Morning Dream Meaning: ಬ್ರಹ್ಮ ಮುಹೂರ್ತದಲ್ಲಿ ಕಾಣುವ ಈ ಕನಸುಗಳಿಂದ ಸಿಗುತ್ತೆ ಸಕತ್ ಲಾಭ

Thu, 25 Aug 2022-6:01 pm,

1. ನಗುತ್ತ-ಆಟವಾಡಿಕೊಂಡಿರುವ ಮಗು - ಜೋತಿಷ್ಯ ಶಾಸ್ತ್ರದಲ್ಲಿ ಹಲವು ರೀತಿಯ ಕನಸುಗಳ ಕುರಿತು ಹೇಳಲಾಗಿದೆ. ಇವು ವ್ಯಕ್ತಿಯ ಭವಿಷ್ಯದ ಕುರಿತು ಸಂಕೇತಗಳನ್ನು ನೀಡುತ್ತವೆ. ಅಂತಹುದೇ ಒಂದು ಕನಸು ಎಂದರೆ ಅದು, ಆಟವಾಡಿಕೊಂಡು ಮಲಗಿರುವ ಮಗು ನೋಡುವುದು. ಇಂತಹ ಕನಸು ನಿಮಗೂ ಬಿದ್ದರೆ, ನಿಮ್ಮ ಮನೆಗೆ ಶೀಘ್ರದಲ್ಲಿಯೇ ತಾಯಿ ಲಕ್ಷ್ಮಿಯ ಆಗಮನವಾಗಲಿದೆ ಎಂದರ್ಥ. 

2. ನಿಮ್ಮಷ್ಟಕ್ಕೆ ನೀವೇ ನದಿಯಲ್ಲಿ ಸ್ನಾನ ಮಾಡುವುದು - ಬ್ರಹ್ಮ ಮುಹೂರ್ತದಲ್ಲಿ ನಿಮ್ಮನ್ನು ನೀವೇ ನದಿಯಲ್ಲಿ ಸ್ನಾನಮಾಡುವುದನ್ನು ನೋಡುವುದು ಕೂಡ ಒಂದು ಶುಭ ಸಂಕೇತದ ಕನಸಾಗಿದೆ. ಈ ಕನಸನ್ನು ಅತ್ಯಂತ ಶುಭಫಲದಾಯಿ ಎಂದು ಭಾವಿಸಲಾಗಿದೆ. ಯಾವುದೇ ಒಂದು ಜಾತಕದ ವ್ಯಕ್ತಿಗೆ ಇಂತಹ ಕನಸು ಬಿದ್ದರೆ, ಆ ವ್ಯಕ್ತಿ ಯಾರಿಗಾದರು ಸಾಲ ನೀಡಿದ್ದರೆ, ಅದು ಶೀಘ್ರದಲ್ಲಿಯೇ ವ್ಯಕ್ತಿಯ ಕೈಸೇರಲಿದೆ ಎಂದರ್ಥ.

3. ನೀರಿನಿಂದ ತುಂಬಿದ ಗಡಿಗೆ - ಕನಸಿನಲ್ಲಿ ನೀರಿನಿಂದ ತುಂಬಿದ ಗಡಿಗೆ ಅಥವಾ ಕಲಶ ಕಾಣುವುದು ಕೂಡ ಶುಭ ಎನ್ನಲಾಗಿದೆ. ವ್ಯಕ್ತಿಗೆ ಭಾರಿ ಧನಲಾಭವಾಗಲಿದೆ ಎಂಬುದು ಇದರ ಅರ್ಥ. ಅದರಲ್ಲಿಯೂ ವಿಶೇಷವಾಗಿ ಈ ಮುಹೂರ್ತದಲ್ಲಿ ಮಣ್ಣಿನ ಪಾತ್ರ ಕಾಣಿಸುವುದು ಕೂಡ ಶುಭ ಸಂಕೇತವಾಗಿದೆ.

4. ಕನಸಿನಲ್ಲಿ ಹಲ್ಲು ಬೀಳುವುದನ್ನು ನೋಡುವುದು - ಒಬ್ಬ ವ್ಯಕ್ತಿಯು ಕನಸಿನಲ್ಲಿ ತನ್ನ ಹಲ್ಲುಗಳು ಬೀಳುವುದನ್ನು ನೋಡಿದರೆ, ಅದನ್ನು ಮಂಗಳಕರ ಮತ್ತು ಅದನ್ನು ಫಲಪ್ರದ ಕನಸು ಎಂದು ಪರಿಗಣಿಸಲಾಗುತ್ತದೆ. ಕನಸಿನ ಶಾಸ್ತ್ರದ ಪ್ರಕಾರ, ಅಂತಹ ಕನಸುಗಳು ವ್ಯಕ್ತಿಯು ಉದ್ಯೋಗ ಮತ್ತು ವ್ಯವಹಾರದಲ್ಲಿ ಲಾಭವನ್ನು ಪಡೆಯುತ್ತಾನೆ ಎಂಬುದನ್ನು ಸೂಚಿಸುತ್ತದೆ. ಸ್ವಪ್ನ ಶಾಸ್ತ್ರದಲ್ಲಿ ಇಂತಹ ಕನಸುಗಳನ್ನು ಮಂಗಳಕರವೆಂದು ಪರಿಗಣಿಸಲಾಗುತ್ತದೆ.  

5. ಧಾನ್ಯದ ರಾಶಿ ಕಾಣಿಸುವುದು - ಸ್ವಪ್ನ ಶಾಸ್ತ್ರದ ಪ್ರಕಾರ ಯಾವುದೇ ಒಂದು ವ್ಯಕ್ತಿಗೆ ಬೆಳಗಿನ ಜಾವದ ಕನಸಿನಲ್ಲಿ ಧಾನ್ಯದ ರಾಶಿ ಕಂಡರೆ ಅಥವಾ ತನ್ನಷ್ಟಕ್ಕೆ ತಾನೇ ಧಾನ್ಯದ ರಾಶಿಯ ಮೇಲೆ ನಿಂತಿರುವುದನ್ನು ಕಂಡೆ, ಶೀಘ್ರದಲ್ಲಿಯೇ ನಿಮಗೆ ಧನಲಾಭವಾಗಲಿದೆ ಎಂದರ್ಥ. ಒಂದು ವೇಳೆ ಇಂತಹ ಕನಸು ಕಾಣುವ ಸಂದರ್ಭದಲ್ಲಿ ಆಕಸ್ಮಿಕವಾಗಿ ಕಣ್ಣುಗಳು ತೆರೆದರೆ, ಅದು ಮತ್ತಷ್ಟು ಉತ್ತಮ ಎಂದು ಹೇಳಾಗುತ್ತದೆ. 

ZEENEWS TRENDING STORIES

By continuing to use the site, you agree to the use of cookies. You can find out more by Tapping this link