ಮುಂಜಾನೆ ಒಂದು ಲೋಟ ಈ ಚಹಾ ಕುಡಿಯಿರಿ, ಹೈ ಬ್ಲಡ್ ಶುಗರ್ ಕೂಡಾ ನಾರ್ಮಲ್ ಆಗುವುದು !
ನೈಸರ್ಗಿಕವಾಗಿ ಸಿಗುವ ಕೆಲವು ವಸ್ತುಗಳನ್ನು ಬಳಸುವ ಮೂಲಕ ಬ್ಲಡ್ ಶುಗರ್ ಅನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಬಹುದು. ಅವುಗಳಲ್ಲಿ ಒಂದು ನೆಲ್ಲಿಕಾಯಿ ಟೀ.
ನೆಲ್ಲಿಕಾಯಿಯಲ್ಲಿ ಕಬ್ಬಿಣ, ವಿಟಮಿನ್ ಸಿ,ಕಾರ್ಬೋಹೈಡ್ರೇಟ್,ರಂಜಕ, ಫೈಬರ್,ಕ್ಯಾಲ್ಸಿಯಂ ಮತ್ತು ಪ್ರೋಟೀನ್‌ಗಳಂತಹ ಅನೇಕ ಪ್ರಮುಖ ಪೋಷಕಾಂಶಗಳು ಇದರಲ್ಲಿ ಕಂಡುಬರುತ್ತವೆ.ನೆಲ್ಲಿಕಾಯಿಯನ್ನು ಆಯುರ್ವೇದದ ನಿಧಿ ಎಂದು ಕರೆಯಲಾಗುತ್ತದೆ.
ನೆಲ್ಲಿಕಾಯಿಯು ಕ್ರೋಮಿಯಂ ಎಂಬ ಖನಿಜವನ್ನು ಹೊಂದಿರುತ್ತದೆ.ಇದು ಗ್ಲೂಕೋಸ್ ಮತ್ತು ರಕ್ತದೊತ್ತಡವನ್ನು ನಿಯಂತ್ರಿಸುವಲ್ಲಿ ಪರಿಣಾಮಕಾರಿಯಾಗಿದೆ.
ಮೊದಲನೆಯದಾಗಿ, ಒಂದು ಪಾತ್ರೆಯಲ್ಲಿ 2 ಕಪ್ ನೀರು ತೆಗೆದುಕೊಂಡು ಚೆನ್ನಾಗಿ ಕುದಿಸಿ. ಅದರಲ್ಲಿ ಒಂದು ಚಮಚ ಆಮ್ಲಾ ಪುಡಿ ಮತ್ತು ಪುಡಿಮಾಡಿದ ಶುಂಠಿ ಮಿಶ್ರಣ ಮಾಡಿ. ತಾಜಾ ಪುದೀನ ಎಲೆಗಳನ್ನು ಸೇರಿಸಿ ಕೆಲವು ನಿಮಿಷ ಕುದಿಸಿ. ನಂತರ ಚಹಾವನ್ನು ಫಿಲ್ಟರ್ ಮಾಡಿ ಕುಡಿಯಿರಿ.
ಮಧುಮೇಹಿಗಳು ನೆಲ್ಲಿಕಾಯಿ ಚಹಾವನ್ನು ಕುಡಿಯಲೇಬೇಕು : ನೀವು ಮಧುಮೇಹಿಗಳಾಗಿದ್ದರೆ ನೆಲ್ಲಿಕಾಯಿ ಚಹಾ ಬಹಳ ಪ್ರಯೋಜನಕಾರಿ. ನೆಲ್ಲಿಕಾಯಿಯನ್ನು ಹಾಗೆಯೇ ತಿನ್ನುವುದು, ಕಲ್ಲು ಉಪ್ಪಿನೊಂದಿಗೆ ಬೆರೆಸಿ ತಿನ್ನುವುದು,ರುಬ್ಬಿಕೊಂಡು ಚಟ್ನಿ ಮಾಡಿ ಸೇವಿಸುವುದು ನೆಲ್ಲಿಕಾಯಿ ಜ್ಯೂಸ್ ಮಾಡಿ ಕುಡಿಯುವುದು ಸಹ ಪ್ರಯೋಜನಕಾರಿಯಾಗಿರುತ್ತದೆ.
(ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಬೇಕು. ZEE NEWS ಅದನ್ನು ಖಚಿತಪಡಿಸುವುದಿಲ್ಲ.)