಾಖೆ, ಕೃಷಿ ವಿವಿ ಮತ್ತು ಸಂಶೋಧಕರು ರೈತರೊಂದಿಗೆ ನಿಲ್ಲಬೇಕು. ಹೊಸ ತಳಿಗಳನ್ನು ಸಂಶೋಧಿಸಿ, ಕೃಷಿ ಲಾಭದಾಯವಾಗುವಂತೆ ಮಾಡಬೇಕು ಎಂದು ಅವರು ಹೇಳಿದರು.

ವಿಶ್ವಶಾಂತಿ ಹಾಗೂ ವಿಶ್ವಕಲ್ಯಾಣಕ್ಕಾಗಿ ಭಾರತ ಮುಂದಾಳತ್ವ ವಹಿಸುತ್ತಿದೆ. ಯುವ ಪಿಳಿಗೆಯ ಜನರು, ಯುವ ನಾಯಕರು ಕೃಷಿ ದೃಷ್ಟಿಯಿಂದ ಹೆಚ್ಚು ಆಧ್ಯತೆಯಿಂದ ಶ್ರಮಿಸಬೇಕೆಂದು ಅವರು ಹೇಳಿದರು.

ಭಾರತ ಕೃಷಿ ಪ್ರಧಾನ ರಾಷ್ಟ್ರ. ದೇಶದ ಅರ್ಥವ್ಯವಸ್ಥೆಗೆ ಕೃಷಿ ಮುಖ್ಯವಾಗಿದೆ. ಕೇಂದ್ರ ಮತ್ತು ರಾಜ್ಯ ಸರಕಾರಗಳು ಕೃಷಿ, ಕೃಷಿಕರ ಅಭಿವೃದ್ಧಿಗೆ ಅನೇಕ ಯೋಜನೆಗಳನ್ನು ಜಾರಿಗೊಳಿಸಿವೆ ಎಂದು ರಾಜ್ಯಪಾಲರು ತಿಳಿಸಿದರು.

ಘಟಿಕೋತ್ಸವದ ಅಧ್ಯಕ್ಷತೆ ವಹಿಸಿದ್ದ ರಾಜ್ಯಪಾಲ ಹಾಗೂ ಕೃಷಿ ವಿಶ್ವವಿದ್ಯಾಲಯದ ಕಲಾಧಿಪತಿಯಾದ ಗೌರವಾನ್ವಿತ ಥಾವರ್‍ಚಂದ್ ಗೆಹ್ಲೋಟ್ ಅವರು ಮಾತನಾಡಿ, ಕೃಷಿ ಪದವಿಧರರು ಆತ್ಮನಿರ್ಭರ ಭಾರತಕ್ಕೆ ಕೈ ಜೋಡಿಸಬೇಕು. ಕಲಿತ ಜ್ಞಾನವನ್ನು ಇತರರೊಂದಿಗೆ ಹಂಚಿಕೊಳ್ಳಬೇಕು ಎಂದು ಅವರು ಹೇಳಿದರು.

ಕೃಷಿ ವಿಶ್ವವಿದ್ಯಾಲಯದ ಸಾಧನೆ ಹಾಗೂ ಸಂಶೋಧನೆಗಳ ಬಗ್ಗೆ ಮಾತನಾಡಿ, ತಮ್ಮ ಮೆಚ್ವುಗೆ ವ್ಯಕ್ತಪಡಿಸಿದರು. ವಿದ್ಯಾರ್ಥಿಗಳು ಪದವಿ ಪಡೆದ ನಂತರ ಕಲಿತ ಶಿಕ್ಷಣ, ಪಡೆದ ಜ್ಞಾನವನ್ನು ಬಳಸಿಕೊಂಡು ತಾವೂ ಬೆಳೆಯಬೇಕು ಮತ್ತು ರಾಷ್ಟ್ರವನ್ನು ಬೆಳೆಸಬೇಕೆಂದು ಡಾ.ಹಿಮಾಶು ಪಾಠಕ್ ಸಲಹೆ ನೀಡಿದರು.

ಸಮಾಜದ ಸೇವೆ ಮತ್ತು ಪ್ರಚಲಿತದಲ್ಲಿನ ಪದ್ದತಿಗಳನ್ನು ಸುಧಾರಿಸಿ, ಕೃಷಿ ಲಾಭದಾಯಕವಾಗಿ ಮಾಡುವುದು ಕೃಷಿ ಶಿಕ್ಷಣದ ಉದ್ದೇಶವಾಗಿದೆ.ನೂತನ ತಂತ್ರಜ್ಞಾನ ಬಳಕೆ ಹೆಚ್ಚಬೇಕು. ಮತ್ತು ಪ್ರಾಯೋಗಿಕ ಪಾಠದ ಶಿಕ್ಷಣ ಹೆಚ್ಚು ಪರಿಣಾಮ ಬೀರುತ್ತದೆ ಎಂದು ಅವರು ತಿಳಿಸಿದರು.

ಅವರು ಇಂದು ಬೆಳಿಗ್ಗೆ ಧಾರವಾಡ ಕೃಷಿ ವಿಶ್ವವಿದ್ಯಾಲಯವು ರೈತ ಜ್ಞಾನಾಭಿವೃದ್ಧಿ ಕೇಂದ್ರದಲ್ಲಿ ಆಯೋಜಿಸಿದ್ದ 36 ನೇ ಘಟಿಕೋತ್ಸವದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ, ತಮ್ಮ ಘಟಿಕೋತ್ಸವ ಭಾಷಣದಲ್ಲಿ ಈ ರೀತಿ ಹೇಳಿದರು.

ZEENEWS TRENDING STORIES

By continuing to use the site, you agree to the use of cookies. You can find out more by Tapping this link