ಸಂಜೆಯಾದರೇ ಸೊಳ್ಳೆ ಕಾಟವೇ.. ನಿಂಬೆ ಹಣ್ಣಿಗೆ ಇದನ್ನು ಚುಚ್ಚಿ ಮನೆ ಬಾಗಿಲಿಗೆ ಇಡಿ... ಇದರ ವಾಸನೆಗೇ ಒಂದೇ ಒಂದು ಸೊಳ್ಳೆ ಕೂಡ ಒಳಗೆ ಬರೋದಿಲ್ಲ!
ಸಂಜೆಯಾದರೆ ಸಾಕು ಸೊಳ್ಳೆಗಳ ಸೈನ್ಯವೇ ಮನೆ ಸೇರುತ್ತದೆ. 2 ನಿಮಿಷ ಬಾಗಿಲು ತೆರೆದ ತಕ್ಷಣ ನೂರಾರು ಸೊಳ್ಳೆಗಳು ಮನೆಯೊಳಗೆ ನುಗ್ಗುತ್ತವೆ.
ಸೊಳ್ಳೆಗಳನ್ನು ಹೋಗಲಾಡಿಸಲು ಮನೆಮದ್ದುಗಳನ್ನು ಬಳಸುವುದು ಉತ್ತಮ ಆಯ್ಕೆ.
ಸೊಳ್ಳೆಗಳು ಮನೆ ಸೇರದಂತೆ ತಡೆಯಲು ನೀವು ನಿಂಬೆ ಹಣ್ಣನ್ನು ಬಳಸಬಹುದು.
ನಿಂಬೆ ಹಣ್ಣಿನ ಸಹಾಯದಿಂದ ಸೊಳ್ಳೆಗಳನ್ನು ಸುಲಭವಾಗಿ ಹೋಗಲಾಡಿಸಬಹುದಾಗಿದೆ.
ನಿಂಬೆ ತುಂಡು ತೆಗೆದುಕೊಂಡು ಅದರಲ್ಲಿ 5 - 6 ಲವಂಗವನ್ನು ಚುಚ್ಚಿ. ಈ ನಿಂಬೆಹಣ್ಣನ್ನು ಮನೆಯ ಮೂಲೆಯಲ್ಲಿ ಮತ್ತು ಮನೆಯ ಬಾಗಿಲ ಬಳಿ ಇರಿಸಿ.
ಇದರ ವಾಸನೆಯಿಂದಾಗಿ ಸೊಳ್ಳೆಗಳ ಓಡಾಟ ಕಡಿಮೆಯಾಗುತ್ತದೆ. ಸೊಳ್ಳೆಗಳು ನಿಮ್ಮ ಮನೆ ಸೇರುವುದಿಲ್ಲ.
(ಗಮನಿಸಿ: ಈ ಲೇಖನವು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. zee kannada news ಇದನ್ನು ಖಚಿತಪಡಿಸುವುದಿಲ್ಲ.)