ʼಆʼ ನಟನ ಪುತ್ರನ ಜೊತೆ ಐಶ್ವರ್ಯ ಮಗಳ ಕುಚಿಕು!? 13 ವರ್ಷ ಹಿರಿಯನ ಜೊತೆ ಮುಂದೆ ನಿಂತು ಆರಾಧ್ಯ ಮದುವೆ ಮಾಡಿಸಿದ ಅಮಿತಾಬ್ ಬಚ್ಚನ್... ಫೋಟೋ ವೈರಲ್
ಸಾಮಾಜಿಕ ಮಾಧ್ಯಮದಲ್ಲಿ ಸಾಮಾನ್ಯವಾಗಿ ಸ್ಟಾರ್ ನಟರ ಅಥವಾ ಅವರ ಕುಟುಂಬಗಳಿಗೆ ಸೇರಿದ ಅನೇಕ ಫೋಟೋಗಳು ಮತ್ತು ವಿಡಿಯೋಗಳು ವೈರಲ್ ಆಗುತ್ತಲೇ ಇರುತ್ತವೆ. ಅನೇಕ ಬಾರಿ ಊಹೆಗೂ ನಿಲುಕದ ಫೋಟೋಗಳು ಮುನ್ನೆಲೆಗೆ ಬಂದಿರುತ್ತವೆ. ಅಂತಹ ಫೋಟೋಗಳಲ್ಲಿ ಅಭಿಷೇಕ್ ಬಚ್ಚನ್ ಮತ್ತು ಐಶ್ವರ್ಯಾ ರೈ ದಂಪತಿಯ ಪುತ್ರಿಯ ಫೋಟೋ ವೈರಲ್ ಆಗಿರುವುದು ಕೂಡ ಒಂದು.
ಕೆಲವೊಂದು ಬಾರಿ ಸೋಶಿಯಲ್ ಮೀಡಿಯಾ ಪೇಜ್‌ಗಳು ಅತಿರೇಕದ ಪೋಸ್ಟ್‌ಗಳನ್ನು ಮಾಡುತ್ತಿರುತ್ತವೆ. ಇದೀಗ ಅಂತಹದ್ದೇ ಪೋಸ್ಟ್ ಒಂದು ವೈರಲ್ ಆಗಿದೆ. ಅದರಲ್ಲಿ ಅಮಿತಾಭ್ ಬಚ್ಚನ್ ಅವರ ಮೊಮ್ಮಗಳು ಆರಾಧ್ಯ ಬಚ್ಚನ್ ಮತ್ತು ಶಾರುಖ್ ಖಾನ್ ಅವರ ಮಗ ಆರ್ಯನ್ ಖಾನ್ ವಿವಾಹವಾಗುತ್ತಿರುವ ಮಾರ್ಫ್ ಮಾಡಿರುವ ಫೋಟೋಗಳನ್ನು ಹರಿಬಿಡಲಾಗಿದೆ.
ಈ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದ್ದು, ಅಭಿಮಾನಿಗಳು ಕಿಡಿಕಾರಿದ್ದಾರೆ.
ಆರ್ಯನ್ ಖಾನ್ ಇತ್ತೀಚೆಗೆ ಲಾರಿಸ್ಸಾ ಬೊನೆಸಿ ಎಂಬಾಕೆ ಜೊತೆಗಿನ ಸಂಬಂಧದಿಂದಾಗಿ ಸುದ್ದಿಯಲ್ಲಿದ್ದರು. ಅದೇ ಸಮಯದಲ್ಲಿ, ಈಗ ಆರಾಧ್ಯ ಬಚ್ಚನ್ ಮತ್ತು ಆರ್ಯನ್ ಖಾನ್ ಅವರ ಕೆಲವು ಚಿತ್ರಗಳನ್ನು ರೆಡ್ಡಿಟ್‌ನ ಫ್ಯಾನ್ ಪೇಜ್ ಒಂದರಲ್ಲಿ ಹರಿದಾಡಿದೆ.
