ವ್ಯಾಪಾರೋದ್ಯಮದ ದಿಗ್ಗಜ್ಜ ಮುಖೇಶ್, ಅನಿಲ್ ಅಂಬಾನಿ ಸಹೋದರಿ ಇವರೇ ! 9 ವರ್ಷಗಳ ಹಿಂದೆಯೇ ಪತಿಯನ್ನು ಕಳೆದುಕೊಂಡ ಇವರ ಸ್ಥಿತಿ ಹೇಗಿದೆ ಗೊತ್ತಾ ?

Mon, 08 Jul 2024-9:59 am,

ಜಿಯೋ ವರ್ಲ್ಡ್ ಸೆಂಟರ್ ನಲ್ಲಿ ಅನಂತ್ ಅಂಬಾನಿ ಸಂಗೀತ ಸಮಾರಂಭ ಆಯೋಜಿಸಲಾಗಿತ್ತು.ಅನಂತ್ ರಾಧಿಕಾ ಅವರ ಮದುವೆಯನ್ನು ಆಚರಿಸಲು ಇಡೀ ಬಾಲಿವುಡ್ ಸೇರಿದ್ದರೆ, ಅನಂತ್ ಮತ್ತು ಆಕಾಶ್ ಅಂಬಾನಿ ಅವರ ಸೋದರತ್ತೆ ದೀಪ್ತಿ ಕೂಡಾ ಎಲ್ಲರ ಗಮನ ಸೆಳೆದರು.ಆದರೆ ಅವರ ಇನ್ನೊಬ್ಬ ಸಹೋದರಿ ನೀನಾ ಕೊಠಾರಿ ಮಾತ್ರ ಕ್ಯಾಮರಾ ಕಣ್ಣುಗಳಿಂದ ದೂರವೇ ಉಳಿದಿದ್ದಾರೆ.

ಮುಖೇಶ್ ಅಂಬಾನಿ ಮತ್ತು ಅನಿಲ್ ಅಂಬಾನಿಗೆ ಇಬ್ಬರು ಸಹೋದರಿಯರು.  ಒಬ್ಬರು ದೀಪ್ತಿ ಮತ್ತು ಇನ್ನೊಬ್ಬರು ನೀನಾ ಕೊಠಾರಿ.ಇಲ್ಲಿ ನಾವು ನೀನಾ ಕೊಠಾರಿ ಬಗ್ಗೆ ಮಾತನಾಡುತ್ತೇವೆ.   

ನೀನಾ ಕೊಠಾರಿ ತನ್ನ ಸ್ವಂತ ವ್ಯವಹಾರ ನಡೆಸುತ್ತಿದ್ದು, ಕುಟುಂಬವನ್ನು ಚೆನ್ನಾಗಿ ನಿಭಾಯಿಸುತ್ತಿದ್ದಾರೆ.ಜನ ಮಾನಸದಿಂದ ಸದಾ ದೂರವೇ ಉಳಿಯುತ್ತಾರೆ. ಅಪರೂಪಕ್ಕೊಮೆ ಕ್ಯಾಮೆರಾ ಕಣ್ಣಿಗೆ ಬೀಳುತ್ತಾರೆ. 

ಧೀರೂಭಾಯಿ ಅಂಬಾನಿ ಮತ್ತು ಕೋಕಿಲಾಬೆನ್ ಅಂಬಾನಿ ಅವರ ಪುತ್ರಿ ನೀನಾ 2003 ರಲ್ಲಿ ಸ್ವಂತ ಉದ್ಯಮವನ್ನು ಸ್ಥಾಪಿಸಿದರು.ಅಂಬಾನಿ ಕುಟುಂಬದಂತೆ, ನೀನಾ ಕೂಡಾ ಯಶಸ್ವಿ ಉದ್ಯಮಿ.ಕೋಟಿಗಟ್ಟಲೆ ಮೌಲ್ಯದ ಸಾಮ್ರಾಜ್ಯವನ್ನು ಕಟ್ಟಿದವರು. ಅವರು ಜಾವಗ್ರೀನ್ ಕಾಫಿ ಮತ್ತು ಫೂಟ್ ಫ್ರ್ಯಾಂಚೈಸ್ ಅನ್ನು ನಡೆಸುತ್ತಾರೆ. 

ನೀನಾ ಕೊಠಾರಿ 1986 ರಲ್ಲಿ ವಿವಾಹವಾದರು.ಅವರ ಪತಿ ಕೂಡಾ ಉದ್ಯಮಿಯಾಗಿದ್ದರು.ಆದರೆ 9 ವರ್ಷಗಳ ಹಿಂದೆ ಭದ್ರಶ್ಯಾಮ್ ಕೊಠಾರಿ  ಕ್ಯಾನ್ಸರ್ ನಿಂದ ನಿಧನರಾದರು.ಪ್ರಸ್ತುತ,ನೀನಾ ಕೊಠಾರಿ ಮಗ ಅರ್ಜುನ್ ಮತ್ತು ಮಗಳು ನಯನತಾರಾ ಜೊತೆ ಇದ್ದಾರೆ.    

ಪತಿಯ ನಿಧನದ ನಂತರ,ನೀನಾ ಕೊಠಾರಿ ತನ್ನ ಗಂಡನ ವ್ಯವಹಾರಕ್ಕೆ ಹೆಗಲು ಕೊಡುತ್ತಾರೆ. HC ಕೊಠಾರಿ ಸಮೂಹವನ್ನು ಹೆಚ್ಚಿನ ಎತ್ತರಕ್ಕೆ ಕೊಂಡೊಯ್ದರು. ಕಾರ್ಪೊರೇಟ್ ಷೇರುಗಳ ಪ್ರಕಾರ,ಅವರ ನಿವ್ವಳ ಮೌಲ್ಯ 52.4 ಕೋಟಿ ರೂ. ಈ ಡೇಟಾವು ಹಲವಾರು ವರ್ಷಗಳಷ್ಟು ಹಳೆಯದು ಎನ್ನುವುದು ಗಮನಿಸಬೇಕಾದ ಅಂಶ.  

ನೀನಾ ಕೊಠಾರಿ ತನ್ನ ಸಹೋದರರೊಂದಿಗೆ ಮಾತ್ರವಲ್ಲದೆ ತನ್ನ ಅತ್ತಿಗೆಯೊಂದಿಗೆ ಉತ್ತಮ ಬಾಂಧವ್ಯವನ್ನು ಹೊಂದಿದ್ದಾರೆ. ಅದರಲ್ಲೂ ಟೀನಾ ಅಂಬಾನಿ ಜೊತೆ ವಿಶೇಷ ಒಡನಾಟವಿದೆ. 

ZEENEWS TRENDING STORIES

By continuing to use the site, you agree to the use of cookies. You can find out more by Tapping this link