ಇಬ್ಬರು ಸ್ಟಾರ್ ಮಕ್ಕಳ ಮುಖವನ್ನು ಬಳಸಿ ಈ ಚಿತ್ರಗಳನ್ನು ಮಾಡಲಾಗಿದ್ದು, ಇದರಲ್ಲಿ ಆರಾಧ್ಯ ವಧುವಾಗಿ ಮತ್ತು ಆರ್ಯನ್ ವರನಾಗಿ ಕಾಣಿಸಿಕೊಂಡಿದ್ದಾರೆ. ಅಷ್ಟೇ ಅಲ್ಲದೆ, ಅವರಿಬ್ಬರ ಕುಟುಂಬದ ಸದಸ್ಯರು ಅಂದರೆ ಅಮಿತಾಬ್ ಬಚ್ಚನ್, ಐಶ್ವರ್ಯ ರೈ ಬಚ್ಚನ್ ಮತ್ತು ಜಯಾ ಬಚ್ಚನ್ ಕೂಡ ಇದರಲ್ಲಿ ಕಾಣಿಸಿಕೊಂಡಿದ್ದಾರೆ.
ಮತ್ತೊಂದು ಫೋಟೋವನ್ನು ಕೂಡ ಮಾರ್ಫ್ ಮಾಡಲಾಗಿದ್ದು, ಅದರಲ್ಲಿ ವಸ್ತ್ರ ವಿನ್ಯಾಸಕಾರ ಮನೀಶ್ ಮಲ್ಹೋತ್ರಾ ಫೋಟೋಗೆ ಆರ್ಯನ್ ಫೋಟೋವನ್ನು ಮಾರ್ಫ್ ಮಾಡಿ, ಆರಾಧ್ಯ ಜೊತೆ ನಿಂತಂತೆ ಮಾಡಲಾಗಿದೆ. ಜೊತೆಗೆ ಈ ಫೋಟೋದಲ್ಲಿ ನಟಿ ಐಶ್ವರ್ಯಾ ರೈ ಮತ್ತು ರೇಖಾ ಕೂಡ ಇದ್ದಾರೆ.
ಕೇವಲ 13 ವರ್ಷದ ಆರಾಧ್ಯ ಬಚ್ಚನ್ ಮತ್ತು 26 ವರ್ಷದ ಆರ್ಯನ್ ಖಾನ್ ಅವರ ಈ ಮಾರ್ಫ್ ಮಾಡಿದ ಚಿತ್ರಗಳನ್ನು ನೋಡಿ, ಸಾಮಾಜಿಕ ಮಾಧ್ಯಮದಲ್ಲಿ ಅಭಿಮಾನಿಗಳು ಕೋಪಗೊಂಡಿದ್ದಾರೆ. ಇಂತಹ ವರ್ತನೆಯನ್ನು ಕಂಡು ಜನರು ಕಾಮೆಂಟ್ ವಿಭಾಗದಲ್ಲಿ ತಮ್ಮ ಆಕ್ರೋಶವನ್ನು ಹೊರಹಾಕುತ್ತಿದ್ದಾರೆ.
ಈ ಹಿಂದೆ ಆರಾಧ್ಯ ಆರೋಗ್ಯದ ಬಗ್ಗೆ ಇದೇ ರೀತಿ ಸುಳ್ಳು ಸುದ್ದಿ ಹರಿಬಿಟ್ಟಿದ್ದ ಪೇಜ್‌ಗಳ ವಿರುದ್ಧ ಬಚ್ಚನ್ ಫ್ಯಾಮಿಲಿ ಕಾನೂನು ಕ್ರಮ ಕೈಗೊಂಡಿತ್ತು. ಇದೀಗ ಇಂತಹ ನಾಚಿಕೆಗೇಡಿನ ಕೃತ್ಯ ಎಸಗಿರುವ ಬಗ್ಗೆ ಯಾವ ರೀತಿ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದು ಕಾದುನೋಡಬೇಕಿದೆ.